ಐಡಿಎಸ್ಎಂಟಿ ಲೇಔಟ್ | ತಡೆಗೊಡೆ ಕಾಮಗಾರಿಗೆ ಸಚಿವರಿಂದ ಅಡಿಗಲ್ಲು ಪೂಜೆ | ನಾವು ಮಾಡುವ ಅಭಿವೃದ್ಧಿ ಕೆಲಸ ನಮ್ಮನ್ನು ಗುರುತಿಸುತ್ತದೆ : ಸಚಿವ ದರ್ಶನಾಪುರ

ಶಹಾಪುರ ::ನಗರದ ಬಾಪುಗೌಡ ನಗರದಲ್ಲಿನ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯ( ಐಡಿಎಸ್ಎಮ್ಟಿ) ೭ ಎಕರೆ ಲೇ ಔಟ್ ನಲ್ಲಿನ ಪಕ್ಕದ ನಾಲಾದ ತಡೆಗೋಡೆ ಕಾಮಗಾರಿ ನಿರ್ಮಾಣ ಮತ್ತು ಚರಂಡಿ ಕಾಮಗಾರಿ ನಿರ್ಮಾಣಕ್ಕಾಗಿ ಇಂದು ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಅಡಿಗಲ್ಲು ಪೂಜೆ ನೆರವೇರಿಸಿ, ಮಾತನಾಡಿದ ಅವರು, ನಾವು ಅಧಿಕಾರದಲ್ಲಿದ್ದಾಗ ನಾವು ಮಾಡುವ ಅಭಿವೃದ್ಧಿ ಕೆಲಸಗಳು ನಮ್ಮನ್ನು ನೆನಪಿನಲ್ಲಿಟ್ಟುಕೊಳ್ಳುವಂತೆ ಮಾಡುತ್ತವೆ.

ಜನಪ್ರತಿನಿಧಿಗಳಾಗಿ ಜನರ ಸೇವೆ ಮಾಡುವ ಕರ್ತವ್ಯ ನಮ್ಮದು ಎಂದು ನುಡಿದರು. ಹಳ್ಳಕ್ಕೆ ನೀರಿನ ಹರಿವು ಹೆಚ್ಚಾದಾಗ ತೊಂದರೆಯಾಗುವ ದೃಷ್ಟಿಯಿಂದ ತಡೆಗೋಡೆಯನ್ನು ನಿರ್ಮಿಸಲು ೯೯ ಲಕ್ಷ ರೂಪಾಯಿ ಹಾಗೂ ೫೦ ಲಕ್ಷ ರೂ. ಅನುದಾನದಲ್ಲಿ ಚರಂಡಿ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು. ೨೦೦೮ರಲ್ಲಿ ಬಸ್ ಡಿಪೋ ಹಿಂದುಗಡೆ ಇರುವ ಆಶ್ರಯ ಕಾಲೋನಿಯಲ್ಲಿ ೫0೯ ಜನರಿಗೆ ನಿವೇಶನ ಹಕ್ಕುಪತ್ರ ವಿತರಿಸಲಾಗಿತ್ತು ಆದರೆ ೧೩೨ ಜನ ಫಲಾನುಭವಿಗಳಿಗೆ ನಿವೇಶನ ಕೊರತೆ ಎದುರಾಗಿತ್ತು ಅಂತಹ ಫಲಾನುಭವಿಗಳಲ್ಲಿ ೭೮ ಜನರಿಗೆ ಈವರೆಗೆ ನಿವೇಶನದ ಹಕ್ಕುಪತ್ರ ವಿತರಿಸಲಾಗಿದೆ ಇಂದು ೨೯ ಜನರಿಗೆ ಹಕ್ಕುಪತ್ರ ನಿವೇಶನ ಹಕ್ಕು ಪತ್ರ ನೀಡಲಾಗುವುದು ಎಂದು ತಿಳಿಸಿದರು.ಆಶ್ರಯ ಕಾಲೋನಿಯಲ್ಲಿ ಸಿಸಿ ರಸ್ತೆ ನಿರ್ಮಾಣಕ್ಕಾಗಿ ೫೦ ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ ಎಂದರು.

ಶಹಾಪುರ ನಗರ ಇಂದು ಜನನೀಬೀಡ ಪ್ರದೇಶವಾಗಿ ಮಾರ್ಪಟ್ಟಿರುವುದರಿಂದ ರಸ್ತೆಗಳ ಅಗಲೀಕರಣ ಅತ್ಯವಶ್ಯಕವಾಗಿದೆ. ಕೆಕೆಆರ್‌ಡಿಬಿ ಯೋಜನೆ ಅಡಿಯಲ್ಲಿ ಎರಡು ಕೋಟಿ ಮಂಜೂರಾಗಿದ್ದು ಮುಖ್ಯರಸ್ತೆಯ ೧.೫ ಕೀ.ಮೀ ಎಡ ಮತ್ತು ಬಲಭಾಗದಲ್ಲಿ ನಾಲ್ಕು ಮೀಟರ್ ನಷ್ಟು ಕೆಇಬಿಯಿಂದ ಬ್ರಿಜ್ ವರೆಗೆ ನಂತರದ ದಿನಗಳಲ್ಲಿ ಭೀಮರಾಯನ ಗುಡಿಯವರಿಗೆ ರಸ್ತೆ ಅಗಲೀಕರಣ ಮಾಡಲಾಗುವುದು ಎಂದು ತಿಳಿಸಿದರು.ನಗರದಲ್ಲಿನ ಐಡಿಎಸ್‌ಎಮ್‌ಟಿ ಭೂಮಿಯನ್ನು ಗುರುತಿಸಿದ ನಗರ ಆಶ್ರಯ ಸಮಿತಿಯ ಅಧ್ಯಕ್ಷರಾದ ವಸಂತಕುಮಾರ ಮತ್ತು ಪೌರಾಯುಕ್ತರಾದ ರಮೇಶ್ ಬಡಿಗೇರ ಅವರಿಗೆ ಅಭಿನಂದನೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷರಾದ ನೆಹರುನ್ನಿಸಾ ಬೇಗಂ, ನಗರಸಭೆ ಸದಸ್ಯರಾದ ಅಮಲಪ್ಪ, ಶಿವಕುಮಾರ ತಳವಾರ,ಪೌರಾಯುಕ್ತರಾದ ರಮೇಶ್ ಬಡಿಗೇರ ನಗರ ಆಶ್ರಯ ಸಮಿತಿ ಅಧ್ಯಕ್ಷರಾದ ವಸಂತ್ ಕುಮಾರ್ ಸುರಪುರಕರ್ ಎಇಇ ನಾನಾ ಸಾಹೇಬ್ ಸೇರಿದಂತೆ ಇತರರು ಇದ್ದರು.

ಸಚಿವರ ಅಭಿವೃದ್ಧಿ ಕಾರ್ಯಗಳು.

* ೯೯ ಲಕ್ಷ ಅನುದಾನದಲ್ಲಿ ಐಡಿಎಸ್ಎಮ್ಟಿ ನಾಲಾಕ್ಕೆ ತಡೆಗೋಡೆ ನಿರ್ಮಾಣ.
* ೫೦ ಲಕ್ಷ ಅನುದಾನದಲ್ಲಿ ಚರಂಡಿ ನಿರ್ಮಾಣ
* ೪೯ ಜನರಿಗೆ ನಿವೇಶನ ಹಕ್ಕು ಪತ್ರ ವಿತರಣೆ
* ಐದು ಜನ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ
* ೧.೫ ಕೋಟಿ ಕೆಕೆಆರ್‌ಡಿಬಿ ಅನುದಾನದಲ್ಲಿ ನಗರದ ಮುಖ್ಯ ರಸ್ತೆ ಅಗಲೀಕರಣ
* ೧.೫ ಕೋಟಿ ಅನುದಾನದಲ್ಲಿ ಕನ್ಯಾಕೋಳೂರು ಅಗಸೆಯಿಂದ ಚಾಂದ್ ಪೆಟ್ರೋಲ್ ಬಂಕ್ ವರೆಗೆ ಚರಂಡಿ ನಿರ್ಮಾಣ
* ೬೪ ಲಕ್ಷ ಅನುದಾನದಲ್ಲಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ಚರಂಡಿ ನಿರ್ಮಾಣ
* ೭೫ ಲಕ್ಷ ಅನುದಾನದಲ್ಲಿ ಓಪನ್ ಜಿಮ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕೇಂದ್ರ ನಿರ್ಮಾಣ
* ೨೫ ಕೋಟಿ ಅನುದಾನದಲ್ಲಿ ಮಠ ಮಂದಿರ ಸಮುದಾಯಗಳಿಗೆ ನೀಡಿದ್ದು.
* ೩೦ ಕೋಟಿ ಅನುದಾನದಲ್ಲಿ ಮಿನಿ ವಿಧಾನಸೌಧ ನಿರ್ಮಾಣ
* ೧.೫ ಕೋಟಿ ಅನುದಾನದಲ್ಲಿ ಬ್ಯಾಡ್ಮಿಂಟನ್ ಕ್ರೀಡಾಂಗಣ ನಿರ್ಮಾಣ.