ಶಹಾಪುರ: ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆ ಯಲ್ಲಿ ನಡೆದ 27 ನೇ ವರ್ಷದ ಸಗರನಾಡು ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ಕಾರ್ಯಕ್ರಮದಲ್ಲಿ ಭಾಗವಹಿಸದೆ ಇರುವ ಕಾರಣ ಪೂರ್ವಭಾವಿಯಾಗಿ ಆಗಮಿಸಿ ಕ್ಷೇತ್ರದ ದರ್ಶನ ಪಡೆದು ಸಂಸ್ಥಾನ ಗದ್ದುಗೆ ವತಿಯಿಂದ ಕೊಟ್ಟ ಮಠ ಮಾನ್ಯಗಳ ಭಕ್ತರ ಸಿರಿ ಪುರಸ್ಕಾರ ವನ್ನು ಸ್ವೀಕರಿಸಿದರು.ಶಹಪುರ ತಾಲೂಕಿನಲ್ಲಿ ಬರುವ ಮಠಗಳು, ಮಂದಿರಗಳು, ಚರ್ಚ್‌ಗಳು ಸೇರಿದಂತೆ ಎಲ್ಲಾ ಸಮುದಾಯಗಳಿಗೆ ಸರಕಾರದಿಂದ ಮತ್ತು ವೈಯಕ್ತಿಕವಾಗಿ ಅನುದಾನ ನೀಡಿ ಅಭಿವೃದ್ಧಿಗೆ ಸಹಕಾರ ನೀಡಿದ ಸಲುವಾಗಿ ಈ ಪುರಸ್ಕಾರ ನೀಡಲಾಯಿತು ಎಂದು ಗದ್ದುಗೆ ವಂಶಸ್ಥರಾದ ಶರಣು ಬಿ ಗದ್ದುಗೆ ತಿಳಿಸಿದರು.
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದಿಂದ ಸಗರರ ಉತ್ಸವ ಕಾರ್ಯಕ್ರಮ ಸರಳವಾಗಿ ಮಾಡುವ ಸಲುವಾಗಿ ಸಚಿವರು ಬಾಗವಹಿಸದೆ ಇರುವ ಕಾರಣದಿಂದ ಸನ್ನಿಧಿಯಲ್ಲಿ ಪುರಸ್ಕಾರ ನೀಡಲಾಯಿತು ಎಂದು ತಿಳಿಸಿದರು. ನಗರ ಯೋಜನೆ ಪ್ರಾಧಿಕಾರ ಅದ್ಯಕ್ಷರಾದ ಸಿದ್ದಣ್ಣ ಸಿ ಆರಬೋಳ, ಬಸವರಾಜ ಹಿರೇಮಠ, ರೇವಣಸಿದ್ದಪ್ಪ ಕಲಬುರಗಿ, ಶರಣಗೌಡ ಗುಂಡಗುರ್ತಿ,ಬಸವರಾಜ ಆನೆಗುಂದಿ,ಗುರು ಕಾಮಾ,ತುಳಜರಾಮ ಬಾಸುತ್ಕರ ಗೌಡಪ್ಪಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.