ಶಹಾಪುರಃ ಓರ್ವನ ಬರ್ಬರ್ ಹತ್ಯೆ ಬೆಚ್ಚಿ ಬಿದ್ದ ಜನತೆ

ದೋರನಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದ ಘಟನೆ

ಶಹಾಪುರಃ ತಾಲೂಕಿನ ಗ್ರಾಮದ ಎಎಂಡಿ ಕ್ಯಾಂಪಿನ ಬಳಿ ಸಂಜೆ 6 ಗಂಟೆ ಸುಮಾರಿಗೆ ಓರ್ವನ ಬರ್ಬರ ಹತ್ಯೆ ಮಾಡಿದ ಘಟನೆ ನಡೆದಿದೆ.ಕೊಲೆಯಾದ ವ್ಯಕ್ತಿ ಜಾಪಾನಾಯಕ ತಾಂಡಾದ ತಿಪ್ಪಣ್ಣ (35) ಎಂದು ತಿಳಿದು ಬಂದಿದೆ. ನಾಲ್ಕಾರು ಜನ ಸೇರಿ ದ್ವಿ ಚಕ್ರವಾಹನ ಮೇಲೆ ಹೊರಟಿದ್ದ ತಿಪ್ಪಣ್ಣನನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ತಿಳಿದುಬಂದಿದೆ.

ಹತ್ಯೆ ಸುದ್ದಿ ಕೇಳಿದ ಜನ ಭಯಭೀತರಾಗಿದ್ದಾರೆ. ಕೊಲೆಗೆ ಮುಖ್ಯ ಕಾರಣವೇನೆಂದು ತಿಳಿದು ಬಂದಿಲ್ಲ. ಹಳೇ ವೈಷಮ್ಯವೇ ಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಪೊಲೀಸರ ತನಿಖೆ ನಂತರವೇ ಸತ್ಯಾಂಶ ಹೊರಬೀಳಲಿದೆ.ಘಟನಾ ಸ್ಥಳಕ್ಕೆ ಪಿಐ ಎಸ್.ಎಂ.ಪಾಟೀಲ್ ಪೊಲೀಸ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಡಿಎಸ್ ಪಿ ಭೇಟಿ ನೀಡಿ ಪರಿಶೀಲನೆಗೆ ಸೂಚಿಸಿದರು. ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *