ಕನಕ ಭವನ ನಿರ್ಮಾಣಕ್ಕೆ 2 ಕೋಟಿ ಅನುದಾನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಕುರುಬ ಸಮುದಾಯ

ಶಹಾಪುರ,

ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಶಹಪುರು ನಗರಕ್ಕೆ ಹಾಲುಮತ ಸಮುದಾಯ ಭವನ ನಿರ್ಮಾಣಕ್ಕಾಗಿ ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಎರಡು ಕೋಟಿ ಮಂಜೂರು ಮಾಡಿಸಿದ್ದು, ಕುರುಬ ಸಮುದಾಯದ ಮುಖಂಡರು ಸಂತಸ ವ್ಯಕ್ತಪಡಿಸಿ ಸಚಿವರಿಗೆ ನಗರದ ಭೀಮರಾಯನ ಗುಡಿಯ ಪ್ರವಾಸಿ ಮಂದಿರದಲ್ಲಿ ತಾಲೂಕು ಕುರುಬ ಸಮುದಾಯದ ಅಧ್ಯಕ್ಷರಾದ ಡಾ.ಭೀಮಣ್ಣ ಮೇಟಿಯವರ ಜೊತೆಯಾಗಿ ಸಮಾಜದ ಹಲವು ಮುಖಂಡರು ಸಚಿವರಿಗೆ ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಚಿವರು ಮಾತನಾಡಿ, ನನ್ನ ಕ್ಷೇತ್ರದಲ್ಲಿ ಹಾಲುಮತ ಸಮುದಾಯದವರು ಚುನಾವಣೆ ಸಂದರ್ಭದಲ್ಲಿ ನನ್ನೊಟ್ಟಿಗಿದ್ದು, ವೈಯಕ್ತಿಕವಾಗಿ ಹಾಲುಮತ ಸಮುದಾಯದವರು ನನ್ನ ಜೊತೆಗಿದ್ದಾರೆ.ನಾನು ಎಷ್ಟೇ ಸೇವೆ ಸಲ್ಲಿಸಿದರೂ ಕಡಿಮೆ. ಸಮುದಾಯದವರ ಋಣ ತೀರಿಸುವ ಸಮಯ ಇದಾಗಿದೆ ಎಂದು ಸಂತಸದ ನುಡಿಗಳನ್ನಾಡಿದರು.

ಶಹಪುರದಲ್ಲಿ ಹಲವು ಕಾಮಗಾರಿಗಳಿಗೆ 10 ಕೋಟಿಗೂ ಹೆಚ್ಚು ಅನುದಾನ ಬಿಡುಗಡೆಯಾಗಿದ್ದು, ಎಲ್ಲಾ ಕಾಮಗಾರಿಗಳಿಗೆ ಚಾಲನೆ ನೀಡಲು, ಸಂಗೊಳ್ಳಿ ರಾಯಣ್ಣನ ಮೂರ್ತಿಯ ಉದ್ಘಾಟನೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅನುಕೂಲವಾದರೆ ಡಿಸೆಂಬರ ತಿಂಗಳಲ್ಲಿಯೆ ಕರೆಯಿಸಿ ಕಾಮಗಾರಿಗಳಿಗೆ ಚಾಲನೆ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಹಾಲುಮತ ಸಮುದಾಯದ ಡಾ.ಭೀಮಣ್ಣ ಮೇಟಿ ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಅಧ್ಯಕ್ಷರು, ಶಿವುಮಾಂತಪ್ಪ ಸಾಹು ಚಂದಾಪುರ ಸಮಾಜದ ಹಿರಿಯ ಮುಖಂಡರು, ಭೀಮನಗೌಡ ಶಾಖಾಪುರ, ಸಿದ್ದಪ್ಪ ಚಟ್ನಳ್ಳಿ,ಮಲ್ಲನಗೌಡ ತಿಪ್ಪನಟಗಿ,ರಾಯಪ್ಪ ಚೆಲುವಾದಿ,ಭೀಮನಗೌಡ ಶಾಖಾಪುರ,ಭೀಕ್ಷಣಗೌಡ ಕಾಡಂಗೇರ,ಈರಣ್ಣಗೌಡ ಮಲ್ಲಾಬಾದಿ, ತಿರುಪತಿ ಬಾಣತಿಹಾಳ,ಶರಬಣ್ಣ ರಸ್ತಾಪುರ,ಕಳಸಪ್ಪಗೌಡ ಶಖಾಪುರ,ರವಿ ರಾಜಾಪುರ ಸೇರಿದಂತೆ ಇತರರು ಇದ್ದರು.

ಶಹಾಪುರ ಕ್ಷೇತ್ರದಲ್ಲಿ ಕುರುಬ ಸಮುದಾಯ ಬೃಹತ್ ಜನಸಂಖ್ಯೆ ಹೊಂದಿದ್ದು,ನಮಗೆ ಸಮುದಾಯ ಭವನ ಇರಲಿಲ್ಲ. ಕನಕ ಭವನಕ್ಕೆ ಎರಡು ಕೋಟಿ ರೂಪಾಯಿ ನೀಡಿದ್ದಾರೆ.ಕನಕ ಸಮುದಾಯ ಭವನಕ್ಕೆ ಸ್ಥಳ ಮತ್ತು ಸಮುದಾಯ ಭವನ ಎರಡನ್ನು ಸಚಿವರು ಒದಗಿಸಿಕೊಟ್ಟಿದ್ದಾರೆ. ಸಮುದಾಯದ ಪರವಾಗಿ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.

ಡಾ:ಭೀಮಣ್ಣ ಮೇಟಿ
ಅಧ್ಯಕ್ಷರು
ತಾಲೂಕು ಕರ್ನಾಟಕ ಪ್ರದೇಶ ಕುರುಬರ ಸಂಘ ಶಹಾಪುರ

ಕನಕ ಸಮುದಾಯ ಭವನ ಸೇರಿದಂತೆ ಸಮುದಾಯದ ಇತರ ದೇವಸ್ಥಾನಗಳಿಗೂ ಕೂಡ ಸಚಿವರು ಅನುದಾನ ನೀಡಿದ್ದಾರೆ.ಸಮುದಾಯದ ಪರವಾಗಿ ಸಚಿವರು ಸಾಕಷ್ಟು ಕೆಲಸ ಮಾಡಿದ್ದಾರೆ. ಸಮುದಾಯಕ್ಕೆ ಯಾವುದೇ ಕೊರತೆಯಾಗದಂತೆ ತಮ್ಮ ಜೊತೆಯಾಗಿ ತೆಗೆದುಕೊಂಡು ಹೋಗಿದ್ದಾರೆ.

ಶಾಂತಗೌಡ ನಾಗನಟಗಿ
ನಿರ್ದೇಶಕರು
ಕರ್ನಾಟಕ ಕುರಿ ಮತ್ತು ಮೇಕೆ ಸಾಕಾಣಿಕೆದಾರರ ಮಹಾಮಂಡಳಿ ಬೆಂಗಳೂರು

ಸಚಿವರಾದ ಶರಣಬಸಪ್ಪಗೌಡ ದರ್ಶನಾಪುರ ಅವರು ಕನಕ ಭವನ ನಿರ್ಮಾಣಕ್ಕೆ ಎರಡು ಕೋಟಿ ಅನುದಾನ ನೀಡಿದ್ದಾರೆ. ಕುರುಬ ಸಮುದಾಯಕ್ಕೆ ಸೇರಿದಂತೆ ಇತರ ಸಮುದಾಯಗಳಿಗೂ ಕೂಡ ಅನುದಾನ ನೀಡಿದ್ದು,ಕುರುಬ ಸಮುದಾಯಕ್ಕೆ ಯಾವುದೇ ಸಮಾರಂಭ ಹಮ್ಮಿಕೊಳ್ಳಲು ಕನಕ ಭವನ ಅನುಕೂಲವಾಗುತ್ತದೆ.

ಶಿವುಮಾಂತಪ್ಪ ಸಾಹು ಚಂದಾಪುರ ಹಿರಿಯ ಕಾಂಗ್ರೆಸ್ ಮುಖಂಡರು

ಕಾಮಗಾರಿಗಳ ವಿವರ

* ಬಸವ ಭವನ ನಿರ್ಮಾಣಕ್ಕೆ 2 ಕೋಟಿ.
*ಕನಕ ಭವನ ನಿರ್ಮಾಣಕ್ಕೆ 2 ಕೋಟಿ.
*ಶಹಾಪುರ ಶಿಕ್ಷಕ ಭವನಕ್ಕೆ ೫೦ ಲಕ್ಷ.
*ಯಾದಗಿರಿ ಸಿದ್ದಸಂಪದ ಚಾರಿಟೇಬಲ್ ಟ್ರಸ್ಟ್ ಸಾಂಸ್ಕೃತಿಕ ಭವನಕ್ಕೆ ೫೦ ಲಕ್ಷ.
* ಹೈಯಾಳ ಲಿಂಗೇಶ್ವರ (ಹಯ್ಯಳ ಬಿ ಗ್ರಾಮ) ದೇವಸ್ಥಾನಕ್ಕೆ ೫೦ ಲಕ್ಷ.
*ಯಕ್ತಾಪುರ (ಸುರಪುರ ತಾಲೂಕು) ಗುತ್ತಿ ಬಸವೇಶ್ವರ ದೇವಸ್ಥಾನದ ಟ್ರಸ್ಟ್ಗೆ ೫೦ ಲಕ್ಷ.
*ಕಲಬುರಗಿ ಅಖಿಲ ಕರ್ನಾಟಕ ಹೇಮರೆಡ್ಡಿ ಮಲ್ಲಮ್ಮ ಅಭಿವೃದ್ದಿ ಸಂಸ್ಥೆಗೆ ೧ಕೋಟಿ ೫೦ ಲಕ್ಷ.
*ಸಿದ್ದರೂಢ ದೇವಸ್ಥಾನ (ನಗನೂರು ಗ್ರಾಮ) ಕಲ್ಯಾಣ ಮಂಟಪ ೭೫ ಲಕ್ಷ.
*ಕೆಂಭಾವಿ ಪಟ್ಟಣದ ಶರಣಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಪಟ ನಿರ್ಮಾಣಕ್ಕೆ ೫೦ ಲಕ್ಷ.
*ಭೀರಲಿಂಗೇಶ್ವರ ದೇವಸ್ಥಾನದ (ಮುಡಬೂಳ ಗ್ರಾಮ) ಸಮುದಾಯ ಭವನ ನಿರ್ಮಾಣಕ್ಕೆ ೨೫ ಲಕ್ಷ.
*ಶಖಾಪುರ ಗ್ರಾಮದ ವಿಶ್ವರಾಧ್ಯ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕಾಗಿ ೨೫ ಲಕ್ಷ.
*ಗೋಗಿ ಕೆ ಗ್ರಾಮದ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ೫೦ ಲಕ್ಷ.
*ನಗರದ ಸಿಂಪಿ ಸಮುದಾಯ ಭವನ ನಿರ್ಮಾಣಕ್ಕೆ ೨೫ ಲಕ್ಷ.

About The Author