ಸಂಘಟನೆಗೆ ಚತುರ, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷ ರಮೇಶ ಮೂಡಲದಿನ್ನಿ

ರಾಯಚೂರು : ಜಿಲ್ಲೆಯ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ರಾಯಚೂರು ಜಿಲ್ಲಾಧ್ಯಕ್ಷರಾದ ರಮೇಶ ಮೂಡಲದಿನ್ನಿ ತಮ್ಮದೇ ಆದ ಚಾತುರ್ಯದಿಂದ ಬೆಳೆದು ಬಂದ ನಿಜನಾಯಕ. ಬಾಲ್ಯದಿಂದಲೇ ಸಂಘಟನೆಯ ಬಗ್ಗೆ ಅಪಾರ ಒಲವನ್ನು ಹೊಂದಿದ ರಮೇಶ ಮೂಡಲದಿನ್ನಿ, ರಾಯಚೂರು ಜಿಲ್ಲೆಯಲ್ಲಿ ತನ್ನದೆ ಆದ ಚಾಪು ಮೂಡಿಸಿದ್ದಾರೆ.

ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷರಾಗಿ ಒಂದು ವರ್ಷವಾಯಿತು. ಜಿಲ್ಲೆಯಲ್ಲಿ ಪ್ರತಿ ಗ್ರಾಮದಲ್ಲಿಯೂ ಸಂಘಟನೆಯನ್ನು ಬೆಳೆಸಿದ್ದಾರೆ. ತಾಲೂಕು ಗ್ರಾಮವಾರು ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ನೇಮಿಸಿ ಕುರುಬ ಸಮಾಜದ ಏಳಿಗೆಗಾಗಿ ಸಾಕಷ್ಟು ಶ್ರಮಿಸಿದ್ದಾನೆ. ಜಿಲ್ಲೆಯ ಪದಾಧಿಕಾರಿಗಳಿಂದಿಡಿದು ಗ್ರಾಮೀಣ ಮಟ್ಟದವರೆಗೆ ಕರ್ನಾಟಕ ಪ್ರದೇಶ ಯುವ ಕುರುಬ ಸಂಘಟನೆಯನ್ನು ಪರಿಚಯಿಸಿದ್ದಾನೆ. ಒಂದು ವರ್ಷದಲ್ಲಿ ಅವರ ಶ್ಲಾಘನೀಯವಾದದ್ದು.

ಇತರರಿಂದ ಭಿನ್ನವಾದ ಸಂಘಟನೆ ಮಾಡಿದ್ದಾನೆ. ಸಮಾಜದ ಶೋಷಿತರ ಜನಪರ ಕಾಳಜಿ ಬಗ್ಗೆ ಅಪಾರ ಗೌರವದೊಂದಿಗೆ ಒಡನಾಟ ಹೊಂದಿದ ರಮೇಶ ಮೂಡಲದಿನ್ನಿ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ ಯುವ ನಾಯಕರು ಹೌದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗ್ರಾಮೀಣ ಭಾಗದ ಶಾಸಕರಾದ ಬಸ್ಸನಗೌಡ ದದ್ದಲ್ ಅವರ ಗೆಲುವಿಗಾಗಿ ಶ್ರಮಿಸಿದ್ದಾನೆ. ಗ್ರಾಮೀಣ ಭಾಗದ ಜನರ ಕಷ್ಟಗಳಿಗೆ ಸ್ಪಂದಿಸುತ್ತಾ, ಕುರುಬ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿರುವ ರಮೇಶ ಮೂಡಲದಿನ್ನಿ ಒಂದು ವರ್ಷದಲ್ಲಿ ಕರ್ನಾಟಕ ಪ್ರದೇಶ ಕುರುಬರ ಸಂಘವನ್ನು ಗ್ರಾಮೀಣ ಮಟ್ಟದಲ್ಲಿ ಪಸರಿಸಿ ಪ್ರಚಾರ ಮಾಡಿ ಜನಸಾಮಾನ್ಯರ ಮನದಲ್ಲಿ ನೆಲೆಸಿದ್ದಾನೆ.

ಕುರುಬ ಸಮಾಜದ ಬಡಜನರ ಏಳಿಗೆಗಾಗಿ ಸದಾ ಅವರ ಮನ ಮಿಡಿಯುತ್ತದೆ ಎಂದರೆ ತಪ್ಪಾಗಲಿಕ್ಕಿಲ್ಲ. ಸಮಾಜದ ಹೆಸರಿನ ಬ್ರಾಂಡ್ ತೆಗೆದುಕೊಂಡು ನಂತರ ನಮ್ಮವರನ್ನೇ ಮರೆತ ಹಲವಾರು ಮುಖಂಡರು ಸಮಾಜದಲ್ಲಿ ಇಂದಿಗೂ ಕಾಣುತ್ತೇವೆ.ಕ್ಯಾರೆ ಎನ್ನದೆ ಸಾಗುತ್ತಿದ್ದಾರೆ. ಕಾಲ ಬದಲಾಗುತ್ತದೆ. ಆದರೆ ರಮೇಶ ಮೂಡಲದಿನ್ನಿಯವರ ಸೌಜನ್ಯದ ಮಾತುಗಳು ಸಂಘಟನೆಗೆ ಒತ್ತು ಕೊಡುವಂತಿವೆ.ಸಮಾಜದ ಏಳಿಕೆಗಾಗಿ ಸದಾ ಮಿಡಿಯುತ್ತಿರುವ ಅವರ ಮನ ಮಿಡಿಯುತ್ತಿದೆ. ಯಾವ ಅಹಂ ಅವರ ಸಮೀಪ ಬಾರದಿರಲಿ. ಪದವಿ ಸಿಕ್ಕ ಮೇಲೆ ಸಮಾಜವನ್ನು ಮರೆಯುವ ಜನರು ಇಂದು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹಾಗಾಗದಿರಲಿ ಎನ್ನುವುದೇ ನಮ್ಮ ಕಾಳಜಿ.ಒಂದು ಸಂಘಟನೆಯನ್ನು ಮನೆ ಮಾತಾಗಿ ಮಾಡಿದ ರಮೇಶ ಮೂಡಲದಿನ್ನಿ ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸೋಣ.

About The Author