ರಾಜ್ಯ ಕುರಿ ಮತ್ತು ಮೇಕೆ ಮಹಾಮಂಡಳಿ ಅಧ್ಯಕ್ಷರಾಗಿ ರಮೇಶ್, ಉಪಾಧ್ಯಕ್ಷರಾಗಿ ಕಾಶಿಲಿಂಗ ಹುಡೇದ್ ಆಯ್ಕೆ ಹರ್ಷ

ಶಹಾಪುರ : ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳ ಅಧ್ಯಕ್ಷರಾಗಿ ಮೈಸೂರಿನ ಎಮ್. ರಮೇಶ, ಉಪಾಧ್ಯಕ್ಷರಾಗಿ ಕಾಶಿಲಿಂಗ ಹುಡೇದ್ ಆಯ್ಕೆಯಾಗಿದ್ದು,ಮಹಾ ಮಂಡಳದ ನಿರ್ದೇಶಕರಾದ ಶಾಂತಗೌಡ ನಾಗನಟಗಿ ಸೇರಿದಂತೆ ಮಹಾಮಂಡಳದ ಎಲ್ಲಾ ನಿರ್ದೇಶಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಬೈರತಿ ಸುರೇಶ್, ಯಾದಗಿರಿ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ, ವಿಧಾನ ಪರಿಷತ್ ಸದಸ್ಯರಾದ ಯತೀಂದ್ರ ಸೇರಿದಂತೆ ಇತರ ಶಾಸಕರು ಸಚಿವರ ಪ್ರತಿಫಲದ ಪರವಾಗಿ ಮಹಾಮಂಡಲದ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
 ಬೆಳಗಾವಿಯ ಅಧಿವೇಶನದಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಾಗೂ ‌ ಸಚಿವರಾದ  ಸುರೇಶ್ ಬೈರತಿ,ಸಚಿವ ಶರಣಬಸಪ್ಪಗೌಡ ದರ್ಶನಾಪುರ,ಮಾಜಿ ಸಚಿವರಾದ ಹೆಚ್.ವಿಶ್ವನಾಥ, ಬೆಂಗಳೂರಿನ ಕೆ.ಆರ್.ನಗರ ಶಾಸಕರಾದ ರವಿಶಂಕರ್, ಇತರ ಸಚಿವರು ಮತ್ತು ಶಾಸಕರಿಗೆ ಮಹಾಮಂಡಲದ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ನಿರ್ದೇಶಕರು ಸೇರಿ ಸನ್ಮಾನಿಸಿ ಗೌರವಿಸಿದರು. ಮುಖ್ಯಮಂತ್ರಿಗಳ ಕನಸಿನ ಕೂಸಾದ ಕುರಿ ಮತ್ತು ಮೇಕೆ ಮಹಾಮಂಡಳಿಯು ರಚನೆ ಮಾಡಲಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯವರ ಸಹಕಾರದಿಂದ ಮಹಾಮಂಡಳಿಯು ಉತ್ತಮವಾಗಿ ಕಾರ್ಯನಿರ್ವಹಿಸಲಿದ್ದು ಅತಿ ಹೆಚ್ಚಿನ ಅನುದಾನ ಒದಗಿಸಿಕೊಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ನಿರ್ದೇಶಕರು ತಿಳಿಸಿದ್ದಾರೆ.ಈ ಸಂದರ್ಭದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಲದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.