ದೇವಸ್ಥಾನಗಳಿಗೆ ಭರಪೂರ ಅನುದಾನ ನೀಡಿದ ಸಚಿವ ಶರಣಬಸಪ್ಪಗೌಡ ದರ್ಶನಾಪುರ

ಶಹಾಪುರ : ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತದೆ ಎಂದು ಪದೇ ಪದೇ ಹೇಳುತ್ತಿರುವವರಿಗೆ ಕ್ಷೇತ್ರದ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಜಿಲ್ಲೆಯ ದೇವಸ್ಥಾನಗಳಿಗೆ ಭರಪೂರ ಅನುದಾನ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಒಂದು ಧರ್ಮಕ್ಕೆ ಒಂದು ಜಾತಿಗೆ ಮೀಸಲಾದ ಪಕ್ಷವಲ್ಲ. ಎಲ್ಲಾ ಧರ್ಮಗಳನ್ನು ಒಂದುಗೂಡಿಸಿ ಎಲ್ಲಾ ಜಾತಿಯನ್ನು ಒಂದೇ ರೀತಿಯಾಗಿ ನೋಡುವ ಜಾತ್ಯತೀತ ಪಕ್ಷವೆಂಬುದನ್ನು ಸಾಬೀತುಪಡಿಸಿದೆ. ಇದಕ್ಕೆ ಯಾದಗಿರಿ ಜಿಲ್ಲೆಯಾದ್ಯಂತ ಸಚಿವರ ಶರಣಬಸಪ್ಪಗೌಡ ದರ್ಶನಪುರ ದೇವಸ್ಥಾನ ಸೇರಿದಂತೆ ಎಲ್ಲ ಧರ್ಮ ಜಾತಿಯವರ ದೇವಾಲಯಗಳಿಗೆ ಅನುದಾನ ನೀಡಿದ್ದಾರೆ. ಹಿಂದುತ್ವ ವಿರೋಧಿ ಎನ್ನುವವರಿಗೆ ಕಾಂಗ್ರೆಸ್ ಪಕ್ಷ ತಿರುಗೇಟು ನೀಡಿದೆ.

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಸಚಿವರು ಜಿಲ್ಲೆಯಾದ್ಯಂತ ವಿವಿಧ ದೇವಸ್ಥಾನಗಳಿಗೆ 10 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ.ರಾಜ್ಯದಲ್ಲಿ ಆಡಳಿತದಲ್ಲಿರುವ ಒಂದು ಪಕ್ಷ ಒಂದು ಧರ್ಮಕ್ಕೆ ಮೀಸಲಾಗಿರದೆ ಎಲ್ಲಾ ಧರ್ಮ ಜಾತಿಯವರನ್ನು ಒಂದು ಗೂಡಿಸಿಕೊಂಡು ಹೋಗಬೇಕಾಗಿರುವುದು ಕಾಂಗ್ರೆಸ್ ಪಕ್ಷ ತೋರಿಸಿ ಕೊಟ್ಟಿದೆ. ಇದಕ್ಕೆ ಯಾದಗಿರಿ ಜಿಲ್ಲೆಯಾದ್ಯಂತ ಸಚಿವರು ನೀಡಿರುವ ವಿವಿಧ ದೇವಸ್ಥಾನಗಳಿಗೆ ಅನುದಾನವೇ ಸಾಕ್ಷಿ. ಹಾಲುಮತ ಸಮಾಜ ವೀರಶೈವ ಸಮಾಜ ಕಬ್ಬಲಿಗೆ ಸಮಾಜ ಸೇರಿದಂತೆ ಹಲವು ಸಮಾಜಗಳ ದೇವಸ್ಥಾನಗಳಿಗೆ ಸಮುದಾಯ ಭವನಗಳಿಗೆ ದೇವಸ್ಥಾನಗಳಿಗೆ ಅನುದಾನವನ್ನು ನೀಡಲಾಗಿದೆ. ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿರುವ ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗುತ್ತಿಲ್ಲ ಒಂದು ಧರ್ಮಕ್ಕೆ ಕಾಂಗ್ರೆಸ್ ಪಕ್ಷ ಅತಿ ಹೆಚ್ಚಿನ ರೀತಿಯಲ್ಲಿ ತುಷ್ಟಿಕರಣ ನೀತಿ ಅನುಸರಿಸುತ್ತಿದೆ ಎನ್ನುವವರಿಗೆ ಸಚಿವರು ದೇವಸ್ಥಾನಗಳಿಗೆ ಅನುದಾನ ನೀಡಿ ನಾವೆಲ್ಲರೂ ಒಂದೇ ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲರನ್ನು ಒಂದೇ ರೀತಿಯಾಗಿ ನೋಡಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ..

ರಾಜ್ಯದ ಮುಖ್ಯಮಂತ್ರಿಗಳು ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದಾರೆ.  ಗ್ಯಾರಂಟಿಗಳ ಜೊತೆಗೆ ರಾಜ್ಯದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಲಾಗಿದೆ.ಅದರಲ್ಲೂ ವಿಶೇಷವಾಗಿ ಯಾದಗಿರಿ ಜಿಲ್ಲೆಗೆ ದೇವಸ್ಥಾನಗಳು ಸೇರಿದಂತೆ ಇತರ ಕಾರ್ಯಗಳಿಗೆ ಅನುದಾನ ನೀಡಲಾಗಿದೆ. ಒಂದು ಧರ್ಮಕ್ಕೆ ಕಾಂಗ್ರೆಸ್ ಪಕ್ಷ ಯಾವುದೇ ಕಾರಣಕ್ಕೂ ಮೀಸಲಾಗಿಲ್ಲ. ಜಾತ್ಯಾತೀತವಾಗಿ ಎಲ್ಲರನ್ನು ಒಂದೇ ರೀತಿಯಲ್ಲಿ ನೋಡಲಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ
ಬಸವರಾಜ ಅತ್ನೂರು ತಿಳಿಸಿದರು.

*******†”*****************

* ಬಸವ ಭವನ ನಿರ್ಮಾಣಕ್ಕೆ 2 ಕೋಟಿ
* ಕನಕ ಭವನ ನಿರ್ಮಾಣಕ್ಕೆ 2 ಕೋಟಿ.
  *ಶಹಾಪುರ ಶಿಕ್ಷಕ ಭವನಕ್ಕೆ ೫೦ ಲಕ್ಷ.
*ಯಾದಗಿರಿ ಸಿದ್ದಸಂಪದ ಚಾರಿಟೇಬಲ್ ಟ್ರಸ್ಟ್  ಸಾಂಸ್ಕೃತಿಕ ಭವನಕ್ಕೆ ೫೦ ಲಕ್ಷ. 
* ಹೈಯಾಳ ಲಿಂಗೇಶ್ವರ (ಹಯ್ಯಳ ಬಿ ಗ್ರಾಮ) ದೇವಸ್ಥಾನಕ್ಕೆ  ೫೦ ಲಕ್ಷ.
 * ಯಕ್ತಾಪುರ (ಸುರಪುರ ತಾಲೂಕು) ಗುತ್ತಿ ಬಸವೇಶ್ವರ ದೇವಸ್ಥಾನದ ಟ್ರಸ್ಟ್ಗೆ ೫೦ ಲಕ್ಷ.
 * ಕಲಬುರಗಿ ಅಖಿಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಅಭಿವೃದ್ದಿ ಸಂಸ್ಥೆಗೆ ೧ಕೋಟಿ ೫೦ ಲಕ್ಷ. 
 * ಸಿದ್ದರೂಢ ದೇವಸ್ಥಾನ (ನಗನೂರು ಗ್ರಾಮ) ಕಲ್ಯಾಣ ಮಂಟಪ ೭೫ ಲಕ್ಷ. 
* ಕೆಂಭಾವಿ ಪಟ್ಟಣದ ಶರಣಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಪಟ ನಿರ್ಮಾಣಕ್ಕೆ ೫೦ ಲಕ್ಷ.
 * ಭೀರಲಿಂಗೇಶ್ವರ ದೇವಸ್ಥಾನದ (ಮುಡಬೂಳ ಗ್ರಾಮ) ಸಮುದಾಯ ಭವನ ನಿರ್ಮಾಣಕ್ಕೆ ೨೫ ಲಕ್ಷ. 
* ಶಖಾಪುರ ಗ್ರಾಮದ ವಿಶ್ವರಾಧ್ಯ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕಾಗಿ ೨೫ ಲಕ್ಷ. 
* ಗೋಗಿ ಕೆ ಗ್ರಾಮದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ೫೦ ಲಕ್ಷ.
* ನಗರದ ಸಿಂಪಿ ಸಮುದಾಯ ಭವನ ನಿರ್ಮಾಣಕ್ಕೆ ೨೫ ಲಕ್ಷ.
  

About The Author