ಮಿನಿ ವಿಧಾನಸೌಧ ನಿರ್ಮಿಸಲು ಸಚಿವರಿಂದ ಸ್ಥಳ ಪರಿಶೀಲನೆ

ಶಹಪುರ : ತಾಲೂಕಿನಲ್ಲಿ ಎಲ್ಲಾ ಇಲಾಖೆಗಳನ್ನು ಒಂದೇ ಸೂರಿನಡಿ ಕರ್ತವ್ಯ ನಿರ್ವಹಿಸುವಂತೆ ಮಾಡಲು ಮಿನಿ ವಿಧಾನಸೌಧ ನಿರ್ಮಿಸಲು ತಾಲೂಕಿನ ಆರ್ಭೋಳ ಕಲ್ಯಾಣ ಮಂಟಪದ ಎದುರುಗಡೆ ಇರುವ ಭಾಸುತ್ಕರ್ ಲೇಔಟ್ ಹಿಂದುಗಡೆಯ ಖಾಲಿ ಇರುವ ಜಾಗವನ್ನು ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ವೀಕ್ಷಿಸಿದರು. ಮಿನಿ ವಿಧಾನಸೌಧಕ್ಕೆ ಈಗಾಗಲೇ ೩೦ ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದ್ದು ರಾಷ್ಟ್ರೀಯ ಹೆದ್ದಾರಿಗೆ ಸಮೀಪದ ಸ್ಥಳವನ್ನು ನೋಡಲು ಪ್ರಯತ್ನಿಸುತ್ತಿದ್ದು, ತಾಲೂಕಿನ ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವ ದೃಷ್ಟಿಯಿಂದ ಒಳ್ಳೆಯ ಸ್ಥಳವನ್ನು ಗುರುತಿಸಬೇಕಿದೆ.