ವೈಯಕ್ತಿಕ ಶುಚಿತ್ವ, ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಬೇಕು:ಬಸವರಾಜ ಸಜ್ಜನ

ಶಹಾಪು:ಗ್ರಾಮೀಣಾ ಪ್ರದೇಶದ ಮಹಿಳೆರಲ್ಲಿ ಸ್ವಚ್ಛತೆ, ಶುಚಿತ್ವ ಕುರಿತು ಆರೋಗ್ಯ ಕಾಳಜಿ ವಹಿಸಬೇಕಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ್ ಸಜ್ಜನ್ ಮಹಿಳೆಯರಿಗೆ ಕರೆ ನೀಡಿದರು.ಇಂದು ಹತ್ತಿಗೂಡೂರಿನಲ್ಲಿ ನಡೆದ ಋತುಚಕ್ರ ನಿರ್ವಹಣೆಯ ಮಾಹಿತಿ ಇರುವ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡುತ್ತಾ,ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ಗ್ರಾಮೀಣ ಪ್ರದೇಶದಲ್ಲಿ ಜನಜಾಗೃತಿ ಮೂಡಿಸಬೇಕಿದೆ.ಮಹಿಳೆಯರು ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುತ್ತಾ ಮತ್ತು ಅಪೌಷ್ಟಿಕ ಸಮಸ್ಯೆ ಹೋಗಲಾಡಿಸಲು ಉತ್ತಮವಾದ ಆಹಾರ ಸೇವನೆ ಮಾಡಬೇಕು.ತಮ್ಮ ತಮ್ಮ ಮನೆಯಲ್ಲಿ ಶೌಚಾಲಯವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಸ್ವಚ್ಛ ಭಾರತ ಅಭಿಯಾನದ ಜಿಲ್ಲಾ ಸಂಯೋಜಕರಾದ ಶಿವಕುಮಾರ್ ಮಾತನಾಡುತ್ತಾ,ಋತುಚಕ್ರದ ಅವಧಿಯಲ್ಲಿ ಉತ್ಪನ್ನವಾದ ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡಬೇಕು,ಟ್ಯಾಬ್ಗಳನ್ನು ಧಹಿಸಲು ಗ್ರಾ.ಪಂ.ಯ ತ್ಯಾಜ್ಯ ಘಟಕಗಳಲ್ಲಿ ಮತ್ತು ಪ್ರೌಡ ಶಾಲೆಯಲ್ಲಿ ಇನ್ಸಿನೇರೆಟರ್ ಅಳವಡಿಸಲಾಗಿದೆ.ಶಾಲಾ ಮಕ್ಕಳು ಈ ವ್ಯವಸ್ಥೆಯ ಸದ್ಭಳಿಕೆ ಮಾಡಿಕೊಳ್ಳಬೇಕು.ಮನೆಯಲ್ಲಿ ಕಸ ತೆಗೆದುಕೊಂಡು ಹೊಗಲು ಬರುವ ಗಾಡಿಯಲ್ಲಿ ತ್ಯಾಜ್ಯವನ್ನು ಮಾರ್ಕ ಮಾಡಿ ಹಾಕಬೇಕು ಎಂದು ಹೇಳಿದರು.

ಸುನಿತಾ ಸಮುದಾಯ ಆರೋಗ್ಯ ಅಧಿಕಾರಿ ಹತ್ತಿಗುಡುರ,ಋತುಚಕ್ರಮ ನಿರ್ವಹಣೆಯ ಕುರಿತು ಮಾಹಿತಿ ನೀಡಿದರು. ಅಕ್ಕನಾಗಮ್ಮ ಪಿಡಿಓ,ಅಮೃತ ದೇಸಾಯಿ ಕಾರ್ಯದರ್ಶಿ,ಅಂಗನವಾಡಿ ಕಾರ್ಯಕರ್ತೆಯರು,ನರೇಗಾ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರು,ನರೇಗಾ ಯೋಜನೆ ಸಿಬ್ಬಂದಿವರು ಭಾಗವಹಿಸಿದ್ದರು.