ಮಹಾಶೈವ ಪೀಠದಲ್ಲಿ 104 ನೇ ಶಿವೋಪಶಮನ ಕಾರ್ಯ : ಮಾತುಬಾರದ ಬಾಲಕನನ್ನು ಮಾತನಾಡಿಸಿದ ಮಾತನಾಡುವ ಮಹಾದೇವ

 

ಗಬ್ಬೂರು ನವೆಂಬರ್ 03,

ನಿತ್ಯಪವಾಡಗಳಿಂದ ಸತ್ಯಶಿವನೆಂದು ಹೆಸರುಗೊಂಡಿರುವ ಗಬ್ಬೂರಿನ‌ ಮಹಾಶೈವ ಧರ್ಮಪೀಠದ ವಿಶ್ವೇಶ್ವರ ಶಿವನ ಸನ್ನಿಧಿಯಲ್ಲಿ ನವೆಂಬರ್ 03 ರಂದು ಪರಶಿವನ ‘ಅಘಟಿತಘಟಿತಲೀಲೆಯ ಪವಾಡ’ ಒಂದು ನಡೆದದ್ದಕ್ಕೆ ಭಕ್ತಗಣ ಸಾಕ್ಷಿಯಾಯಿತು.ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ನವೆಂಬರ್ 03 ರ ಆದಿತ್ಯವಾರದಂದು 104 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.

ಇಂದಿನ ‘ ಶಿವೋಪಶಮನ ಕಾರ್ಯ’ ದಲ್ಲಿ ಪಾಲ್ಗೊಂಡ ಭಕ್ತಸ್ತೋಮ ‘ಮಾತನಾಡುವ ಮಹಾದೇವ’ ನೆಂದು ಪ್ರಸಿದ್ಧನಾಗಿರುವ ವಿಶ್ವೇಶ್ವರನ ಲೀಲಾ ಪ್ರಸಂಗ ಒಂದನ್ನು ಕಣ್ತುಂಬಿಕೊಂಡರು.ತೆಲಂಗಾಣದ ಚಂದ್ರಶೇಖರ ಎನ್ನುವ ಐದುವರ್ಷದ ಮಾತುಬಾರದ ಬಾಲಕ ಮಾತನಾಡುತ್ತಿರುವ ಶಿವಕಾರುಣ್ಯ ವಿಶೇಷವು ಭಕ್ತರಲ್ಲಿ ಭಕ್ತಿತರಂಗೋನ್ಮಾದಗಳನ್ನುಂಟು ಮಾಡಿತು.ತೆಲಂಗಾಣದ ಗುರ್ಜಾಲದ ಖಾಸಗಿ ಅನುದಾನಿತ ಶಾಲೆಯ ಶಿಕ್ಷಕರಾಗಿರುವ ನಿಜಗುಣಾಚಾರಿ ಅವರ ಐದು ವರ್ಷದ ಮಗ ಚಂದ್ರಶೇಖರನಿಗೆ ಮಾತು ಬರುತ್ತಿರಲಿಲ್ಲ.ತಂದೆ ತಾಯಿಗಳು,ಮತ್ತಿತರರ ಮಾತುಗಳಿಗೆ ಪ್ರತಿಕ್ರಿಯಿಸದೆ ಸುಂದಾಗಿ ಇರುತ್ತಿದ್ದ.ಕಳೆದ ತಿಂಗಳು ನಿಜಗುಣಾಚಾರಿಯವರು ತಮ್ಮ ಮಡದಿ ಮಗನೊಂದಿಗೆ ಮಹಾಶೈವ ಧರ್ಮಪೀಠಕ್ಕೆ ಆಗಮಿಸಿ,ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರೆದುರು ತಮ್ಮ ಮಗನ ಸಮಸ್ಯೆಯನ್ನು ನಿವೇದಿಸಿದ್ದರು.ಪೀಠಾಧ್ಯಕ್ಷರು ವಿಶ್ವೇಶ್ವರ ಶಿವನನ್ನು ಪ್ರಾರ್ಥಿಸಿ ವಿಭೂತಿ ಮಂತ್ರಿಸಿಕೊಟ್ಟು ‘ಮೂರು ಶಿವೋಪಶಮನಗಳ ಕಾಲ ಶಿವನ ಸನ್ನಿಧಿಗೆ ಬನ್ನಿ,ನಿಮ್ಮ ಮಾತನಾಡುತ್ತಾನೆ’ ಎಂದು ಆಶೀರ್ವದಿಸಿದ್ದರು.ಅದರಂತೆ ಇಂದು ಎರಡನೇ ಬಾರಿ ಶಿವೋಪಶಮನಕ್ಕೆ ಮಗನನ್ನು ಕರೆದುಕೊಂಡು ಬಂದ ನಿಜಗುಣಾಚಾರಿ ದಂಪತಿಗಳು ಮಗನು ಈಗ ಮಾತನಾಡುತ್ತಿರುವುದಾಗಿಯೂ ‘ಅಪ್ಪಾ,ಅಮ್ಮಾ’ ಎಂದು ಕರೆಯುತ್ತಿರುವುದಾಗಿಯೂ ತಿಳಿಸಿದರಲ್ಲದೆ ಮಾತುಗಳಿಗೆ ಪ್ರತಿಕ್ರಿಯಿಸುತ್ತಿರುವುದಾಗಿಯೂ ಹರ್ಷವ್ಯಕ್ತಪಡಿಸಿದರು.’ಮಾತನಾಡುವ ಮಹಾದೇವ’ ನೆಂದೇ ಹೆಸರುಗೊಂಡಿರುವ ವಿಶ್ವೇಶ್ವರನ ಅಸಂಖ್ಯಾತ ಪವಾಡಗಳಲ್ಲಿ ಇದೂ ಒಂದಷ್ಟೆ.ಬಾಲಕ ಚಂದ್ರಶೇಖರನು ಅಪ್ಪ,ಅಮ್ಮ ಎನ್ನುತ್ತ ಲವಲವಿಕೆಯಿಂದ ಓಡಾಡುತ್ತಿರುವುದನ್ನು ಭಕ್ತರು ಗಮನಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ, ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಶರಣಗೌಡ ಮಾಲಿಪಾಟೀಲ್ ಹೊನ್ನಟಗಿ,ಸಿದ್ರಾಮಯ್ಯಸ್ವಾಮಿ ಹಳ್ಳಿ, ಶರಣಪ್ಪ ಬೂದಿನಾಳ,ವಿಶ್ವನಾಥ,ವಿರುಪಣಗೌಡ ಮಾಲಿಪಾಟೀಲ್ ಹೊನ್ನಟಗಿ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಯಲ್ಲಪ್ಪ ಕರಿಗಾರ,ಉದಯಕುಮಾರ ಮಡಿವಾಳ,ಪತ್ರಕರ್ತ ಏಳುಬಾವೆಪ್ಪ ಗೌಡ, ಆಂಜನೇಯ ನಾಯಕ್ ಮಲದಕಲ್,ಪರಶುರಾಮ ಜಡೇರ ಖಾನಾಪುರ,ರಂಗನಾಥ ಮಸೀದಪುರ,ಸಿದ್ದಣ್ಣಪೂಜಾರಿ ಚಾಗಬಾವಿ,ಬೂದಿಬಸವ ಶಾಂತಪ್ಪ ಕರಿಗಾರ,ಶಿವು,ವೆಂಕಟೇಶ ಮಸೀದಪುರ,ಶಿವಕುಮಾರ ವಸ್ತಾರ, ಉದಯಕುಮಾರ ಮಡಿವಾಳ ಸೇರಿದಂತೆ ಕಾರ್ಯಕರ್ತರುಗಳು, ಭಕ್ತರುಗಳು ಉಪಸ್ಥಿತರಿದ್ದರು

About The Author