ಐಡಿಎಸ್ಎಮ್ಟಿ ಲೇ ಔಟ್ | 99 ಲಕ್ಷ ಅನುದಾನದಡಿ ತಡೆಗೊಡೆ ನಿರ್ಮಾಣಕ್ಕೆ ಸಚಿವರಿಂದ ಅಡಿಗಲ್ಲು ಸಮಾರಂಭ ನಾಳೆ

ಶಹಾಪುರ : ನಗರದ ಬಾಪುಗೌಡ ನಗರದ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ನಗರದ(ಐಡಿಎಸ್ಎಮ್ಟಿ) ಅಭಿವೃದ್ಧಿ ಯೋಜನೆ ಅಡಿಯಲ್ಲಿನ ಲೇ ಔಟ್ ನಲ್ಲಿ ಪಕ್ಕದಲ್ಲಿನ ಹಳ್ಳಕ್ಕೆ 99 ಲಕ್ಷ ಅನುದಾನದಡಿ ತಡೆಗೋಡೆ ನಿರ್ಮಿಸುವ ಕಾಮಗಾರಿಯನ್ನು ಇಂದು ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ಅವರು ನೆರವೇರಿಸಲಿದ್ದಾರೆ ಎಂದು ನಗರಸಭೆ ಪೌರಾಯುಕ್ತರಾದ ರಮೇಶ ಬಡಿಗೇರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಲ್ಲಿಯೇ ಐವತ್ತು ಲಕ್ಷ ರೂಪಾಯಿ ಅನುದಾನದಲ್ಲಿ ಚರಂಡಿ ನಿರ್ಮಾಣ ಕಾಮಗಾರಿಗೂ ಅಡಿಗಲ್ಲು ಸಮಾರಂಭ ನೆರವೇರಲಿದೆ ಎಂದು ಹೇಳಿದರು. ನಂತರ ವಿಕಲಚೇತನರಿಗೆ ತ್ರಿಚಕ್ರ ವಾಹನ ವಿತರಣೆ ಹಾಗೂ ಆಶ್ರಯ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ ಕಾರ್ಯಕ್ರಮವಿದೆ ಎಂದು ತಿಳಿಸಿದರು.

**************************************

ಶಹಾಪೂರ : ಕೆಲವು ದಿನಗಳ ಹಿಂದೆ
ನಗನೂರು ಗ್ರಾಮದ ಇಬ್ಬರು ಹಾಗೂ ಖಾನಾಪುರ ಗ್ರಾಮದ ಓರ್ವ ಬಾಲಕ  ಕೆರೆಯಲ್ಲಿ ಈಜಾಡಲು ಹೋಗಿ ಈಜು ಬಾರದೆ ಕೆರೆಯಲ್ಲಿ ಮೃತಪಟ್ಟಿದ್ದರು.ಅವರ ಕುಟುಂಬಕ್ಕೆ ಸರಕಾರದಿಂದ ತಲಾ ಎರಡು ಲಕ್ಷ ರೂ. ಪರಿಹಾರದ ಚೆಕ್ಕುಗಳನ್ನು  ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ತಮ್ಮ ಗೃಹ ಕಛೇರಿಯಲ್ಲಿ ಕುಟುಂಬಸ್ಥರಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಸುರಪುರ ತಹಶಿಲ್ದಾರರು ಇದ್ದರು.