ಮಹಾಶೈವ ಧರ್ಮಪೀಠದಲ್ಲಿ 105 ನೆಯ  ಶಿವೋಪಶಮನ ಕಾರ್ಯ

ದೇವದುರ್ಗ:ಧರೆಗಿಳಿದ ಕೈಲಾಸ’ ವೆಂದು ಪ್ರಸಿದ್ಧಿ ಪಡೆದ ದೇವದುರ್ಗ ತಾಲೂಕಿನ ಗಬ್ಬೂರಿನ ಮಹಾಶೈವ ಧರ್ಮಪೀಠದಲ್ಲಿ ಡಿಸೆಂಬರ್ ೧೫ ರಂದು ೧೦೫ ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರನ ಕರುಣೆಯನ್ನಾಶ್ರಯಿಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.
           ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನು ತನ್ನ ಸನ್ನಿಧಿಯನ್ನರಸಿ ಬರುವ ಭಕ್ತರ ಸರ್ವವಿಧ ಸಂಕಷ್ಟಗಳನ್ನು ಕಳೆದು ಭಕ್ತರ ಸಕಲ ಮನೋಕಾಮನೆಗಳನ್ನು ಈಡೇರಿಸುತ್ತಿರುವುದರಿಂದ ರಾಜ್ಯದ ಬೆಂಗಳೂರು,ಕೋಲಾರ ಮತ್ತು ತುಮಕೂರುಗಳಿಂದಲ್ಲದೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣಗಳಿಂದ ಇಂದು ಬಹುಸಂಖ್ಯೆಯಲ್ಲಿ ಭಕ್ತರುಗಳು ಬಂದಿದ್ದರು.
      ಮಾನ್ವಿ ತಾಲೂಕಿನ ಬಾಗಲವಾಡದ ಗಾಯತ್ರಿ ಉಪಾಸಕರಾದ ಶಿವಯ್ಯ ಸ್ವಾಮಿಗಳು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ ಪೀಠಾಧ್ಯಕ್ಷರನ್ನು ಸನ್ಮಾನಿಸಿ ‘ ನಂಬಿದ ಭಕ್ತರ ಪಾಲಿನ ಭಗವಂತರಾಗಿ ಭಕ್ತರನ್ನು ಪೊರೆಯುತ್ತಿರುವ ತಮ್ಮ ಶಿವಸೇವೆಯು ಆಧುನಿಕ ಸಮಾಜಕ್ಕೊಂದು ಹೊಸಸ್ಫೂರ್ತಿಯಾಗಿದೆ’ ಎಂದು ಪೀಠಾಧ್ಯಕ್ಷರನ್ನು ಅಭಿನಂದಿಸಿದರು.ಇಂದಿನ ದಾಸೋಹಸೇವೆ ಸಲ್ಲಿಸಿದ ಬಾಬುಗೌಡ ಯಾದವ್ ಸುಲ್ತಾನಪುರ ಅವರನ್ನು ಪೀಠಾಧ್ಯಕ್ಷರು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿದರು.

         ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ವಾರ್ತಾಧಿಕಾರಿ ಬಸವರಾಜ ಕರೆಗಾರ,ಮೂಲ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಖಾಜನಗೌಡ ಅಬ್ಕಾರಿ,ವೀರೇಶ ಯಾದವ್,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ, ಅಯ್ಯಾಳಪ್ಪ ಹಿರೇದಿನ್ನಿ, ಶಶಿಕಾಂತ ಹಾಸಗೊಂಡ ಕಲ್ಬುರ್ಗಿ,ಪತ್ರಕರ್ತ ಏಳುಬಾವೆಪ್ಪಗೌಡ, ಸಿದ್ರಾಮಯ್ಯಸ್ವಾಮಿ ಹಳ್ಳಿ, ರವಿಕುಮಾರ್,ಯಲ್ಲಪ್ಪ ಕರಿಗಾರ, ಗ್ರಂಥಪಾಲಕ ಬಸವರಾಜ, ಮಂಜುನಾಥ ಕರಿಗಾರ, ಮಲ್ಲಿಕಾರ್ಜುನ ಬಂಟಗುಂಟಿ,ಸಿದ್ದಣ್ಣಪೂಜಾರಿ ಚಾಗಬಾವಿ,ವೆಂಕಟೇಶ ಮಸೀದಪುರ, ಆನಂದ ಬಾಡದ, ರಾಮಕೃಷ್ಣ ಯಾದವ್,ಶಿವಕುಮಾರ ಕರಿಗಾರ,ಬೂದಿಬಸವ ಶಾಂತಪ್ಪ ಕರಿಗಾರ,ಶಿವಕುಮಾರ ವಸ್ತಾರ ಮತ್ತು ಉದಯಕುಮಾರ ಮಡಿವಾಳ ಮೊದಲಾದವರು ಉಪಸ್ಥಿತರಿದ್ದರು.