ನವೆಂಬರ್ 26 ರಂದು ಮುಕ್ಕಣ್ಣ ಕರಿಗಾರರು ರಚಿತ ಸಂವಿಧಾನ ಭಾರತದ ರಾಷ್ಟ್ರೀಯ ಗ್ರಂಥ ಕೃತಿ ಲೋಕಾರ್ಪಣೆ

ಬೀದರ್ ::ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರು ಮತ್ತು ಪ್ರಸ್ತುತ ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿಗಳು ಆಗಿರುವ ಶ್ರೀ ಮುಕ್ಕಣ್ಣ ಕರಿಗಾರ ಅವರ ” ಸಂವಿಧಾನ ಭಾರತದ ರಾಷ್ಟ್ರೀಯ ಗ್ರಂಥ” ಎನ್ನುವ ಕೃತಿಯು ಸಂವಿಧಾನ ದಿನಾಚರಣೆಯ ದಿನವಾದ ನವೆಂಬರ್ ೨೬ ರಂದು ಲೋಕಾರ್ಪಣೆಗೊಳ್ಳಲಿದೆ.ಅಂದು ಬೀದರ ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಆಯೋಜಿಸಿರುವ ಸಂವಿಧಾನ ದಿನಾಚರಣೆಯ ಕಾರ್ಯಕ್ರಮದಲ್ಲಿ ಬೀದರ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ‌.ಗಿರೀಶ ಬದೋಲೆಯವರು ಮುಕ್ಕಣ್ಣ ಕರಿಗಾರ ಅವರು ರಚಿಸಿದ ‘ ಸಂವಿಧಾನ ಭಾರತದ ರಾಷ್ಟ್ರೀಯ ಗ್ರಂಥ’ ಕೃತಿಯನ್ನು ಲೋಕಾರ್ಪಣೆ ಮಾಡಲಿದ್ದಾರೆ.ಸಂವಿಧಾನ ‘ಭಾರತದ ರಾಷ್ಟ್ರೀಯ ಗ್ರಂಥ’ ಎನ್ನುವ ಮುಕ್ಕಣ್ಣ ಕರಿಗಾರರ ಈ ಕೃತಿಯು ಸಂವಿಧಾನ ದಿನಾಚರಣೆಯ ದಿನದಂದು ಲೋಕಾರ್ಪಣೆಗೊಳ್ಳಲಿರುವುದು ಒಂದು ವಿಶೇಷವಾದರೆ ಈ ಕೃತಿಯು ಮುಕ್ಕಣ್ಣ ಕರಿಗಾರರ 50 ನೆಯ ಕೃತಿ ಎನ್ನುವುದು ಮತ್ತೊಂದು ವಿಶೇಷ.

ಕಾರ್ಯಕ್ರಮದಲ್ಲಿ ಕೃತಿಯ ಲೇಖಕ ಮತ್ತು ಬೀದರ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಮುಕ್ಕಣ್ಣ ಕರಿಗಾರ,ಮುಖ್ಯಯೋಜನಾಧಿಕಾರಿ ಕಿಶೋರಕುಮಾರ ದುಬೆ,ಮುಖ್ಯ ಲೆಕ್ಕಾಧಿಕಾರಿ ಶ್ರೀಕಾಂತ,ಡಿ ಆರ್ ಡಿ ಎ ಯೋಜನಾ ನಿರ್ದೇಶಕ ಜಗನ್ನಾಥಮೂರ್ತಿ ಉಪಸ್ಥಿತರಿರುವರು.ಜಿಲ್ಲಾ ಪಂಚಾಯತಿಯ ಎಸ್ ಬಿ ಎಂ ಸಹಾಯಕ ನೋಡಲ್ ಅಧಿಕಾರಿ ಡಾ.ಗೌತಮ ಅರಳಿ ಪುಸ್ತಕ ಪರಿಚಯ ಮಾಡಲಿದ್ದಾರೆ.ಬೀದರ ಜಿಲ್ಲಾ ಪಂಚಾಯತಿಯ ಸಹಾಯಕ ಕಾರ್ಯದರ್ಶಿಗಳಾದ ರಮೇಶನಾಥೆ,ಬೀರೇಂದ್ರ ಸಿಂಗ್,ಜಯಪ್ರಕಾಶ ಚವ್ಹಾಣ ಅವರುಗಳು ಗಬ್ಬೂರಿನ ಮಹಾಶೈವ ಪ್ರಕಾಶನದ ಪರವಾಗಿ ಕಾರ್ಯಕ್ರಮವನ್ನು ಆಯೋಜಿಸಿದ್ದು ಅಭಿವೃದ್ಧಿ ವಿಭಾಗದ ಅಧೀಕ್ಷಕ ಮಹ್ಮದ್ ಬಶೀರ ಕಾರ್ಯಕ್ರಮದ ಸ್ವಾಗತ ಮತ್ತು ಪ್ರಸ್ತಾವನೆ ಮಾಡಿದರೆ ಶ್ರೀಮತಿ ಸ್ವರೂಪಾರಾಣಿಯವರು ಪ್ರಾರ್ಥಿಸುವ ಪುಸ್ತಕ ಲೋಕಾರ್ಪಣೆಯ ಈ ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ ಪ್ರವೀಣಸ್ವಾಮಿ.