ಶಹಾಪುರ : ಸಚಿನ್ ಪಾಂಚಾಳ ಅವರ ಆತ್ಮಹತ್ಯೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ರವರ ಹೆಸರನ್ನು ಅನ್ಯತಾ ಎಳೆಯಲಾಗುತ್ತಿದೆ. ಸಚಿನ್ ರವರ ಡೆತ್ ನೋಟಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಕೂಡ ಇಲ್ಲ. ಆದರೂ ಕೂಡ ಬಿಜೆಪಿಯವರು ಪ್ರಿಯಾಂಕ ಖರ್ಗೆರವರನ್ನು ರಾಜೀನಾಮೆ ಕೇಳುತ್ತಿರುವುದು ಯಾವ ಪುರುಷಾರ್ಥಕ್ಕೆ ಎನ್ನುವುದು ಗೊತ್ತಾಗುತ್ತಿಲ್ಲ ಎಂದು ಕೆಪಿಸಿಸಿ ರಾಜ್ಯ ಸಂಯೋಜಕರಾದ ರಾಜ್ ಮೊಹಿದ್ದೀನ್ ಜಮಾದಾರ್ ದೋರನಹಳ್ಳಿ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಇಂದು ಪತ್ರಿಕ ಹೇಳಿಕೆ ನೀಡಿರುವ ಅವರು,ಸಚಿನ್ ಪಾಂಚಾಳ ಡೆತ್ ನೋಟ್ ನಲ್ಲಿ ಕೆಲವರ ಹೆಸರನ್ನು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಡೆತ್ ನೋಟ್ ನಲ್ಲಿದ್ದ ವ್ಯಕ್ತಿ ಸಚಿವರ ಆಪ್ತರಾದ ರಾಜು ಕಪನೂರ ಎನ್ನುವ ಕಾರಣಕ್ಕೆ ಸಚಿವರು ರಾಜೀನಾಮೆ ಕೊಡಬೇಕಾ?. ಬಿಜೆಪಿಯವರಿಗೆ ಪ್ರಿಯಾಂಕ್ ಖರ್ಗೆ ಅವರ ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದರು.ಪ್ರತಿಯೊಂದು ವಿಷಯಗಳಿಗೂ ರಾಜೀನಾಮೆ ಕೊಡಬೇಕು ಎಂದು ಹೇಳುತ್ತಿರುವ ಬಿಜೆಪಿಯವರಿಗೆ ಯಾವ ನೈತಿಕತೆ ಇಲ್ಲ ಎಂದರು.ಸಚಿವ ಪ್ರಿಯಾಂಕ ಖರ್ಗೆರವರು ಈಗಾಗಲೇ ಸಿಐಡಿ ತನಿಖೆಗೆ ಒಪ್ಪಿಸುವಂತೆ ಗೃಹ ಸಚಿವರಿಗೆ ತಿಳಿಸಿದ್ದಾರೆ. ತನಿಖೆಯ ನಂತರ ಸತ್ಯಾಂಶ ಹೊರ ಬರಲಿದೆ. ಈಗಾಗಲೇ ಸಚಿವ ಪ್ರಿಯಾಂಕ್ ಖರ್ಗೆ ಸ್ಪಷ್ಟಪಡಿಸಿದ್ದಾರೆ.ರಾಜ್ಯದಲ್ಲಿಯೇ ಅಭಿವೃದ್ಧಿ ಕೆಲಸವನ್ನು ಮಾಡುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.ಸರಕಾರ ರಾಜ್ಯದಲ್ಲಿ ಅಭಿವೃದ್ಧಿಪರ ಕೆಲಸ ಮಾಡುತ್ತಿದೆ.ಅದನ್ನು ಸಹಿಸಿಕೊಳ್ಳದ ಬಿಜೆಪಿಯವರು ವೃತ ಟೀಕೆ ಮಾಡುತ್ತಿದ್ದಾರೆ.ಇದನ್ನು ಸಹಿಸುವುದಿಲ್ಲ. ಬಿಜೆಪಿಯವರು ವೃತಾ ಪ್ರತಿಭಟನೆ ಮಾಡಿದರೆ ನಾವು ಕೂಡ ಪ್ರತಿಭಟನೆಗೆ ಮುಂದಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.
Post Views: 167