ಶಹಾಪುರ : ಬೆಳಗಾವಿಯ ಸುವರ್ಣ ಸೌಧದ ಮುಂದೆ ಪಂಚಮಸಾಲಿ ಸಮುದಾಯದವರಿಗೆ 2ಎ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವಾಗ ರಾಜ್ಯ ಸರಕಾರ ಲಾಠಿ ಜಾರ್ಜ್ ನಡೆಸಿರುವದಕ್ಕೆ ಜಿಲ್ಲಾ ಅಖಿಲ ಭಾರತೀಯ ವೀರಶೈವ ಸಮಾಜದ ಕಾರ್ಯದರ್ಶಿ ಮಹೇಶ ಆನೇಗುಂದಿ ಖಂಡಿಸಿದ್ದಾರೆ.ಕೂಡಲ ಸಂಗಮ ಪೀಠದ ಬಸವ ಜಯ ಮತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪಂಚಮ ಸಾಲಿ ಸಮುದಾಯದವರು 2ಎ ಮೀಸಲಾತಿ ಬೇಡಿಕೆಗಾಗಿ ಆಗ್ರಹಿಸಿ ಪ್ರತಿ ಭಟನೆ ನಡೆಸುತ್ತಿದ್ದಾಗ ಪೊಲೀಸರು ಲಾಠಿ ಚಾರ್ಜ್ ಮಾಡುವ ಮೂಲಕ ಪ್ರತಿಭಟನೆ ತಡೆಯಲು ಯತ್ನಿಸುತ್ತಿರುವುದರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗುವವರೆಗೂ ಹೋರಾಟ ನಿಲ್ಲುವದಿಲ್ಲ. ಲಾಠಿ ಚಾರ್ಜ್‌ಗೆ ಹೆದರುವದಿಲ್ಲ ಕೂಡಲೆ ರಾಜ್ಯ ಸರಕಾರ ಗಮನ ಹರಿಸಿ ನ್ಯಾಯಯುತ ಬೇಡಿಕೆ ನೀಡಬೇಕೆಂದು ಒತ್ತಾಯಿಸಿದ್ದಾರೆ.