ಮಹಾಶೈವ ಧರ್ಮಪೀಠದಲ್ಲಿ 103 ನೆಯ ‘ ಶಿವೋಪಶಮನ ಕಾರ್ಯ’

Raichur

ಗಬ್ಬೂರು,ಅಕ್ಟೋಬರ್ 27,

ಪರಶಿವನು ವಿಶ್ವೇಶ್ವರ ನಾಮ ಧರಿಸಿ ಜಗದೋದ್ಧಾರದ ಲೀಲೆಯನ್ನಾಡುತ್ತಿರುವ ‘ ಭುವಿಗಿಳಿದ ಕೈಲಾಸ’ ಮಹಾಶೈವ ಧರ್ಮಪೀಠದಲ್ಲಿ ಅಕ್ಟೋಬರ್ 27 ರ ಆದಿತ್ಯವಾರದಂದು 103 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ವಿಶ್ವೇಶ್ವರನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ಶಿವಾನುಗ್ರಹವನ್ನು ಕರುಣಿಸಿದರು.

ವಿಶ್ವೇಶ್ವರ ಶಿವನ ಅನುಗ್ರಹದಿಂದ ಉದ್ಯೋಗ ದೊರಕಿಸಿಕೊಂಡ ಬೆಂಗಳೂರಿನ ಇಂಜನಿಯರ್ ರವಿಕುಮಾರ ಅವರು ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರನ್ನು ಭಕ್ತಿ,ಗೌರವಗಳಿಂದ ಸನ್ಮಾನಿಸಿ ಗೌರವ ಸಲ್ಲಿಸಿದರಲ್ಲದೆ ತಮ್ಮ ಮೊದಲ ತಿಂಗಳ ಸಂಬಳವನ್ನು ವಿಶ್ವೇಶ್ವರ ಶಿವನಿಗೆ ಸಮರ್ಪಿಸಿ ಧನ್ಯತೆ ಮೆರೆದರು.ಮಹಾಶೈವ ಧರ್ಮಪೀಠದ ನಿಷ್ಠಾವಂತ ಕಾರ್ಯಕರ್ತರಲ್ಲೊಬ್ಬರಾಗಿರುವ ರಘುನಂದನ್ ಪೂಜಾರ ಅವರ ಅಳಿಯರಾಗಿರುವ ರವಿಕುಮಾರ ಅವರು ಇಂಜನಿಯರಿಂಗ್ ಪದವಿ‌ಪಡೆದು ಉದ್ಯೋಗವಿಲ್ಲದೆ ಪರಿತಪಿಸುತ್ತಿದ್ದರು.ಮಹಾಶೈವ ಧರ್ಮಪೀಠದ ‘ ಮಾತನಾಡುವ ಮಹಾದೇವ ವಿಶ್ವೇಶ್ವರ ಶಿವ’ ನ ಮಹಿಮೆಯನ್ನು ಮಾವ ರಘುನಂದನ್ ಪೂಜಾರಿ ಅವರಿಂದ ಕೇಳಿ ಮಹಾಶೈವ ಧರ್ಮಪೀಠದಲ್ಲಿ ಜೂನ್ 16 ರಂದು ನಡೆದಿದ್ದ 95 ನೆಯ ‘ ಶಿವೋಪಶಮನ ಕಾರ್ಯ’ ಕ್ಕೆ ಬಂದಿದ್ದರು.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ರವಿಕುಮಾರ ಅವರಿಗೆ ಉದ್ಯೋಗ ನೀಡುವಂತೆ ವಿಶ್ವೇಶ್ವರ ಶಿವನಲ್ಲಿ‌ಪ್ರಾರ್ಥಿಸಿ ರವಿಕುಮಾರ ಅವರಿಗೆ ಶಿವಾಭಯ ಕರುಣಿಸಿದ್ದರು.ಕಳೆದ ತಿಂಗಳು ರವಿಕುಮಾರ ಅವರಿಗೆ ಅಮೇರಿಕ ಮೂಲದ ಬೆಂಗಳೂರಿನಲ್ಲಿ ಕಛೇರಿಯನ್ನು ಹೊಂದಿರುವ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿ‌ಒಂದರಲ್ಲಿ ಹುದ್ದೆ ದೊರಕಿತ್ತು.ಮೊದಲ ತಿಂಗಳ ಸಂಬಳ ಪಡೆದು ತಮ್ಮ ಹರಕೆಯನ್ನು ತೀರಿಸಲು ಇಂದು ಮಹಾಶೈವ ಧರ್ಮಪೀಠಕ್ಕೆ ಆಗಮಿಸಿದ್ದರು.ಪೀಠಾಧ್ಯಕ್ಷರು ರವಿಕುಮಾರ ಅವರನ್ನು ಶಿವಾನುಗ್ರಹಪೂರ್ವಕವಾಗಿ ಸನ್ಮಾನಿಸಿ,ಆಶೀರ್ವದಿಸಿದರು.

ವಿಶ್ವೇಶ್ವರ ಶಿವನು ನಿಶ್ಚಿತವಾಗಿ ಸಂತಾನಭಾಗ್ಯ ಕರುಣಿಸುವಂತೆಯೇ ಮದುವೆಯಾಗದ ತರುಣ ತರುಣಿಯರಿಗೆ ತನ್ನ ಸನ್ನಿಧಿಗೆ ಬಂದ ತಿಂಗಳೊಪ್ಪತ್ತಿನಲ್ಲಿಯೇ ಅವರ ಸಕಲದೋಷಗಳನ್ನು ಕಳೆದು ಕಂಕಣಭಾಗ್ಯ ಕರುಣಿಸುತ್ತಿರುವುದರಿಂದ ಇತ್ತೀಚಿನ ದಿನಗಳಲ್ಲಿ ವಿವಾಹಾರ್ಥಿಗಳಾಗ ಮಹಾಶೈವ ಧರ್ಮಪೀಠಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಇಂದು ಕೂಡ ವಿವಾಹಾಪೇಕ್ಷೆಯಲ್ಲಿ ಬಂದಿದ್ದ ತರುಣ ತರುಣಿಯರ ಸಂಖ್ಯೆ ಹೆಚ್ಚಾಗಿತ್ತು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಧರ್ಮಪೀಠದ ವಾರ್ತಾಧಿಕಾರಿ ಬಸವರಾಜ ಕರೆಗಾರ,ಮೂಲ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ಮಹಾಶೈವ ಧರ್ಮಪೀಠದ ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,

ಅಯ್ಯಾಳಪ್ಪ ಹಿರೇದಿನ್ನಿ,ಶರಣಗೌಡ ಮಾಲಿಪಾಟೀಲ್ ಹೊನ್ನಟಗಿ, ಚಿತ್ರಕಲಾವಿದ ಶರಣಪ್ಪ ಬೂದಿನಾಳ,ಸಿದ್ರಾಮಯ್ಯ ಸ್ವಾಮಿ ಹಳ್ಳಿ,ಬಾಬುಗೌಡ ಯಾದವ ಸುಲ್ತಾಪುರ,ಮೃತ್ಯುಂಜಯ ಯಾದವ,ರಂಗನಾಥ ಮಸೀದಪುರ,ಶಿವಕುಮಾರ ಗುರುಪಾದಪ್ಪ ಕರಿಗಾರ,ಬೂದಿಬಸವ ಶಾಂತಪ್ಪ ಕರಿಗಾರ,ಶಿವಾನಂದ ಮಸೀದಪುರ,ವೆಂಕಟೇಶ ಮಸೀದಪುರ,ಆನಂದ ಬಾಡದ,ತಿಪ್ಪಯ್ಯ ಭೋವಿ,ಶಿವಕುಮಾರ ವಸ್ತಾರ್ ,ಉದಯಕುಮಾರ ಮಡಿವಾಳ ಸೇರಿದಂತೆ ಭಕ್ತರುಗಳು ಉಪಸ್ಥತರಿದ್ದರು.

About The Author