ಡಿ. ೭ರಂದು ಟೋಕಾಪುರ ಗ್ರಾಮದಲ್ಲಿ ಕನಕದಾಸರು ಮತ್ತು ಸಂಗೊಳ್ಳಿ ರಾಯಣ್ಣ ಪುತ್ತಳಿ ಅನಾವರಣ

ಶಹಾಪುರ ::ವಡಗೇರಿ ತಾಲೂಕಿನ ಟೋಕಾಪುರ ಗ್ರಾಮದಲ್ಲಿ ಡಿ. ೭ರಂದು ಭಕ್ತ ಶ್ರೇಷ್ಠ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ತಳಿ ಅನಾವರಣ ಕಾರ್ಯಕ್ರಮವಿದ್ದು ಅಂದು ಬೆಳಗ್ಗೆ ೧೦ ಗಂಟೆಗೆ ಶಹಾಪುರ ತಾಲೂಕಿನ ಬೇವಿನಹಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪುತ್ತಳಿ ಅನಾವರಣ ನಂತರ ವಡಗೇರ ತಾಲೂಕಿನ ಟೋಕಾಪುರ ಗ್ರಾಮದಲ್ಲಿ ಬೆಳಗ್ಗೆ ೧೧ ಗಂಟೆಗೆ ಭಕ್ತ ಕನಕದಾಸ ಮತ್ತು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ತಳಿ ಅನಾವರಣ ಕಾರ್ಯಕ್ರಮ ಇರುವುದೆಂದು ಶಹಪೂರ ಮತ್ತ ವಡಗೇರ ತಾಲೂಕು ಕುರುಬರ ಸಂಘದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂದಿನ ಕಾರ್ಯಕ್ರಮದಲ್ಲಿ ಪೂಜ್ಯರಾದ ಶ್ರೀ ಶ್ರೀ ಸಿದ್ದರಮನಂದಪುರಿ ಮಹಾಸ್ವಾಮಿಗಳು ಕನಕ ಗುರುಪೀಠ ತಿಂತಣಿ ಬ್ರಿಜ್ ಸೇರಿದಂತೆ ಪೂಜ್ಯರು ಹಾಗೂ ಗ್ಯಾರಂಟಿ ಯೋಜನೆಯ ರಾಜ್ಯಾಧ್ಯಕ್ಷರಾದ ಹೆಚ್.ಎಂ.ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಸೇರಿದಂತೆ ಸಂಸದರು ಶಾಸಕರು ಮಾಜಿ ಶಾಸಕರು ಹಾಗೂ ಮುಖಂಡರಾದ ಡಾ. ಭೀಮಣ್ಣ ಮೇಟಿ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಶರಬಣ್ಣ ರಸ್ತಾಪುರ, ಸಿದ್ದಣ್ಣ ಕನ್ಯೆಕೋಳೂರು, ಶಾಂತುಪಾಟೀಲ್ ಕಾಡಂಗೇರಾ, ರವಿರಾಜಪುರ, ಬಲಭೀಮ ಮಡ್ನಾಳ ಯಮನಪ್ಪ ಅಗಸ್ತ್ಯಹಾಳ ಮಲ್ಲನಗೌಡ ತಿಪ್ಪನಟಗಿ ಸೇರಿದಂತೆ ಇತರರು ಇದ್ದರು.