ಶಹಾಪುರ; ಶಹಾಪುರ ನಗರದಲ್ಲಿ ಬಾಲಕರ ವಸತಿ ನಿಲಯಕ್ಕಾಗಿ ಐದು ಕೋಟಿ ರೂಪಾಯಿ ಮಂಜೂರಾಗಿದ್ದು ಸ್ಥಳವನ್ನು ನಿಗದಿಪಡಿಸಿ ವಸತಿ ನಿಲಯವನ್ನು ಪ್ರಾರಂಭಿಸಲಾಗುವುದು ಎಂದು ಸಚಿವರಾದ ಶರಣಬಸಪ್ಪಗೌಡ ದರ್ಶನಾಪೂರ ತಿಳಿಸಿದರು.ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ 2024-25 ನೇ ಸಾಲಿನಲ್ಲಿ ಡಿ.ದೇವರಾಜ ಅರಸು ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದಿಂದ ವಸತಿ ನಿಲಯಕ್ಕಾಗಿ ಐದು ಕೋಟಿ ರೂಪಾಯಿ ಮಂಜೂರಾಗಿದ್ದು ಅನುದಾನವನ್ನು ಶೀಘ್ರವೇ ಸದ್ಬಳಿಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರದಿಂದ ಬಡ ವಿದ್ಯಾರ್ಥಿಗಳಿಗಾಗಿ ಒಟ್ಟು 150 ವಸತಿ ನಿಲಯಗಳು ಮಂಜೂರಾಗಿವೆ. ಯಾದಗಿರಿ ಜಿಲ್ಲೆಗೆ 2 ವಸತಿ ನಿಲಯಗಳು ಮಂಜುರಾಗಿದ್ದು, ಅದರಲ್ಲಿ ಶಹಾಪುರಕ್ಕೆ ಒಂದು ವಸತಿ ನಿಲಯವು ಮಂಜುರಾಗಿದೆ.ಶಹಪುರದಲ್ಲಿ ಹಲವು ವಸತಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು ಅವುಗಳಿಗಾಗಿ ಸರ್ಕಾರದಿಂದ ಅನುದಾನ ಒದಗಿಸಿಕೊಂಡು ಸ್ವಂತ ಕಟ್ಟಡಗಳಿಗೆ ಪರಿವರ್ತಿಸಲಾಗುವುದು ಎಂದು ತಿಳಿಸಿದರು. ಶೈಕ್ಷಣಿಕವಾಗಿ ವಿದ್ಯಾರ್ಥಿ ನಿಲಯದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ವಿದ್ಯಾಭ್ಯಾಸ ಕಲಿತು ಜಿಲ್ಲೆಗೆ ಮತ್ತು ತಾಲೂಕಿಗೆ ಒಳ್ಳೆಯ ಹೆಸರನ್ನು ತಂದು ಕೊಡಬೇಕೆಂದು ಮಕ್ಕಳಿಗೆ ಕರೆಕೊಟ್ಟರು.ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಚೆನ್ನಪ್ಪಗೌಡ ಚೌದ್ರಿ,ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ, ಶಿವರಾಜ ದೇಶಮುಖ, ಮಹೇಶ ಆನೇಗುಂದಿ, ಲಕ್ಷ್ಮಣ ಲಾಳಸಗೇರಿ ಸೇರಿದಂತೆ ಇತರರು ಇದ್ದರು.