ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಒಂಬತ್ತನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

ಶಹಾಪುರ : ನಗರದ ಎನ್ಜಿಓ ಕಾಲೋನಿಯಲ್ಲಿರುವ ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ, ಪತಂಜಲಿ ಯೋಗ ವಿಜ್ಞಾನ ತರಬೇತಿ ಕೇಂದ್ರ ಹಾಗೂ ವೈದ್ಯಶ್ರಿ ಸಮಗ್ರ ಆರೋಗ್ಯ ಕೇಂದ್ರ ಶಹಪುರ ಇವರ ಸಂಯುಕ್ತಾಶ್ರಯದಲ್ಲಿ ಒಂಬತ್ತನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಧನ್ವಂತರಿಗೆ ಪೂಜೆ ಹಾಗೂ ಸಸಿ ನೆಡುವುದರ ಮೂಲಕ ಮುಖ್ಯ ಅತಿಥಿಗಳಾದ ನರಸಿಂಹ ವೈದ್ಯರು ಕಾರ್ಯಕ್ರಮ ಉದ್ಘಾಟಿಸಿ ಚಾಲನೆ ನೀಡಿದರು.ಅತಿಥಿಗಳಾದ ಎಂ ಬಿ ಪಾಟೀಲ್ ರವರು ಧನ್ವಂತರಿ ಆಯುಷ್ಯ ಇಲಾಖೆಯ  ಪರಿಚಯ,ಆಯುರ್ವೇದದ ಮಹತ್ವ,ಚಿಕಿತ್ಸಾ ಪದ್ಧತಿ, ಆಯುರ್ವೇದ ಚಿಕಿತ್ಸೆಯಿಂದ ಆಗುವ ಲಾಭ ಪಡೆಯುವಂತೆ ಸಲಹೆ ನೀಡಿದರು.

ಡಾ. ಇಂದಿರಾ ಜಗದೀಶ್ ಉಪ್ಪಿನ್ ರವರು ಆಯುರ್ವೇದ ಹಾಗೂ ಮನೆಮದ್ದುಗಳ ಬಳಕೆ ಯೋಗಗಳನ್ನು ಅಳವಡಿಸಿಕೊಳ್ಳುವುದರಿಂದ ಆರೋಗ್ಯದಂತಹ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಡಾ. ಜಗದೀಶ್ ಉಪ್ಪಿನ್, ರವಿಕುಮಾರ ಸಹಾಯಕ ಆಡಳಿತ ಅಧಿಕಾರಿ, ಎನ್ಜಿಓ ಕಾಲೋನಿ, ಬಾಪುಗೌಡ ದರ್ಶನಾಪುರ ಕಾಲೋನಿಯ ಜನರು, ಅಶೋಕ್ ಕಲ್ಲೂರ್ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಇತರರು ಭಾಗವಹಿಸಿದ್ದರು.

About The Author