ರಾಯಚೂರು(ಗಬ್ಬೂರು ,ನವೆಂಬರ್ ೨೪,೨೦೨೪) : ಸಂತಾನೇಶ್ವರ ಶಿವ’ ನೆಂದು ಪ್ರಸಿದ್ಧನಾಗಿರುವ ಗಬ್ಬೂರಿನ ಮಹಾಶೈವ ಧರ್ಮಪೀಠದ ಕ್ಷೇತ್ರೇಶ್ವರ ವಿಶ್ವೇಶ್ವರ ಶಿವನು ತನ್ನ ಮತ್ತೋರ್ವ ಭಕ್ತರಿಗೆ ಪುತ್ರಸಂತಾನವನ್ನು ಕರುಣಿಸುವ ಮೂಲಕ ಲೋಕೋದ್ಧಾರ ಲೀಲೆಯನ್ನು ಮೆರೆದಿದ್ದಾನೆ.ವಿಶ್ವೇಶ್ವರ ಶಿವನ ಅನುಗ್ರಹದಿಂದ ಗಂಡುಮಗುವಿನ ತಂದೆಯಾಗಿದ್ದಾರೆ ಮಹಾಶೈವ ಧರ್ಮಪೀಠದ ಭಕ್ತ ಯಲ್ಲೋಜಿ ಮರಾಠ ಅವರು.
ಯಲ್ಲೋಜಿ ಮರಾಠ ಮತ್ತು ರೇಣುಕಾ ದಂಪತಿಗಳು ಸಂತಾನಾರ್ಥಿಗಳಾಗಿ ಮಹಾಶೈವ ಧರ್ಮಪೀಠದಲ್ಲಿ 25.02.2024 ರಂದು ನಡೆದ 80 ನೆಯ ‘ ಶಿವೋಪಶಮನ ಕಾರ್ಯ’ ಕ್ಕೆ ಬಂದಿದ್ದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರ ಶಿವನನ್ನು ಪ್ರಾರ್ಥಿಸಿ ‘ ಗಂಡು ಸಂತಾನವಾಗುತ್ತದೆ’ ಎಂದು ಆಶೀರ್ವದಿಸಿ,ಶಿವಾನುಗ್ರಹವನ್ನು ಕರುಣಿಸಿದ್ದರು.ಅದರಂತೆ ನಿನ್ನೆ ಶ್ರೀಮತಿ ರೇಣುಕಾ ಮಸ್ಕಿಯ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಪ್ರಸ್ತುತ ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸುತ್ತಿದ್ದು ಇಂದು ಸರಕಾರಿ ಕಾರ್ಯನಿಮಿತ್ತವಾಗಿ ಭಾಲ್ಕಿಯಲ್ಲಿದ್ದ ಅವರನ್ನು ಯಲ್ಲೋಜಿ ಮರಾಠ ದೂರವಾಣಿಯ ಮೂಲಕ ಸಂಪರ್ಕಿಸಿ ಭಕ್ತಿಪೂರ್ವಕ ನಮನಗಳನ್ನು ಸಮರ್ಪಿಸಿದರು.