ಸಿಡಿಲಿನ ಬಡಿತಕ್ಕೆ ಮೃತಪಟ್ಟ ಯಶ್ವಂತ್ ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಶರಣು ತಳ್ಳಿಕೇರಿ

ಚಿತದುರ್ಗ:ಇತ್ತೀಚಿಗೆ ಸಿಡಲಿಗೆ ಬಲಿಯಾದ ಚಿತದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ದೇವಿರೆಡ್ಡಿಹಳ್ಳಿ ಗ್ರಾಮದ ಕುರಿಗಾಹಿಯಾದ ಯಶ್ವಂತ್(19) ರವರ ಮನೆಗೆ ಕುರಿ ಮತ್ತು ಉಣ್ಣೆ ಉತ್ಪಾದಕರ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ತಳ್ಳಿಕೇರಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಭಾರಿ ಮಳೆಯಿಂದ ಸಿಡಿಲಿನ ಬಡಿತಕ್ಕೆ ಯಶವಂತ್ ರವರು ಮೃತಪಟ್ಟಿದ್ದು, ನಿಗಮ ಮತ್ತು ಸರಕಾರದಿಂದ ಸಿಗುವ ಸೌಲಭ್ಯವನ್ನು ಕುರಿಗಾರರಿಗೆ ಒದಗಿಸಿಕೊಡಲಾಗುವುದು ಎಂದು ಹೇಳಿದರು.ಶರಣು ತಳ್ಳಿಕೇರಿಯವರು ವೈಯಕ್ತಿಕವಾಗಿ ಯಶವಂತ್ ಅವರಿಗೆ ಸಹಾಯಧನ ನೀಡಿದರು. ಇತ್ತೀಚಿನ ದಿನಗಳಲ್ಲಿ ಸಂಚಾರಿ ಕುರಿಗಾರರು ಸಿಡಿಲಿನ ಬಡಿತಕ್ಕೆ ಮತ್ತು ರಸ್ತೆ ಅಪಘಾತಗಳಿಗೆ ಒಳಗಾಗುತ್ತಿದ್ದು, ಸರಕಾರ ಮತ್ತು ನಿಗಮದಿಂದ ಅವರಿಗೆ ವ್ಯವಸ್ಥಿತವಾದ ವಸತಿ ಸೌಲಭ್ಯ ನೀಡಲಾಗುವುದು ಎಂದು ಹೇಳಿದರು.ಬಿಜೆಪಿ ಮಂಡಲ ಅಧ್ಯಕ್ಷರಾದ ರಾಮರೆಡ್ಡಿ,ಮೀಸೆ ಮಹಾಲಿಂಗಪ್ಪ, ಮಂಜು ಚಳ್ಳಕೆರೆ,ನಿಗಮದ ಅಧಿಕಾರಿಗಳಾದ ಡಾ. ತಿಪ್ಪೇಸ್ವಾಮಿ,ಡಾ.ರೇವಣ್ಣ,ಡಾ.ರಂಗಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶರಣು ತಳ್ಳಿಕೇರಿಯವರ ಇತರ ಸುದ್ದಿಗಳು

” ಕೊಪ್ಪಳ ಜಿಲ್ಲೆಯ ಕುಷ್ಠಗಿಯಲ್ಲಿಂದು ನೂತನ ಪೋಲಿಸ್ ಠಾಣಾ ಅಡಿಗಲ್ಲು ಕಾರ್ಯಕ್ರಮದಲ್ಲಿ ಕುಷ್ಟಗಿ ಶಾಸಕರಾದ ಅಮರೇಗೌಡ ಬಯ್ಯಾಪುರ ಜೊತೆ ಬೆಂಗಳೂರು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ತಳ್ಳಿಕೇರಿ ಪಾಲ್ಗೊಂಡರು “

 ” ರೈತ ನಾಯಕರು ಮಾಜಿ ಮುಖ್ಯಮಂತ್ರಿಗಳಾದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪನವರನ್ನು ಬೆಂಗಳೂರು ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶರಣು ತಳ್ಳಿಕೇರಿಯವರು ಭೇಟಿಮಾಡಿ,ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮದ ಇಲ್ಲಿಯವರೆಗಿನ ನಿಗಮದ  ಕಾರ್ಯ ಚಟುವಟಿಕೆಗಳ ಕೈಪಿಡಿ ನೀಡಿ ಮಾರ್ಗದರ್ಶನ ಪಡೆದರು “

About The Author