ಶಹಾಪುರ:ಇಲ್ಲಿನ ಪ್ರಸಿದ್ಧ ದಾಸೋಹ ಕ್ಷೇತ್ರವಾದ ಶ್ರೀ ಚರಬಸವೇಶ್ವರ ಸಂಸ್ಥಾನ ಗದ್ದುಗೆ ವತಿಯಿಂದ ಶ್ರೀ ಚರಬಸವೇಶ್ವರ ಸಂಗೀತ ಸೇವಾ ಸಮಿತಿ ಸಾರಥ್ಯದಲ್ಲಿ 27ನೇ ವರ್ಷದ ಸಗರನಾಡು ಉತ್ಸವ ಹಾಗೂ ಸುವರ್ಣ ಕರ್ನಾಟಕ ಸಂಭ್ರಮ ಕಾರ್ಯಕ್ರಮ ಬಹಳ ಅದ್ದೂರಿಯಾಗಿ ಜರುಗಿತು. ಮಾಜಿ ಪ್ರಧಾನಿ ದಿವಂಗತ ಮನಮೋಹನ್ ಸಿಂಗ್ ಅವರಿಗೆ ನುಡಿನ ಮನ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮಕ್ಕೆ ಗದ್ದುಗೆಯ ಪೂಜ್ಯರಾದ ಶ್ರೀ ಬಸವಯ್ಯ ಸ್ವಾಮಿಗಳು ಚಾಲನೆ ನೀಡಿದರು. ಪ್ರಾರ್ಥನಾ,ನೃತ್ಯ ಬಾಲಕಿ ಹೂಗಾರ ಅವರಿಂದ ಸಂಜೆ 7 ಕ್ಕೆ ಪ್ರಾರಂಭವಾದ ಕಾರ್ಯಕ್ರಮ ರಾತ್ರಿ 12ರ ವರೆಗೆ ಬಹಳ ಅದ್ದೂರಿಯಾಗಿ ಜರುಗಿತು.ನಿಮ್ಮ ಗದ್ದುಗೆ ಮಠವು ಸರ್ವ ಸಮಾಜದ ಏಳಿಗೆಗಾಗಿ ಅಭಿವೃದ್ಧಿಗಾಗಿ ಯಾವಾಗಲೂ ಸದಾ ಸಿದ್ಧವಾಗಿದ್ದು ಕ್ಷೇತ್ರದ ಒಡೆಯನ ಆಶೀರ್ವಾದ ಎಲ್ಲರಿಗೂ ಇರುತ್ತದೆ ಎಂದು ಗದ್ದುಗೆಯ ಪೂಜ್ಯರು ಆಶೀರ್ವಚನ ನೀಡಿದರು.ಪ್ರಾಸ್ತಾವಿಕವಾಗಿ ಸಮಿತಿ ಅದ್ಯಕ್ಷರಾದ ಶರಣು ಬಿ ಗದ್ದುಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ಮರಣಾನಂತರ ಶವ ಸಂಸ್ಕಾರ ಮಾಡುವ, ಕುಣಿತೋಡುವ, ಚಪ್ಪಲಿ ಪಾಲಿಶ್ ಮಾಡುವ,ಶೌಚಾಲಯ ಸ್ವಚ್ಚತಾ ಮಾಡುವ, ಹಲಗೆ ಬಾರಿಸುವ,ಕ್ಷೌರ ಮಾಡುವ ನಾಡ ಸೇವಕರಿಗೆ ಗೌರವ ಸಲ್ಲಿಸಲಾಯಿತು.ಗದ್ದುಗೆ ಗೆ ಸೇವೆ ಸಲ್ಲಿಸಿದ ಹಾಗೂ ಅಭಾವೀಲಿಂಮ. ಸಭಾದ ತಾಲ್ಲೂಕಿನ ನೂತನ ಪದಾಧಿಕಾರಿಗಳಿಗೆ ಗೌರವಿಸಿದರು. ಮುಖ್ಯ ಅತಿಥಿಗಳಾಗಿ ವಿಶ್ವನಾಥ ರಡ್ಡಿ ದರ್ಶನಾಪುರ, ಡಾ.ಶಿವರಾಜ ದೇಶಮುಖ, ಮಹೇಶ ಆನೆಗುಂದಿ,ಡಾ.ರವೀಂದ್ರ ಹೊಸಮನಿ,ರಾಯಪ್ಪಗೌಡ ಹುಡೆದ, ಅಭಿಷೇಕ ಬಾಲಾಜಿ ಸಂತೋಷ್ ಕರ್ಕಳ್ಳಿ ಆಗಮಿಸಿದ್ದರು. ಹೆಸರಾಂತ ನಟರಾದ ಜೀ ಕನ್ನಡದ ವಾಹಿನಿಯ ಕಾಮಿಡಿ ಕಿಲಾಡಿಗಳ ಖ್ಯಾತಿ ಪ್ರವೀಣ್ಗ ಗಸ್ತಿ, ದೀಪಿಕಾಗೌಡ ವಿಶೇಷವಾಗಿ ಹಾಸ್ಯ ಸಂಜೆ ನಡೆಸಿಕೊಟ್ಟರು. ಜಾದುಗಾರ ತುಕಾರಾಂ ಜಾದುವನ್ನು ಮಾಡಿ ಮನರಂಜಿಸಿದರು,ದುಂಡಪ್ಪ ಹಾಗೂ ಮಾಂತೇಶ್ ಹುಲ್ಲೂರು ತಬಲಾ ಸಾತ್ ನೀಡಿದರು ಚಂದ್ರಶೇಖರ್ ಗೋಗಿ, ಗಾಯನ ಹಾಡಿ ಕೊಳಲು ವಾದನ ನುಡಿಸಿದರು ಸ್ಥಳೀಯ ಕಲಾವಿದರು ನೀಲಪ್ಪ ಚೌದ್ರಿ,ಬಸವರಾಜ, ಉಮೇಶ, ಶರಣು ಸೇರಿದಂತೆ ಹಲವರು ಸೊಗಸಾದ ಹಾಡುಗಳನ್ನು ಹಾಡಿ ಕೇಳುಗರ ಮನಸ್ಸಿಗೆ ಮೂದ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಹಕಾರ ನೀಡಿತ್ತು. ವೆಂಕಟೇಶ ಬೊನೇರ ಸ್ವಾಗತಿಸಿದರು. ಮಹೇಶ್ ಪತ್ತಾರ ದೋರನಳ್ಳಿ ನಿರೂಪಣೆ ಮಾಡಿದರು. ರಾಘವೇಂದ್ರ ಪತ್ತಾರ ವಂದಿಸಿದರು.
Post Views: 50