ಜಾತಿ ಜನಗಣತಿ ಪ್ರತಿಭಟನೆ 23ಕ್ಕೆ ಮುಂದೂಡಿಕೆ :-ಅಯ್ಯಪ್ಪಗೌಡ

ಬೆಂಗಳೂರು :-ಜಾತಿ ಜನಗಣತಿ ವರದಿಯನ್ನು ಆಗ್ರಹಿಸಿ ಅ.16 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಸಲು ನಿರ್ಧರಿಸಿದ್ದ ಪ್ರತಿಭಟನೆಯನ್ನು ಅ.23ಕ್ಕೆ ಮುಂದೂಡಲಾಗಿದೆ ಎಂದು ಕರ್ನಾಟಕ ಅಹಿಂದ ಜನ ಸಂಘ(ರಿ) ಸಂಸ್ಥಾಪಕರು,ರಾಜ್ಯಧ್ಯಕ್ಷರು ಅಯ್ಯಪ್ಪಗೌಡ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವ ಕಾರಣ ಅ.16ಕ್ಕೆ ಬದಲಾಗಿ ಅ.23ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಶೋಷಿತ ಸಮುದಾಯ ಹಾಗೂ ಕರ್ನಾಟಕ ಅಹಿಂದ ಜನಸಂಘಟನೆಯ ಪದಾಧಿಕಾರಿಗಳು, ಸಿದ್ದರಾಮಯ್ಯ ಅಭಿಮಾನಿಗಳು, ಎಲ್ಲಾ ಅಹಿಂದ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *