ಋತುಚಕ್ರ ನಿರ್ವಹಣೆ ಕುರಿತು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಜಾಗೃತಿ ಕಾರ್ಯಾಕ್ರಮಗಳು ಅವಶ್ಯ: ಬಸವರಾಜ ಸಜ್ಜನ

ಶಹಾಪೂರ:ಮೇ 28 ರಂದು ಜಾಗತಿಕ ಋತುಚಕ್ರ ದಿನಾಚರಣೆಯ ಪ್ರಯುಕ್ತ ಇಂದಿನಿಂದ ಮೇ 27 ರವರೆಗೆ ಐದು ದಿನಗಳ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕಿಶೋರಿಯರಿಗೆ ವಡಗೇರಾ, ಶಹಾಪೂರ ತಾಲೂಕಿನ ಎಲ್ಲಾ ಗ್ರಾಮ ಪಂಚಾಯತಗಳಲ್ಲಿ ಸಭೆ ನಡೆಸಿ ಮಾಹಿತಿ ನೀಡಬೇಕು ಎಂದು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಸಜ್ಜನ ತಿಳಿಸಿದರು.ಆರೋಗ್ಯ ಕಾರ್ಯಕರ್ತೆಯರಿಂದ ಮನೆ-ಮನೆ ಬೇಟಿ  ನೀಡುವ ಜಾಗೃತಿ ಚಟುವಟಿಕೆ ಕಾರ್ಯಕ್ರಮಗಳನ್ನು ಆರೋಗ್ಯ, ಶಿಕ್ಷಣ,  ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಸಿಬ್ಬಂದಿಗಳೊಂದಿಗೆ  ಹಮ್ಮಿಕೊಳ್ಳಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
“ಸಾಂಧರ್ಭಿಕ ಛಾಯಾಚಿತ್ರ”
ಸ್ವಚ್ಛ ಭಾರತ ಅಭಿಯಾನ ಜಿಲ್ಲಾ ಸಂಯೋಜಕರಾದ
ಶಿವಕುಮಾರ ಮಾತನಾಡುತ್ತಾ, ಜನ ಸಂಖ್ಯೆಯ ಅರ್ಧದಷ್ಟು ಇರುವ ಮಹಿಳೆಯರು ನೈಸರ್ಗಿಕ ಪ್ರಕ್ರಿಯೆಯಾಗಿರುವ ಋತುಚಕ್ರ ನಿರ್ವಹಣೆಯ, ಆ ಸಂದರ್ಭದಲ್ಲಿ ಉಪಯೋಗಿಸುವ ಉತ್ಫನ್ನಗಳ ಮಾಹಿತಿ, ಉಪಯೋಗಿಸಿದ ವಸ್ತುಗಳನ್ನು ವಿಲೇವಾರಿ ಮಾಡಲು ಅಗತ್ಯ ಜಾಗೃತಿ ಅವಶ್ಯವಾಗಿದೆ ಎಂದರು. ಈ ವಿಷಯದ ಕುರಿತು ಆಪ್ತ ಸಮಾಲೋಚನೆ ಇರುವ ಮಾಹಿತಿ ಕೇಂದ್ರ ಹಾಗೂ ಸಂಸ್ಥೆ,ಇಲಾಖೆ, ಶಾಲೆಯಲ್ಲಿ ನಿರ್ವಹಣೆಗೆ- ಇರುವ ಸೌಲಭ್ಯಗಳ ಕುರಿತು ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಕಿಶೋರಿಯರಿಗೆ ಮಾಹಿತಿ ನೀಡಬೇಕಾಗಿದೆ. ಮಹಿಳೆಯ ಜೀವಿತ ಅವಧಿಯ ಅರ್ಧದಷ್ಟು ಕಾಲಾವಧಿಯಲ್ಲಿ ಋತುಚಕ್ರ ಅವಧಿಯಾಗಿದೆ.ಅಂದರೆ 12-14 ವರ್ಷಗಳಲ್ಲಿ ಪ್ರಾರರಂಭವಾಗಿ 40-45 ವರ್ಷದವರೆಗೆ ಮಹಿಳೆಯರು ನೈಸರ್ಗಿಕ ಕ್ರಿಯೆಯಿಂದ ಶುಚಿತ್ವದ ಅರಿವಿನ ಕೊರತೆ ಇದ್ದಲ್ಲಿ ಆರೋಗ್ಯದ ಮೇಲೆ ಪರಿಣಾಮ ಎದರಿಸಬೇಕಾಗುತ್ತೆ ಎಂದು ಹೇಳಿದರು.
“ಸಾಂಧರ್ಭಿಕ ಛಾಯಾಚಿತ್ರ”
ಈ ಅವಧಿಯಲ್ಲಿ ಮಹಿಳೆ ಮತ್ತು ಕಿಶೋರಿಯರಲ್ಲಿ ಅರಿವಿನ ಕೊರತೆ ಇದ್ದಲ್ಲಿ 2 ವಿಧಗಳಲ್ಲಿ ಪರಿಣಾಮ ಎದುರಿಸಬೇಕಾಗುತ್ತೆ 1 ಆರೋಗ್ಯದ ಮೇಲೆ 2 ಮಾನಸಿಕವಾಗಿ  ಆಗಾಗಿ ಋತುಸ್ರಾವದ ಅವಧಿಯಲ್ಲಿ ಕೀಳರಿಮೆಗೊಳ್ಳದೆ, ಮುಜಗುರಕ್ಕೆ, ಕಿನ್ನತೆಗೆ ಒಳಗಾಗದಂತೆ ಇರಲು ಮಹಿಳೆಯರಿಗೆ ತಾಯ್ತಿತನಕ್ಕೆ ಇರುವ ಅವಕಾಶ ಇರುವ ಸಹಜ ಕ್ರಿಯೆ ಎಂಬುವುದು ಆತ್ಮಸ್ಥೈರ್ಯ ತುಂಬಬೇಕು. ಇವತ್ತಿನ ಕಾಲದಲ್ಲಿಯು ಸಹ ಮಹಿಳೆಯರನ್ನ ಸಭೆ- ಸಮಾರಂಭ, ಮನೆಯ ಕೆಲವು ಕಾರ್ಯಾಕ್ರಮಗಳಿಂದ  ಹೊರಗಿಡಲ್ಪಡುತ್ತಿದೆ. ಕುಟುಂಬದ ಬೆಳವಣಿಗೆಯಲ್ಲಿ ತನ್ನದೇ ಪ್ರಮುಖ ಪಾತ್ರ ಎಂದು ತಿಳಿದಿದ್ದರೂ ಋತುಚಕ್ರ ಅವಧಿಯಲ್ಲಿ ತನ್ನದೇ ಮನೆಯಲ್ಲಿ ಕೆಲವೊಂದು ಕೆಲಸಗಳನ್ನು ಮಾಡದಿರುವುದು ಈಗಲು ಕಾಣುತ್ತೆವೆ. ತನ್ನದೆ ಮನೆಯಲ್ಲಿಯೂ  ಸೂಕ್ಷ್ಮತೆಯನ್ನು ಹೇಳಿಕೊಳ್ಳಲು  ಕೀಳಿರಿಮೆಯನ್ನು ಹೊಗಲಾಡಿಸಿ ಮಹಿಳೆ ಕುಟುಂಬ ಸಂತಾನದ ಕೊಡುಗೆ ಎಂಬುದನ್ನು ತಿಳಿಸಬೇಕಾಗಿದೆ.
2014 ರಿಂದ ಜಾಗತಿಕವಾಗಿ ಮೇ 28 ರಂದು ಋತುಚಕ್ರ ನಿರ್ವಹಣೆಯ ದಿನವನ್ನಾಗಿ ಆಚರಣೆ ಮಾಡಿ ಜಾಗೃತಿ ಮಾಡಲಾಗುತ್ತಿದೆ
ಮೇ 28  ರ ಹಿನ್ನಲೆ: ಋತುಚಕ್ರದ ಅವಧಿ ಸರಾಸರಿ 28 ದಿನಗಳು. ಋತುಸ್ರಾವದ ಸರಾಸರಿ 5 ದಿನಗಳು. ಮೇ 28-05 ರಂದು ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ.
ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸಬೇಕಾಗಿದೆ.
1. ಜಾಗೃತಿ ಹೆಚ್ಚಿಸಬೇಕಾಗಿದೆ: ಆರೋಗ್ಯ ದೃಷ್ಠಿಯಿಂದ ಸದ್ಯದಲ್ಲಿರುವ ಮಹಿಳೆಯರಿಗೆ, ಕಿಶೋರಿಯರಿಗೆ ಇರುವ ಜಾಗೃತಿಯನ್ನ ಹೆಚ್ಚಿಸಬೇಕಾಗಿದೆ.
2.ಋತುಚಕ್ರ ಅವಧಿಯಲ್ಲಿ ಉಪಯೋಗಿಸುವ ವಸ್ತುಗಳ ಕುರಿತು: ಈ ಅವಧಿಯಲ್ಲಿ ಬಳಕೆಯಾಗುವ ಉತ್ಪನ್ನಗಳಾದ ಮರು ಬಳಕೆ ಮಾಡುವ ಕಪ್ಪಗಳು, ಉತ್ತಮ ಪ್ಯಾಡ್ ಗಳು, ಕಾಟನ್ ಬಟ್ಟೆಯನ್ನು ಉಪೋಗಿಸುವ ಕುರಿತು ಮಹಿಳೆಯರಿಗೆ, ಕಿಶೋರಿಯರಿಗೆ ಸ್ನೇಹಾ ಕ್ಲೀನಿಕನಲ್ಲಿ, ಮಹಿಳೆರ ಸಭೆಯಲ್ಲಿ, ಪ್ರೌಢ ಶಾಲಾ ಹೆಣ್ಣು ಮಕ್ಕಳಿಗೆ ಮಾಹಿತಿ ನೀಡಬೇಕಾಗಿದೆ.
3. ನಿರ್ವಹಣೆಗೆ ಸೌಲಭ್ಯಗಳ ಕುರಿತು : ಪ್ರೌಢ ಶಾಲೆಯಲ್ಲಿ,ಆರೋಗ್ಯ ಕೇಂದ್ರಗಳಲ್ಲಿ,ಘನ ತ್ಯಾಜ್ಯ ವಿಲೇವಾರಿ ಘಟಕಗಳಲ್ಲಿ,  ಶಿಕ್ಷಣ ಇಲಾಖೆ,ಆರೋಗ್ಯ ಇಲಾಖೆಯಿಂದ ಅಥವಾ ಗ್ರಾಮ ಪಂಚಾಯತಯಿಂದ ಅಳವಡಿಸಿರುವ ಇನ್ಸಿನೇರೆಟರ್ ಉಪಯೋಗಿಸುವ ಕುರಿತು ಮಾಹಿತಿ ನೀಡಬೇಕಾಗಿದೆ.
4. ಋತುಚಕ್ರ ಅವಧಿಯಲ್ಲಿ ಉಪಯೋಗಿಸಿದ ವಸ್ತುಗಳನ್ನು ವಿಲೇವಾರಿ ಮಾಡುವುದು : ಋತುಚಕ್ರದ ಅವಧಿಯಲ್ಲಿ ಉಪಯೋಗಿಸಿರುವ ವಸ್ತುಗಳನ್ನು ವೈಜ್ಞಾನಿಕ ವಿಧನಾಗಳಲ್ಲಿ ವಿಲೇವಾರಿ ಮಾಡುವ ಕುರಿತು ಮಹಿಳೆಯರಿಗೆ,ಕಿಶೋರಿಯರಿಗೆ ಮಾಹಿತಿ ನೀಡುವುದು ಅವಶ್ಯವಾಗಿದೆ.
ಆಗಾಗಿ ಗ್ರಾಮ ಪಂಚಾಯತಿಯಿಂದ ದಿನಾಂಕ: 23-05-22 ರಿಂದ 27-05-22 ರ ವರೆಗೆ  5 ದಿನಗಳಲ್ಲಿ ಮಹಿಳೆಯರಿಗೆ, ಪ್ರೌಢ ಶಾಲಾ/ ಕಾಲೇಜು ವಿಧ್ಯಾರ್ಥಿನಿಯರಿಗೆ, ಕಿಶೋರಿಯರಿಗೆ  ಸಮುದಾಯ ಆರೋಗ್ಯ ಅಧಿಕಾರಿಗಳ ಮೂಲಕ ಸಭೆ, ಸ್ನೇಹ ಕ್ಲೀನಿಕ್ ಏರ್ಪಡಿಸಿ ಮಾಹಿತಿ ನೀಡಲಾಗುವುದು.ನರೇಗಾದಲ್ಲಿ ಕಾರ್ಯಾನಿರತರಾಗಿರುವ ಮಹಿಳೆಯರಿಗೆ ಕಾಮಗಾರಿ ನಡೆದ ಸ್ಥಳದಲ್ಲಿಯೇ ಈ ಕುರಿತು ಮಾಹಿತಿ ನೀಡುವುದು ಹಾಗೂ ಶಾಲಾ  ಕಾಲೇಜುಗಳಲ್ಲಿ ವಿಧ್ಯಾರ್ಥಿನಿಯರಿಗೆ ಉಪನ್ಯಾಸ ನೀಡುವುದರ ಮೂಲಕ ಆಶಾ- ಅಂಗನವಾಡಿ ಕಾರ್ಯಾಕರ್ತೆಯರ ಮೂಲಕ ಮನೆ- ಮನೆ ಬೇಟಿಯ ಸಂದರ್ಭದಲ್ಲಿ ಮಾಹಿತಿ ನೀಡುವುದು. ಆ ಅವಧಿಯಲ್ಲಿ ಉಪಯೋಗಿಸಿದ ವಸ್ತುಗಳನ್ನು ಗ್ರಾಮ ಪಂಚಾಯತಿಯ ಘನ ತ್ಯಾಜ್ಯ ವಿಲೇವಾರಿಯ ಸ್ವಚ್ಛ ವಾಹಿನಿಗೆ ಪೇಪರ್ ನಲ್ಲಿ ಸುತ್ತಿ ಅದಕ್ಕೆ ಕೆಂಪು ಮಾರ್ಕ ಮಾಡಿ ನೀಡುವುದರ ಮಾಹಿತಿ ನೀಡುವುದು.
ಋತು ಚಕ್ರದ ಅವಧಿಯಲ್ಲಿ ಉಪಯೋಗಿಸಿ ಬಿಸಾಡುವ ತ್ಯಾಜ್ಯವನ್ನು ನಿರ್ವಹಣೆ ಮಾಡುವುದರಲ್ಲಿ  ಮುನ್ನೆಚ್ಚರಿಕೆ ಮತ್ತು ಅಗತ್ಯ ಕ್ರಮವಹಿಸದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಇವತ್ತಿನ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯ ಸವಾಲಿನಂತೆ ಎದುರಿಸಬೇಕಾದ ಸಂದರ್ಭ ಬರುತ್ತೆ. ಹಾಗಾಗಿ ಮುಂದಾಲೋಚಿಸಿ ಸಾರ್ವಜನಿಕರ ಜಾಗೃತಿ, ತ್ಯಾಜ್ಯ ವಿಲೇವಾರಿಯಲ್ಲಿ ಸಹಕರಿಸುವುದು ಅವಶ್ಯವಾಗಿದೆ.
ಋತುಚಕ್ರ ಅವಧಿಯಲ್ಲಿ ಉಪೋಗಿಸಿ ಬಿಸಾಡುವ ಪ್ಯಾಡನ ಲೆಕ್ಕಚಾರ ಹೇಗೆ 
ಒಂದು ಗ್ರಾಮ ಪಂಚಾಯತಿಯ ಜನ ಸಂಖ್ಯೆ 3000 ಇದೆ ಎಂದಾದರೆ 3000 ಜನ ಸಂಖ್ಯೆಯಲ್ಲಿ ಅರ್ಧದಷ್ಠು ಸರಾಸರಿಯಾಗಿ ಮಹಿಳೆಯರು ಇರುತ್ತಾರೆ.
3000/2=1500 ಮಹಿಳೆಯರು.1500 /2=750  ಮಹಿಳೆಯರು, ಕಿಶೋರಿಯರು ಋತುಮತಿಯಾಗುತ್ತಾರೆ. 750 ರಲ್ಲಿ ಅರ್ಧದಷ್ಠು ಜನ ಪ್ಯಾಡ ಬಳಕೆ ಮಾಡುತ್ತಾರೆ.
750 /2=375 ಮಹಿಳೆಯರು,ಕಿಶೋರಿಯರ ಋತುಸ್ರಾವದ ದಿನ ಸರಾಸರಿಯಾಗಿ 4 ದಿನವೆಂದು ಲೆಕ್ಕಾಹಾಕಿ ಒಂದು ದಿನಕ್ಕೆ ಕನಿಷ್ಠ 2 ಪ್ಯಾಡ ಬಳಸುತ್ತಾರೆ ಎಂದು ಭಾವಿಸಿದಾಗ 4 ದಿನಗಳಲ್ಲಿ 8 ಪ್ಯಾಡ ಉಪಯೋಗಿಸಿ ಬಿಸಾಡುತ್ತಾರೆ.
375×8 =3000 ಒಂದು ತಿಂಗಳಿಗೆ 3000 ಪ್ಯಾಡಗಳ ತ್ಯಾಜ್ಯ ಉತ್ಪಾಧನೆ ಆಗುತ್ತದೆ.
3000/30=100 ಒಂದು ದಿನಕ್ಕೆ ಸರಿಯಾಗಿ 100 ಪ್ಯಾಡಗಳನ್ನು ಹೊರಗೆ ಬಿಸಾಡುತ್ತೆವೆ ಎಂಬುದು ವೈದ್ಯಕೀಯ ಶಾಸ್ತ್ರದ ಲೆಕ್ಕಚಾರ ಆ 100 ಪ್ಯಾಡಗಳನ್ನು ವೈಜ್ಞಾನಿಕ ವಿಧಾನಗಳಲ್ಲಿ ವಿಲೇವಾರಿ ಮಾಡುವುದು ಸ್ವಚ್ಛ ಭಾರತ ಮಿಷನ್ -2 ರಲ್ಲಿ ಒಂದು ಪ್ರಮುಖ ಘಟಕಾಂಶವಾಗಿದೆ. ಅದಕ್ಕಾಗಿ ಋತುಚಕ್ರ ಅವಧಿಯಲ್ಲಿ ಉಪಯೋಗಿಸಿ ಬಿಸಾಡುವ ಉತ್ಪನ್ನಗಳನ್ನು ವಿಲೇವಾರಿಯಲ್ಲಿ ಗ್ರಾಮೀಣ ಪ್ರದೇಶದ ಸಾರ್ವಜನಿಕರು, ಮಹಿಳೆಯರು ಸಹಕರಿಸಬೇಕಾಗಿದೆ ಎಂದು ಎಂದು  ತಿಳಿಸಿದರು.

About The Author