ಶಹಾಪುರ : ರಾಜಕೀಯ ಮುತ್ಸದ್ದಿ, ರಾಜ್ಯ ಕಂಡ ಅಪರೂಪದ ರಾಜಕಾರಣಿ, ಮುಖ್ಯಮಂತ್ರಿಗಳಾಗಿ,ರಾಜ್ಯಪಾಲರಾಗಿ, ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದ ಎಸ್ ಎಂ ಕೃಷ್ಣ ಅವರು ಇಂದು ನಮ್ಮನ್ನು ಅಗಲಿದ್ದಾರೆ. ಆದರೆ ಅವರ ಆದರ್ಶಗಳು ನಮಗೆ ದಾರಿದೀಪ ಎಂದು ರಾಜ್ಯ ಕೆಪಿಸಿಸಿ ಸಂಯೋಜಕರಾದ ರಾಜ್ ಮೊಹಿನುದ್ದೀನ್ ಜಮಾದಾರ್ ದೋರನಹಳ್ಳಿ ಸಂತಾಪ ವ್ಯಕ್ತಪಡಿಸಿದ್ದಾರೆ.
ರಾಜ್ ಮೊಹಿನುದ್ದೀನ್ ಜಮಾದಾರ್ ದೋರನಹಳ್ಳಿ
ಹೊರದೇಶದಲ್ಲಿರುವ ಬಹು ರಾಷ್ಟ್ರೀಯ ಕಂಪನಿಗಳು ಕರ್ನಾಟಕದ ಕಡೆ ಬಂಡವಾಳ ಹೂಡುವಂತೆ ಮಾಡಿದ್ದ ಎಸ್ಎಂ ಕೃಷ್ಣರವರ ಕೊಡುಗೆ ಅತಿ ದೊಡ್ಡದು. ದೂರದೃಷ್ಟಿಯುಳ್ಳ ನಾಯಕ. ನಮ್ಮಂತವರಿಗೆ ಅವರ ರಾಜಕೀಯ ಆಡಳಿತದ ಶೈಲಿ ಪ್ರೇರಿತವಾದದ್ದು ಎಂದು ತಿಳಿಸಿದ್ದಾರೆ.
**********************************
ಮೇರು ವ್ಯಕ್ತಿತ್ವದ ನಾಯಕರಾದ ಎಸ್ಎಂ ಕೃಷ್ಣ ತಮ್ಮ ಸಾರ್ವಜನಿಕ ಜೀವನದಲ್ಲಿ ಎಂದು ಪರರನ್ನು ನಿಂದಿಸಲಿಲ್ಲ. ಸ್ವಚ್ಛಂದ ರಾಜಕಾರಣಿಯಾಗಿದ್ದರು.ರಾಜ್ಯದ ಅಭಿವೃದ್ಧಿಗಾಗಿ ಅಂದು ಶ್ರಮಿಸಿದ ರೀತಿ ಅಗಮ್ಯವಾದದ್ದು. ರಾಜ್ಯದಲ್ಲಿ ಅಭಿವೃದ್ಧಿ ಸೃಷ್ಟಿ ಮಾಡುವ ಮೂಲಕ ಬೆಂಗಳೂರನ್ನು ಸಿಂಗಾಪುರವನ್ನಾಗಿ ಕನಸು ಕಂಡಿದ್ದರು. ಇಂದು ಬೆಂಗಳೂರು ಐಟಿ ಬಿಟಿ ಪಟ್ಟಣವಾಗಿ ಅಭಿವೃದ್ಧಿ ಹೊಂದಿದೆ ಎಂದರೆ ಅದು ಎಸ್ಎಂ ಕೃಷ್ಣ ರವರ ಕೊಡುಗೆ ಎಂದು ಕಾಂಗ್ರೆಸ್ ಮುಖಂಡರಾದ ಬಸವರಾಜ ಅತ್ನೂರು ಸಂತಾಪ ಸೂಚಿಸುತ್ತಾ ಅವರ ವ್ಯಕ್ತಿತ್ವವನ್ನು ಮೇಲುಕು ಹಾಕಿದರು.
**********************************
ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣರವರ ನಿಧನ ರಾಜ್ಯಕ್ಕೆ ತುಂಬಲಾರದ ನಷ್ಟ. ಕೊನೆಗಾಲದಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದಿದ್ದರು. ರಾಜ್ಯದ ಅಭಿವೃದ್ಧಿಗಾಗಿ ಸದಾ ಶ್ರಮಿಸಿದ ನಾಯಕ.ಬೆಂಗಳೂರನ್ನು ತಾಂತ್ರಿಕ ಕೇಂದ್ರವನ್ನಾಗಿ ಮಾಡಬೇಕು ಎಂದು ರಾಜಧಾನಿಗೆ ಗಣನೀಯ ಕೊಡುಗೆ ನೀಡಿದ್ದರು. ಮುತ್ಸದ್ದಿ ರಾಜಕಾರಣಿಯಾದ ಎಸ್ಎಂ ಕೃಷ್ಣರವರ ಅಗಲಿಕೆಯಿಂದ ರಾಜ್ಯಕ್ಕೆ ನಷ್ಟವಾಗಿದೆ. ಅವರ ಆದರ್ಶಗಳು ರಾಜಕೀಯ ಯುವ ಪೀಳಿಗೆಗೆ ದಾರಿದೀಪ.
ಶಾಂತಗೌಡ ನಾಗನಟಗಿ ಕಾಂಗ್ರೆಸ್ ಯುವ ಮುಖಂಡ ಶಹಾಪುರ
***************************
ರಾಜ್ಯದ ಹತ್ತನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಎಸ್ಎಂ ಕೃಷ್ಣ ರವರ ಅಗಲಿಕೆ ದೇಶಕ್ಕೆ ತುಂಬಲಾರದ ನಷ್ಟ. ೨೦೨೩ರಲ್ಲಿ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮವಿಭೂಷಣ ಪಡೆದಿದ್ದರು. ರಾಜ್ಯದ ಅಭಿವೃದ್ಧಿಗಾಗಿ ಸದಾ ಶ್ರಮಿಸುತ್ತಿದ್ದ ಅವರು ಸುಶೀಕ್ಷಿತ ಮುಖ್ಯಮಂತ್ರಿಗಳಲ್ಲಿ ಒಬ್ಬರು. ಅವರ ಶಿಸ್ತಿನ ರಾಜಕಾರಣ ಯುವ ನಾಯಕರಿಗೆ ಸ್ಪೂರ್ತಿದಾಯಕ.
ಶಾಂತುಪಾಟೀಲ್ ಕಾಡಂಗೇರಾ.
ಜಿಲ್ಲಾ ಪ್ರಧಾನ ಕಾರ್ಯದರ್ಶಿ
ಕೆಪಿವೈಸಿ ಕಾಂಗ್ರೆಸ್ ಯಾದಗಿರಿ