ಶಹಾಪುರ : ರಾಜ್ಯದಲ್ಲಿ ಬುಧವಾರದಂದು ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಗಳು ಗ್ಯಾರಂಟಿ ಯೋಜನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಕಾಳಜಿ ಉಪ ಚುನಾವಣೆ ಗೆಲುವಿಗೆ ಕಾರಣ ಎಂದು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಣ್ಣ ಕೈಗಾರಿಕೆ ಸಚಿವರಾದ ಶರಣಬಸಪ್ಪಗೌಡ ದರ್ಶನಪುರ ತಿಳಿಸಿದರು. ನಗರದ ಭೀಮರಾಯನ ಗುಡಿಯ ಪ್ರವಾಸಿ ಮಂದಿರದಲ್ಲಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದ ನಿಮಿತ್ತ ಕಾರ್ಯಕರ್ತರೊಟ್ಟಿಗೆ ಸಿಹಿ ಹಂಚಿ ಹರ್ಷ ವ್ಯಕ್ತಪಡಿಸಿದರು.
ಶಿಗ್ಗಾವಿ ಚನ್ನಪಟ್ಟಣ ಮತ್ತು ಸಂಡೂರು ಕ್ಷೇತ್ರಗಳಲ್ಲಿ ಮತದಾರರು ಕಾಂಗ್ರೆಸ್ ಪಕ್ಷದ ಕೈ ಹಿಡಿದಿದ್ದಾರೆ. ಬಿಜೆಪಿಯವರ ಹಲವು ಅಪ ಪ್ರಚಾರಗಳ ನಡುವೆಯೂ
ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ. ಶೋಷಿತರ ಬಡವರ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ಪ್ರತಿಯೊಂದು ಕುಟುಂಬಕ್ಕೂ ಗೃಹಲಕ್ಷ್ಮಿ ಯೋಜನೆಯಂತಹ ಮಹತ್ವದ ಯೋಜನೆಯಿಂದ ಹಲವಾರು ಬಡಜನರಿಗೆ ಉಪಯೋಗಕಾರಿಯಾಗಿದೆ. ಇದನ್ನು ಮನಗಂಡ ಮತದಾರರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ಸಚಿವರು ಶಾಸಕರು ಉಪಚುನಾವಣಾ ಕ್ಷೇತ್ರಗಳಲ್ಲಿ ಪ್ರಚಾರ ಗೈದು ಜೊತೆಗೆ ಕಾಂಗ್ರೆಸ್ ಕಾರ್ಯಕರ್ತರು ಸರ್ಕಾರದ ಅಭಿವೃದ್ಧಿಪರ ಯೋಜನೆಗಳನ್ನು ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಮನದಟ್ಟು ಮಾಡಿದ ಫಲವಾಗಿ ಕಾಂಗ್ರೆಸ್ ಗೆಲುವು ಸಾಧಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಡಾ. ಭೀಮಣ್ಣ ಮೇಟಿ ಶರಣಗೌಡ ಗುಂಡಗುರ್ತಿ, ವೀರನಗೌಡ ಮಲ್ಲಾಬಾದಿ, ಶರಬಣ್ಣ ರಸ್ತಪುರ, ಶರಣಗೌಡ ಚಾಮನಾಳ, ರಾಮಣ್ಣ ಸಾದ್ಯಪುರ, ಭೀಮರಾಯ ಜುನ್ನ ಮದ್ದರಕಿ, ಮಲ್ಲನಗೌಡ ತಿಪ್ಪನಟಗಿ, ಸಿದ್ದಣ್ಣ ಕನ್ಯೆಕೋಳೂರು, ನಿಂಗಣ್ಣ ರಾಯಚೂರು ನಾಗನಟಗಿ, ಮಲ್ಲಯ್ಯ ಟೋಕಪುರ, ಭೀಮಾಶಂಕರ ಹುಲ್ಕಲ್ ಸೇರಿದಂತೆ ಹಲವಾರು ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.