ಶಹಾಪುರ : ತಾಲೂಕಿನ ಸಗರ ಗ್ರಾಮದ ಪವಿತ್ರ ಸ್ಥಳವಾದ ಸೂಫಿ ಸರಮಸ್ತ ದರ್ಗಾಕ್ಕೆ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಭೇಟಿ ನೀಡಿ ಅಲ್ಲಿನ ಕಾಮಗಾರಿಯನ್ನು ವೀಕ್ಷಿಸಿದರು. ಕೆಕೆಆರ್ಡಿಬಿಯಲ್ಲಿ ೨೦೨೪-೨೫ ನೇ ಸಾಲಿನ ಒಂದು ಕೋಟಿ ರೂಪಾಯಿ ಅನುದಾನದ ಕಾಮಗಾರಿಯಲ್ಲಿ ಸಿಸಿ ರಸ್ತೆ ಬೀದಿ ದೀಪಗಳ ನಿರ್ವಹಣೆಯನ್ನು ಒದಗಿಸಿಕೊಡಲಾಗಿದೆ ಎಂದರು. ಕ್ಷೇತ್ರದಲ್ಲಿ ದೇವಸ್ಥಾನ ಮಠ ಸಮದಾಯ ಭವನ ಮಸೀದಿಗಳಿಗೆ ಅನುದಾನ ಒದಗಿಸಿಕೊಡಲಾಗಿದೆ.ಗ್ರಾಮೀಣ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಸಿಸಿ ರಸ್ತೆ, ರಸ್ತೆಗಳ ಡಾಂಬರೀಕರಣ ಚರಂಡಿ ನಿರ್ಮಾಣ ಸೇರಿದಂತೆ ದೇವಸ್ಥಾನಗಳಿಗೆ ಅನುದಾನ ಒದಗಿಸಲಾಗಿದೆ ಎಂದರು.ಈ ಸಂದರ್ಭದಲ್ಲಿ ಪೂಜ್ಯ ಸಜ್ಜಾದ ನಷೀನ್ ಸೈಯದ್ ಮುಜಿಬುದ್ದೀನ್ ಸಮಸ್ತ ಬಸನಗೌಡ ಸುಬೇದಾರ್ ಸಂತೋಷ ಸುಬೇದಾರ್ ,ಶಾಂತಕುಮಾರ್ ಕಾಡಂಗೇರಾ ಸಾಯಿಬಣ್ಣ ಪುರ್ಲೆ ಸೇರಿದಂತೆ ಇತರ ಮುಖಂಡರು ಇದ್ದರು.