ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಗೆ ಅವಹೇಳನ ಪದ ಬಳಸಿದ ಸಿಟಿ.ರವಿ ಕ್ಷಮೆಯಾಚಿಸದಿದ್ದಾರೆ ಹೋರಾಟ

ಬೆಂಗಳೂರು :- ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆಯ ಜನಪ್ರಿಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬಗ್ಗೆ ಅವಹೇಳನ ಪದ ಬಳಸಿದ ವಿಧಾನ ಪರಿಷತ್ ಸದಸ್ಯರು ಸಿ.ಟಿ.ರವಿ ಯವರು ಬಹಿರಂಗವಾಗಿ ಕ್ಷಮೆಯಾಚಿಸಬೇಕು. ಎಂದು ಕರ್ನಾಟಕ ಅಹಿಂದ ಜನ ಸಂಘಟನೆಯ ರಾಜ್ಯಧ್ಯಕ್ಷರು ಅಯ್ಯಪ್ಪಗೌಡ ಆಗ್ರಹಿಸಿದ್ದಾರೆ.ಬಿಜೆಪಿ ಯವರು ಮಹಿಳೆಯರು ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು.ತಕ್ಷಣವೇ ವಿಧಾನ ಪರಿಷತ್ ಸದಸ್ಯರು ಸಿಟಿ.ರವಿ ಯವರು ಕ್ಷಮೆಯಾಚಿಸದಿದ್ದಾರೆ ಕರ್ನಾಟಕ ಅಹಿಂದ ಜನ ಸಂಘಟನೆಯಿಂದ ಬೃಹತ್ ಮಟ್ಟದಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ತಿಳಿಸಿದರು.