ಶಹಾಪುರ(ನ.04) :
ಗ್ರಾಮ ಪಂಚಾಯತಿ ಸದಸ್ಯರಾದ ಸಂಗಣ್ಣ ದಿಗ್ಗಿ ಮಾತನಾಡಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ನಮ್ಮ ಗ್ರಾಮಕ್ಕೆ ಜೆಸ್ಕಾಂ ಉಪಕೇಂದ್ರ ಸ್ಥಾಪನೆ, ಶಾಲೆಯ ಕಾಂಪೌಡ ನಿರ್ಮಾಣ, ಸಿದ್ಧರೂಢ ನಗರಕ್ಕೆ ವಿದ್ಯುತ್ ಕಂಬಗಳ ವ್ಯವಸ್ಥೆ, ಸಿ.ಸಿ. ರಸ್ತೆ ಮತ್ತು ಚರಂಡಿ ನಿರ್ಮಾಣ ಮುಂತಾದ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ. ೫೫ ಲಕ್ಷ ಹೆಚ್ಚುವರಿಯಾಗಿ ವಿವಿಧ ಕಾಮಗಾರಿಗಳಿಗೆ ಅನುದಾನ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ. ಊರಿನ ಹತ್ತಿರವಿರುವ ಹಳ್ಳಕ್ಕೆ ತಡೆಗೊಡೆ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದು ಹೇಳಿದ್ದಾರೆ. ಗ್ರಾಮೀಣ ಸಮಗ್ರ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸಚಿವ ದರ್ಶನಾಪುರ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿಗ್ಗಿ ಗ್ರಾಮದ ಗ್ರಾಮ ಪಂಚಾಯತಿ ಸದಸ್ಯರಾದ ಮಹಾಂತೇಶ ದೊಡ್ಡಮನಿ, ಅಶೋಕ ಪ್ಯಾಟಿ, ಮುಖಂಡರಾದ ಅಂಬಲಪ್ಪ ಮ್ಯಾಗಿನಮನಿ, ಮಹಾದೇವ ದಿಗ್ಗಿ, ಮರೆಪ್ಪ ಮರಕಲ್, ಶಿವಯ್ಯಸ್ವಾಮಿ, ಕಾಶಿನಾಥ, ಶರಣಪ್ಪ ನಾಯ್ಕೋಡಿ, ಸಂಗಪ್ಪ ಶೇಖಸಿಂದಿ, ಚಂದ್ರಶೇಖರ ಮ್ಯಾಗನಮನಿ, ಅಂಬ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.