ಶಹಾಪುರ :: ವಕ್ಫ್ ಮಂಡಳಿ ವಿರುದ್ಧ ಬಿಜೆಪಿ ಪಕ್ಷ ರಾಜ್ಯಾದ್ಯಂತ ಹೋರಾಟ ಮಾಡುತ್ತಿದ್ದು ಇದೇ ಪ್ರಯುಕ್ತ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಡಿ.೦೫ ರಂದು ವಕ್ಫ್ ಮಂಡಳಿ ವಿರುದ್ಧದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಶಹಪೂರು ನಗರಕ್ಕೆ ಆಗಮಿಸುತ್ತಿದ್ದು ಅದರ ಪ್ರಯುಕ್ತ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು ಗ್ರಾಮೀಣ ಮಂಡಲದ ತಾಲೂಕು ಅಧ್ಯಕ್ಷರಾದ ತಿರುಪತಿ ಹತ್ತಿಕಟಗಿ ತಿಳಿಸಿದರು. ನಗರದ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡವರ ಮತ್ತು ರೈತರ ಜಮೀನುಗಳು ಇಂದು ವಕ್ಫ್ ಮಂಡಳಿಗೆ ನೋಂದಾವಣೆಯಾಗಿವೆ. ರೈತರ ಪಿತ್ರಾರ್ಜಿತ ಆಸ್ತಿಗಳು ಕೂಡ ವಕ್ಫ್ ಮಂಡಳಿಗೆ ಸೇರ್ಪಡೆಯಾಗಿವೆ. ಇದರ ವಿರುದ್ಧ ಬಿಜೆಪಿ ಪಕ್ಷ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದೆ.
ಯಾದಗಿರಿ ಜಿಲ್ಲೆಯಲ್ಲಿ ೧೪೬೦ ಎಕರೆ ಜಮೀನು ವಕ್ಫ್ ಮಂಡಳಿಗೆ ನೋಂದಾವಣಿಯಾಗಿದ್ದು, ಶಹಾಪುರ ನಗರದಲ್ಲಿಯೇ ಅತಿ ಹೆಚ್ಚು. ಗೋಗಿ ಗ್ರಾಮದಲ್ಲಿ ೮೦೦ ಎಕರೆ ಭೂಮಿ ವಕ್ಫ್ ಮಂಡಳಿಗೆ ನೋಂದಾವಣೆಯಾಗಿದೆ. ಇದರ ವಿರುದ್ಧ ಹೋರಾಟ ಹಮ್ಮಿಕೊಳ್ಳಲಾಗಿದ್ದು,
೧೯೭೪ರ ಗೆಜೆಟ್ ಸಂಪೂರ್ಣವಾಗಿ ರದ್ದುಪಡಿಸಿ ಅನ್ನದಾತರ ಜಮೀನುಗಳನ್ನು ಉಳಿಸಿಕೊಡಬೇಕೆಂದು ತಿಳಿಸಿದರು. ನಗರದ ಚರಬಸವೇಶ್ವರ ಕಮಾನಿ ನಿಂದ ಬಸವೇಶ್ವರ ವೃತ್ತದವರೆಗೆ ರಾಜ್ಯ ಬಿಜೆಪಿ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ,ಶಾಸಕ ಜನಾರ್ಧನರೆಡ್ಡಿ ಸೇರಿದಂತೆ ರಾಜ್ಯದ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು ಎಂದರು. ಪತ್ರಿಕಾಗೋಷ್ಠಿಯಲ್ಲಿ ನಗರ ಮಂಡಲ ಅಧ್ಯಕ್ಷರಾದ ಚಂದ್ರು ಯಾಳಗಿ, ಮಲ್ಲಿಕಾರ್ಜುನ ಕಂದಕೂರು, ಅಡಿವೆಪ್ಪ ಜಾಕ, ಬಸವರಾಜಪ್ಪ ವಿಭೂತಿಹಳ್ಳಿ, ದೇವೇಂದ್ರಪ್ಪ ಕೊನೇರಾ ರಾಜಶೇಖರ ಗೂಗಲ್ ಗ್ರಾಮೀಣ ಮಂಡಲ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದ ಮಹೇಶ್ ರಸ್ತಾಪುರ ಸಿದ್ದಯ್ಯ ಸ್ವಾಮಿ ಸೇರಿದಂತೆ ಇತರ ಪ್ರಮುಖರು ಇದ್ದರು.