ಬೆಳಗಾವಿ ಅಧಿವೇಶನದಲ್ಲಿ ಕುರುಬರ ಅಭಿವೃದ್ಧಿ ನಿಗಮ ಘೋಷಣೆ ಮಾಡುವಂತೆ ಗಿರೀಶ್ ಧರ್ಮಟ್ಟಿ ರವರಿಂದಸಿಎಂ ಸಿದ್ದರಾಮಯ್ಯಗೆ ಮನವಿ 

ಬೆಂಗಳೂರು, :– ರಾಜ್ಯದ ಜನಪ್ರಿಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಕುರುಬರ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿ ಶೀಘ್ರವೇ ಘೋಷಣೆ ಮಾಡಬೇಕೆಂದು ಕರ್ನಾಟಕ ಅಹಿಂದ ಜನ ಸಂಘಟನೆಯ ಯುವ ಘಟಕದ ರಾಜ್ಯಧ್ಯಕ್ಷರು ಗಿರೀಶ್ ಶಿವಪ್ಪ ಧರ್ಮಟ್ಟಿ ರವರು ಮುಖ್ಯಮಂತ್ರಿಗಳು ಸಿದ್ದರಾಮಯ್ಯ ರವರೆಗೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಜ್ಯದಲ್ಲಿ ಕುರುಬ ಸಮುದಾಯದ ಜನರು ಇನ್ನೂ ಶೈಕ್ಷಣಿಕವಾಗಿ, ರಾಜಕೀ ಯವಾಗಿ ಆರ್ಥಿಕವಾಗಿ ಹಿಂದುಳಿ ದಿರುವುದರಿಂದ ಸಮುದಾಯದ
ಜನರು ಕಡು ಬಡತನದಲ್ಲಿದ್ದಾರೆ. ಹೊಟ್ಟೆ ಪಾಡಿಗಾಗಿ, ಬೆಟ್ಟ, ಗುಡ್ಡ, ದಿಣ್ಣೆಗಳಲ್ಲಿ ಹಗಲು ರಾತ್ರಿ ಹುಳು ಹುಪ್ಪಡಿ, ಎನ್ನದೇ ಕುರಿ,ಮೇಕೆಗಳ ಜೊತೆ ಕುರಿಗಾಹಿಗಳು ಕುಟುಂಬದ ಚಿಕ್ಕ, ಚಿಕ್ಕ ಮಕ್ಕಳೊಂದಿಗೆ ಇನ್ನೂ ಅಲೆಮಾರಿ ಜೀವನ ಸಾಗಿಸುತ್ತಿದ್ದಾರೆ. ಸಿಗಬೇಕಾದ
ಸರಕಾರದ ಸೌಲಭ್ಯ ಗಳಿಂದ ವಂಚಿತಕೊಂಡಿದ್ದಾರೆ ಎಂದು ತಿಳಿಸಿದರು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಬಹಳಷ್ಟು ಕಡೆ ಕುರಿಗಾರರಿಗೆ ದೌರ್ಜನ್ಯಗಳು ನಡೆಯುತ್ತಿವೆ. ಕುರಿಗಾಹಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕು. ಆಕಸ್ಮಿಕ ವಾಗಿ ಕುರಿ ಮೃತಪಟ್ಟರೆ ನೊಂದ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ನೀಡಬೇಕು. ರಾಜ್ಯದ ಪ್ರತಿ ಹೋಬಳಿಯಲ್ಲಿ ಕನಕದಾಸ, ಸಂಗೊಳ್ಳಿ ರಾಯಣ್ಣ ಸಮುದಾಯದ ಭವನ ಗಳನ್ನು ಸರ್ಕಾರ ನಿರ್ಮಾಣ ಮಾಡ ಬೇಕು. ಈಗಾಗಲೇ ವಿವಿಧ ಅಭಿವೃದ್ಧಿ ನಿಗಮಗಳನ್ನು ಸರ್ಕಾರ ರಚನೆ

ಮಾಡಿದೆ. ನಮ್ಮ ಸಮುದಾ ಯವನ್ನು ಸರ್ಕಾರ ಕಡೆಗಣಿಸಿದೆ. ಕುರುಬರ ಅಭಿವೃದ್ಧಿಗಾಗಿ ಹೊಸ ನಿಗಮ ರಚನೆ ಮಾಡಿ, ಶೀಘ್ರವೇ ಸರ್ಕಾರ ಆದೇಶ ಹೊರಡಿಸಿ 5000 ಕೋಟಿ ಅನುದಾ ನವನ್ನುನಿಗಮಕ್ಕೆ ಮುಖ್ಯಮಂತ್ರಿಗಳು ಬಿಡುಗಡೆ ಮಾಡಬೇಕು ಎಂದಿದ್ದಾರೆ.

ಕುರುಬ ಸಮುದಾಯದ ಸರ್ವ ತೋಮುಖ ಅಭಿವೃದ್ಧಿಗಾಗಿ ಮುಖ್ಯ ಮಂತ್ರಿಗಳು ಸಿದ್ದರಾಮಯ್ಯನವರು ಶೀಘ್ರದಲ್ಲೇ ಆದೇಶ ಹೊರಡಿಸಿ ಕುರುಬ ಸಮುದಾಯಕ್ಕೆ ನ್ಯಾಯ ಒದಗಿಸಿಲು ಯುವ ಹೋರಾಟಗಾರ ಗಿರೀಶ್ ಶಿವಪ್ಪ ಧರ್ಮಟ್ಟಿ ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.