ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ (ಪ್ರಧಾನ ಕಾರ್ಯಾಲಯ ಬಳ್ಳಾರಿ) (AIKMKS ಅನುಬಂಧ)
ಹಿರಿಯ ವಕೀಲರು, ರೈತ ನಾಯಕ ದಿII ಶ್ರೀ ಮುಡಬೂಳ ಭಾಸ್ಕರರಾವ್ ರವರ ಶ್ರದ್ದಾಂಜಲಿ ಸಮರ್ಪಣಾ ಸಭೆ
ದಿನಾಂಕ 24-11-2024 ಭಾನುವಾರ ಬೆಳಿಗ್ಗೆ 10.00 ಗಂಟೆಗೆ ಸ್ಥಳ: ಕ್ರಿಷ್ಣ ಆಂಗ್ಲ ಮಾಧ್ಯಮ ಶಾಲೆ, ಭೀಮರಾಯನಗುಡಿ, ಶಹಾಪುರದಲ್ಲಿ
‘ಶ್ರೀ ಭಾಸ್ಕರರಾವ್ ಕಲ್ಯಾಣರಾವ್ ಕುಲಕರ್ಣಿಯವರು ಗ್ರಾಮ ನಾಮದ ಮೂಲಕ ‘ಶ್ರೀ ಭಾಸ್ಕರರಾವ್ ಮುಡಬೂಳೆ’ ಎಂದೇ ತಮ್ಮನ್ನು ಸಾಂಸ್ಕೃತಿಕವಾಗಿ ಗುರುತಿಸಿಕೊಂಡಿದ್ದಾರೆ. ಇವರ ಹುಟ್ಟೂರು ಯಾದಗಿರಿ ಜಿಲ್ಲೆ, ಶಹಾಪುರ ತಾಲ್ಲೂಕಿನ ಇಂದಿನ ಮುಡಬೂಳ ಗ್ರಾಮ. ಕೃಷಿ ಪ್ರಧಾನವಾದ ವೈದಿಕ ಮನೆತನದ ಕಲ್ಯಾಣರಾವ್-ರಂಗಮ್ಮ ದಂಪತಿಗಳಿಗೆ ಹದಿಮೂರು ಜನ ಮಕ್ಕಳಲ್ಲಿ ನಾಲ್ಕನೆಯವರಾಗಿ ದಿನಾಂಕ. 05.10.1943ರಲ್ಲಿ ಭಾಸ್ಕರರಾವ್ ರವರು ಜನಿಸಿದರು. ತಮ್ಮ ಪ್ರಾಥಮಿಕ-ಪ್ರೌಢ ಶಿಕ್ಷಣವನ್ನು ಮುಡಬೂಳ, ಶಹಾಪುರ ಮತ್ತು ಕಲಬುರ್ಗಿಯಲ್ಲಿ ಪೂರೈಸಿಕೊಂಡು ಪದವಿ ವ್ಯಾಸಾಂಗವನ್ನು ಹೈದರಾಬಾದ್‌ನಲ್ಲಿ ಮುಗಿಸಿಕೊಂಡು, 1968ರಲ್ಲಿ ಬೆಂಗಳೂರಿನಲ್ಲಿ ಕಾನೂನು ಪದವಿಯನ್ನು ಪಡೆದುಕೊಂಡ ವರ್ಷವೇ ಬೆಂಗಳೂರಿನ ಉಚ್ಚನ್ಯಾಯಾಲಯದಲ್ಲಿ ವಕೀಲ ವೃತ್ತಿಯನ್ನು ಆರಂಭಿಸುತ್ತಾರೆ. ಆದರೆ ಕಾರಣಾಂತರಗಳಿಂದ 1970ರಲ್ಲಿ ಮರಳಿ ಮುಡಬೂಳಕ್ಕೆ ಬಂದು ಸುರಪುರದಲ್ಲಿ ವಕೀಲ ವೃತ್ತಿಯನ್ನು ಮುಂದುವರೆಸುತ್ತಾರೆ. 1980ರ ಅವಧಿಯಲ್ಲಿ ಶಹಾಪುರದಲ್ಲಿ ನ್ಯಾಯಾಲಯ ಆರಂಭವಾದ ನಂತರ ತಮ್ಮ ವಕೀಲ ವೃತ್ತಿಯನ್ನು ಶಹಾಪುರಕ್ಕೆ ಸ್ಥಳಾಂತರಿಸಿಕೊಳ್ಳುತ್ತಾರೆ. ಅಪಾರವಾದ ಕಾನೂನು ಜ್ಞಾನ, ಅಭಿವ್ಯಕ್ತಿ ಕೌಶಲ್ಯ, ವೃತ್ತಿನಿಋಣತೆ, ಚಾಣಾಕ್ಷಮತಿತ್ವ, ಜನಾನುರಾಗಿಯಾಗಿ ವೃತ್ತಿ ಗೌರವ ಬೆಳೆಸಿಕೊಂಡು ಬಂದ ಕಾರಣಕ್ಕಾಗಿ ನಾಡಿನ ನ್ಯಾಯವಾದಿಗಳಲ್ಲಿ ಪ್ರಸಿದ್ಧಿಯನ್ನು ಗಳಿಸಿದ್ದಾರೆ.
1964ರಲ್ಲಿ ಕೃಷ್ಣಾ ನೀರಾವರಿ ಯೋಜನೆಗೆ ಪ್ರಧಾನಮಂತ್ರಿಗಳಾಗಿದ್ದಂತಹ ಶ್ರೀ ಲಾಲಬಹದ್ದೂರ ಶಾಸ್ತ್ರಿಯವರು ಶಂಕುಸ್ಥಾಪನೆ ನೆರವೇರಿಸಿದ್ದರು. 1972ರಲ್ಲಿ ಕಂಡಂತಹ ಭೀಕರ ಕ್ಷಾಮದ ಬರಗಾಲದ ಸಂದರ್ಭದಲ್ಲಿ ಭಾಸ್ಕರರಾವ್ ರವರು ವಕೀಲ ವೃತ್ತಿಯನ್ನು ಬದಿಗಿಟ್ಟು ಹುಟ್ಟೂರಿನ ಜನತೆಗೆ ನೆರವಾಗುತ್ತಾರೆ. ರಾಷ್ಟ್ರೀಯ ಕಿಸಾನ್ ಸಂಘವನ್ನು ಕಟ್ಟಿ. ಇದರ ಮುಂದಾಳತ್ವ ವಹಿಸಿ ಸರ್ಕಾರದ ಗಮನ ಸೆಳೆಯುವಂತಹ ಹೋರಾಟಗಳನ್ನು ಹಮ್ಮಿಕೊಂಡು ಬರನಾಡಿನ ತಮ್ಮ ಊರು ಮಣ್ಣಿಗೆ ಕೃಷ್ಣ ನೀರನ್ನು ಉಣಿಸಿರುತ್ತಾರೆ.
2010 ರಲ್ಲಿ ‘ದಕ್ಷಿಣದ ಗಂಗೆ-ಕೃಷ್ಣ’ ಎಂಬ ಅಪೂರ್ವ ಅನುಭವ ಕಥನ ಕೃತಿಯನ್ನು ಪ್ರಕಟಿಸಿ ಕೃತಾರ್ಥರಾಗಿದ್ದಾರೆ. ರೈತಪರ ಕಾಳಜಿಯುಳ್ಳ ಭಾಸ್ಕರರಾವ್ ಮುಡಬೂಳರು 2005ರಲ್ಲಿ ರಾಷ್ಟ್ರೀಯ ಕಿಸಾನ್ ಸಂಘವನ್ನು ಹುಟ್ಟು ಹಾಕಿ ಅದರ ಸಂಸ್ಥಾಪಕ ಅಧ್ಯಕ್ಷರಾಗಿ ಜೀವನದ ಕೊನೆಯ ಘಳಿಗೆಯವೆರೆಗೂ ಕಾರ್ಯನಿರ್ವಹಿಸಿದರು. ತಾವು ವಾಸಿಸುತ್ತಿರುವ ಮನೆಗೆ ‘ಕೃಷಿ ನಿವಾಸ’ ಎಂದು ಹೆಸರು ಇಡುವುದರ ಮೂಲಕ ರೈತರ ಮೇಲಿರುವ ಪ್ರೀತಿ ಮತ್ತು ರೈತಾಪಿ ವೃತ್ತಿಯ ಮೇಲಿಟ್ಟಿರುವ ಗೌರವವನ್ನು ವ್ಯಕ್ತಪಡಿಸುತ್ತದೆ. ಆರ್.ಕೆ.ಎಸ್ ಸಂಘಟನೆಯ ಅಡಿಯಲ್ಲಿ ಹಲವಾರು ರೈತ ಹೋರಾಟಗಳನ್ನು ಬೃಹತ್ ಸಮಾವೇಶಗಳನ್ನು ಹಮ್ಮಿಕೊಂಡಿದ್ದಾರೆ. ರೈತರ ಹಿತಾಸಕ್ತಿಗೆ ಧಕ್ಕೆ ಉಂಟಾದಾಗಲೆಲ್ಲ ಇವರು ರೈತ ಚಳುವಳಿಗಳನ್ನು ನಡೆಸುವ ಮೂಲಕ ರೈತಪರ ಕಾಳಜಿಯನ್ನು ತೋರುತ್ತಾ ಬಂದಿದ್ದಾರೆ.
ಶ್ರೀ ಭಾಸ್ಕರ್‌ರಾವ್‌ರವರ ವ್ಯಕ್ತಿತ್ವ ಕೇವಲ ವಕೀಲ ವೃತ್ತಿ-ಹೋರಾಟಕ್ಕೆ ಮಾತ್ರ ಸೀಮಿತವಾಗಿರಲಿಲ್ಲ, ಸಂಸ್ಕೃತಿ ಚಿಂತಕರು ಮತ್ತು ಬರಹಗಾರರಾಗಿಯೂ ಕೂಡ ಖ್ಯಾತಿ ಗಳಿಸಿದ್ದಾರೆ. ಇವರು ಭಾರತದ ಇತಿಹಾಸ ಮತ್ತು ಸಂಸ್ಕೃತಿಯ ಬಗೆಗೆ ಇವರಿಗಿದ್ದ ಅಪಾರವಾದ ಆಸಕ್ತಿ ಮತ್ತು ಜ್ಞಾನವನ್ನು ಹೊಂದಿದ್ದರು, ಸುರಪುರ ಸಂಸ್ಥಾನದ ಇತಿಹಾಸದ ಸಾಕಷ್ಟು ವಿಷಯಗಳನ್ನು ಸಂಗ್ರಹಿಸಿದ ಇವರು 2001ರಲ್ಲಿ ‘ಮರೆತುಹೋದ ಸುರಪುರ ಇತಿಹಾಸ’ವೆಂಬ ಮೌಲಿಕವಾದ ಕೃತಿಯನ್ನು ಪ್ರಕಟಿಸಿದ್ದಾರೆ. 2008ರಲ್ಲಿ ಭೀಮರಾಯನ ಗುಡಿಯಲ್ಲಿ ಇತಿಹಾಸ ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸಿದ್ದಾರೆ.
ಒಟ್ಟಿನಲ್ಲಿ ಶ್ರೀ ಭಾಸ್ಕರರಾವ ಮುಡಬೂಳ ಅವರು ವೃತ್ತಿಯಿಂದ ವಕೀಲರಾಗಿದ್ದರೂ ಪ್ರವೃತ್ತಿಯಿಂದ ರೈತ ಸಂಘಟನೆಯ ನೇತಾರನಾಗಿ, ಇತಿಹಾಸ-ಸಂಸ್ಕೃತಿ ಮತ್ತು ಸಾಹಿತ್ಯಗಳ ಆರಾಧಕರೂ, ಚಿಂತಕರೂ ಆಗಿದ್ದರು. ಸಾರ್ವಜನಿಕ ಜೀವನದಲ್ಲಿ ಎಲ್ಲರೊಂದಿಗೂ ಸರಳವಾಗಿ ಬೆಲೆಯುವ ಇವರು ಯಾರನ್ನೂ ಎದುರಿಸಿದ ಮತ್ತು ಯಾರಿಗೂ ಹೆದರದ ಧೀರತೆಯ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಬಂದಿದ್ದಾರೆ. ಇವರು ester servisor Hooding sarur maid eatres gross demon roariations ಬರಣಿಗೆಯ ಕೌಶಲ್ಯದ ಪ್ರತೀಕವಾಗಿ, ಅಧ್ಯಯನ ಮತ್ತು ಚಿಂತನೆಯ ಆಸಕ್ತಿಯಿಂದಾಗಿ ‘ಮರೆತು ಹೋದ ಸಾ ‘ದಕ್ಷಿಣದ ಗಂಗೆ-ಕೃಷ್ಣ’ ಎಂಬ ಎರಡು ಮೌಲಿಕ ಕೃತಿಗಳು ಕನ್ನಡ ಸಾರಸ್ವತ ಲೋಕಕ್ಕೆ ಇವರು ನೀಡಿದ ಚರಕಾಣಿಕೆಗಳಾಗಿದೆ.
ಬಿಜೆಪಿ ಸರ್ಕಾರ ತಂದ ಮೂರು ಕರಾಳ ರೈತ ವಿರೋಧಿ ಕೃಷಿ ಕಾಯ್ದೆಗಳ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ (ಎಐಕೆಎಂಕೆಎಸ್ ಅನುಬಂಧ) ಅಡಿಯಲ್ಲಿ ಹಮ್ಮಿಕೊಂಡಿದ್ದ ಚಳುವಳಿಗಳಲ್ಲಿ ಸಕ್ರಿಯವಾಗಿ ಕೊಡುಗೆ ಕೊಟ್ಟರೆ ಮಾರಾಳ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ನಡೆದ ಕರ್ನಾಟಕ ರಾಜ್ಯ ರೈತ ಸಂಘವು ಬಸವ ಕರಭಾರಿಂದ ಬಳ್ಳಾರಿಯವರೆಗೆ 443 ಕಿಲೋಮೀಟರ್ ಪಾದಯಾತ್ರೆಯ ಕಾಲ್ನಡಿಗೆ ಜಾಥಾವನ್ನು ಸ್ವಾಗತ ಮಾಡಿದ ಭಾಸ್ಕರ್ ರಾವ್ ರವರು ಶಹಾಪುರದಿಂದ ಯಾದಗಿರಿ ಜಿಲ್ಲೆ ದಾಟುವವರೆಗೂ ಹಲವು ಪ್ರದೇಶಗಳಲ್ಲಿ ಸಭೆಗಳನ್ನು ನಡೆಸಿಕೊಡುವುದರ ಮೂಲಕ ನಮ್ಮ ಸಂಘಟನೆಯೊಂದಿಗೆ ಭಾಸ್ಕರ್ ರಾವ್ ನಿಕಟ ಬಾಂಧವ್ಯದ ಬೆಸುಗೆ ಬೆಳೆಯಿತು. ತದನಂತರದ ದಿನಗಳಲ್ಲಿ ಸಂಘಟನೆಗೆ ಸಲಹೆ, ಸೂಚನೆಗಳನ್ನು ನೀಡುತ್ತಾ ಕೆಲವು ಹೋರಾಟದಲ್ಲಿ ನೇರವಾಗಿ ಭಾಗವಹಿಸಿದ್ದರು. ಎರಡು ವರ್ಷಗಳಿಂದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಅಕ್ರಮ ಬಡ್ಡಿ, ಅನ್ಯಾಯದ ಸಾಲ ವಸೂಲಾತಿ ನೀತಿಯ ವಿರುದ್ಧದ ನಡೆದ ಹೋರಾಟದಲ್ಲಿಯೂ ಭಾಗವಹಿಸಿದ್ದರು. ನಮ್ಮ ಕರ್ನಾಟಕದಲ್ಲಿ ರೈತ ಸಂಘಗಳ ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಪ್ರಾಮಾಣಿಕತೆಯಿಂದ ಹೋರಾಡುವ ಚಳುವಳಿಯ ಸಂಘಟನೆಗಳನ್ನು ಪ್ರಶಂಸಿಸುತ್ತಿದ್ದರು. ಬೆಂಗಳೂರು ಕೇಂದ್ರದಲ್ಲಿ ಹೋರಾಟಗಳನ್ನು ನಡೆಸಿದರೆ ಸಮಸ್ಯೆ ಬಗೆಹರಿಯಲು ಸಾಧ್ಯವಿಲ್ಲ.
ಸಮರ್ಥವಾದ ಹೋರಾಟಗಾರರ ಮೂಲಕ ಚಳುವಳಿಗಳನ್ನು ಕಟ್ಟುವುದರ ಮೂಲಕ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡದೇ ಹೋದರೆ ರೈತರ ಸಮಸ್ಯೆಗಳು ಬಗೆಹರಿಸುವುದಿಲ್ಲ. ಸರ್ಕಾರಗಳು ರೈತ ಜನವಿರೋಧಿ ನೀತಿಗಳನ್ನು ರೂಪಿಸಿದಾಗ ಜನರು ಮತ್ತು ರೈತರು ಐಕ್ಯತೆಯಿಂದ ಹೋರಾಡಬೇಕು ಎಂದು ಹೇಳುತ್ತಿದ್ದರು. ರೈತರ ಚಳುವಳಿಗಳು ಸ್ವತಂತ್ರವಾಗಿರಬೇಕು, ಆಳುವ ರಾಜಕೀಯ ಪಕ್ಷಗಳಿಂದ ಸ್ವತಂತ್ರವಾಗಿರಬೇಕು. ಆಗ ಮಾತ್ರ ಅವರ ಮೇಲೆ ಒತ್ತಡ ಹೇರಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಅಕ್ಟೋಬರ್ 26 ಮತ್ತು 27 ರಂದು ಬಳ್ಳಾರಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಥಮ ರಾಜ್ಯ ಸಮ್ಮೇಳನದ (ಎಐಕೆಎಂಕೆಎಸ್ ಅನುಬಂಧ) ಮುಖ್ಯ ಭಾಷಣಕಾರರಾಗಿ ಆಗಮಿಸಬೇಕಿದ್ದಂತಹ ಭಾಸ್ಕರರಾವ್ ಅವರು 24ರಂದು ನಿಧನ ಹೊಂದಿದ್ದು, ನಮಗೆ ಅತೀವ ದುಃಖ ತಂದಿದೆ. ಪ್ರೀತಿ ಪಾತ್ರರನ್ನು ಕಳೆದುಕೊಂಡ ನೋವಿನೊಂದಿಗೆ ನಾವು ಅವರನ್ನು ಸಭೆಯಲ್ಲಿ ನೆನಪಿಸಿಕೊಂಡಿದ್ದೇವೆ. ಇಂತಹ ಸಭೆಗಳನ್ನು ಯಶಸ್ವಿಗೊಳಿಸಲು ಹಾಗೂ ಸಮಾಜಮುಖಿಯಾಗಿ ರಚನಾತ್ಮಕವಾಗಿ ಶ್ರಮಿಸುತ್ತಿದ್ದಂತಹ ಭಾಸ್ಕರರಾವ್ ಅವರ ಅಗಲಿಕೆ ನಮ್ಮ ರೈತ ಸಮುದಾಯಕ್ಕೆ ತುಂಬಲಾರದ ನಷ್ಟವಾಗಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯು 24 ನವೆಂಬರ್ 2024 ರವಿವಾರದಂದು ಕೃಷ್ಣಾ ಆಂಗ್ಲ ಮಾಧ್ಯಮ ಶಾಲೆ, ಭೀಮರಾಯನಗುಡಿಯಲ್ಲಿ ಭಾಸ್ಕರರಾವ್ ರವರಿಗೆ ಸಂತಾಪ ಸೂಚಿಸುವ ಸಭೆಯನ್ನು ಹಮ್ಮಿಕೊಂಡಿರುತ್ತದೆ. ಇವರ ಜೀವಮಾನದ ಶ್ರಮ ಮತ್ತು ನಮಗೆ ನೀಡಿದ ಜವಾಬ್ದಾರಿಗಳನ್ನು ಸ್ಮರಿಸಿಕೊಳ್ಳುವ ಈ ಸಂತಾಪ ಸಭೆಗೆ ನಾಡಿನ ರೈತ, ಕೃಷಿ ಕಾರ್ಮಿಕರು, ಜನರು ಮತ್ತು ಬುದ್ಧಜೀವಿಗಳನ್ನು ಆಹ್ವಾನಿಸುತ್ತಿದ್ದೇವೆ.
ಕಾರ್ಯಕ್ರಮ ವಿವರ
ಅಧ್ಯಕ್ಷತೆ : ಶ್ರೀ ಅರವಿಂದ ಮುಡಬೋಳ, ಗ್ರಾಮ ಮುಖಂಡರು.
ಮುಖ್ಯ ಅತಿಥಿಗಳು :
ಶ್ರೀ ಶ್ರೀಕಾಂತ್ ಕುಲಕರ್ಣಿ, ಮಾಜಿ ಶಾಸಕರು, ಜಮಖಂಡಿ
ಶ್ರೀ ಸಿದ್ದು ಸವದಿ ಮಾನ್ಯ ಶಾಸಕರು, ತೇರದಾಳ
ಶ್ರೀ ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಮಾನ್ಯ ವಕೀಲರು, ಬಳ್ಳಾರಿ
ಶ್ರೀ ಪಂಚಪ್ಪ ಕಲಬುರಗಿ, ರೈತ ಮುಖಂಡರು, ಬಿಜಾಪುರ
ಶ್ರೀ ಅಶೋಕ ಹರ್ಲಾಪುರ, ರೈತ ಮುಖಂಡರು, ಸಿಂಧಿಗಿ
ಶ್ರೀ ಆನಂದ ಸವದಿ, ಪತ್ರಕರ್ತರು ಯಾದಗಿರಿ ಶ್ರೀ ಆರ್.ಚನ್ನಬಸವ, ವಕೀಲರು ಶಹಾಪುರ
ಶ್ರೀ ಮಾಧವರೆಡ್ಡಿ ಕರೂರು ರಾಜ್ಯಾಧ್ಯಕ್ಷರು ಕ.ರಾ.ರೈ.ಸಂ. ಹಾಗೂ ಹಸಿರುಸೇನೆ, ಬಳ್ಳಾರಿ