ಮುಖ್ಯಮಂತ್ರಿ ತಸಿದ್ದರಾಮಯ್ಯನವರ ರಾಜೀನಾಮೆ ಕೇಳಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ : ಅಯ್ಯಪ್ಪಗೌಡ

ಬೆಂಗಳೂರು : ರಾಜ್ಯದ ಕಂಡಂತ ಜನತೆಯ ಶ್ರೇಷ್ಠ ಮುಖ್ಯಮಂತ್ರಿಗಳ ಸಾಲಿನಲ್ಲಿ ಒಬ್ಬರಾದ ಜನಪ್ರಿಯ ಮುಖ್ಯಮಂತ್ರಿಗಳು ಸಿದ್ದರಾಮಯ್ಯನವರು, ಅವರು ತಮ್ಮ ಸುದೀರ್ಘ ರಾಜಕೀಯ ಜೀವನದ ಇತಿಹಾಸದಲ್ಲೇ ಒಂದೇ ಒಂದು ಕಪ್ಪು ಚುಕ್ಕಿ ಇರದ ನಿಷ್ಠಾವಂತ ಪ್ರಮಾಣಿಕ ವ್ಯಕ್ತಿ ಎಂದು ಕೆಪಿಸಿಸಿ ರಾಜ್ಯ ಕಾರ್ಯದರ್ಶಿಗಳು ಹಾಗೂ ಯಾದಗಿರಿ ಜಿಲ್ಲಾ ಉಸ್ತುವಾರಿ ಕಾರ್ಮಿಕ ವಿಭಾಗ ಬೆಂಗಳೂರು ಅಯ್ಯಪ್ಪಗೌಡ ಖಂಡಿಸಿದ್ದಾರೆ. ಅವರು ನುಡಿದಂತೆ ನಡೆದಿದ್ದಾರೆ. ಕರ್ನಾಟಕ ರಾಜ್ಯವನ್ನು ಅಭಿವೃದ್ಧಿ ಪತಕ್ಕೆ ತಂದು ಅಭಿವೃದ್ಧಿಯಲ್ಲಿ ನಂಬರ್ 01 ರಾಜ್ಯವನ್ನಾಗಿ ಮಾಡಿ ಬಡವರ,ಶೋಷಿತರ, ದೀನದಲಿತ,ಅಲ್ಪಸಂಖ್ಯಾತರ ಏಳಿಗೆಗಾಗಿ ಕೆಲಸ ಮಾಡಿ ಮತ್ತೆ ಎರಡನೇ ಅವಧಿಗೆ ಕರ್ನಾಟಕ ಜನರ ಆಶೀರ್ವಾದದಿಂದ ಬಹುಮತ ಪಡೆದು 136 ವಿಧಾನಸಭೆ ಸದಸ್ಯರ (ಶಾಸಕರ) ಬಲದಿಂದ ಮುಖ್ಯಮಂತ್ರಿಯಾಗಿ ಜನಪರ ಆಡಳಿತ ನಡೆಸುತ್ತಿದ್ದಾರೆ, ಚುನಾವಣೆ ಮುಂಚೆ ಜನರಿಗೆ ನೀಡಿದ ಪಂಚ ಗ್ಯಾರಂಟಿಗಳನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತಂದು ನುಡಿದಂತೆ ನಡೆದು,ಸುಭದ್ರ ಸರ್ಕಾರ ನಡೆಸುತ್ತಿದ್ದಾರೆ.ಅವರ ಏಳಿಗೆ ಸಹಿಸಲಾಗದೆ ನರೇಂದ್ರ ಮೋದಿ ನೇತೃತ್ವದ ಸಮ್ಮಿಶ್ರ ಕೇಂದ್ರ ಸರ್ಕಾರ ತನ್ನ ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ್ಯಪಾಲರನ್ನು ತನ್ನ ಕೈಗೊಂಬೆಯಂತೆ ನಡೆಸಿಕೊಂಡಿದೆ.ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಕೆಡವಿ, ಆಪರೇಷನ್ ಕಮಲ ಮೂಲಕ ಹಿಂದಿನ ಬಾಗಿಲಿನಿಂದ ಅಧಿಕಾರ ನಡೆಸುವ ಹುನ್ನಾರ ಕುತಂತ್ರ ಬಿಜೆಪಿ ನಾಯಕರು ನಡೆಸುತ್ತಿದ್ದಾರೆ.

ಸಿದ್ದರಾಮಯ್ಯರವರ ರಾಜೀನಾಮೆ ಕೇಳಲು ಬಿಜೆಪಿಯವರಿಗೆ ಯಾವ ನೈತಿಕತೆ ಇದೆ?.

ಸಿದ್ದರಾಮಯ್ಯ ಎಂಬ ವ್ಯಕ್ತಿಗೆ ಮೂಡ (MUDA) ಎಂಬ ಹಗರಣದ ಪಟ್ಟಿ ಕಟ್ಟಿ, ಸರ್ಕಾರ ಬಿಳಿಸಲು ಪ್ರಯತ್ನ ನಡೆಸಿದ್ದಾರೆ. ಅದು ಸಾಧ್ಯವಿಲ್ಲ, ಸಿದ್ದರಾಮಯ್ಯ ರವರಿಗೆ ಮೂಡ ಹಗರಣಕ್ಕೂ ಸಂಬಂಧವಿಲ್ಲ.ಕರ್ನಾಟಕ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಎಲ್ಲಾ ಸಚಿವರ, ಶಾಸಕರ ಬಲ, ಹೈಕಮಾಂಡ್ ಬಲ ಸಿದ್ರಾಮಯ್ಯ ನವರ ಬೆನ್ನಿಗೆ ಬಲವಾಗಿ ಅಹಿಂದ ಜನಸಂಘ ಪಡೆ ಇದೆ, ಯಾವುದಕ್ಕೂ ಸಿದ್ದರಾಮಯ್ಯ ನವರು ರಾಜೀನಾಮೆ ಕೊಡುವ ಮಾತೇ ಇಲ್ಲ, ಅವರೇ ಐದು ವರ್ಷ ಸುಭದ್ರ ಸರ್ಕಾರ ನಡೆಸುತ್ತಾರೆ.

ಅವರ ವಿರುದ್ಧ ರಾಜ್ಯಪಾಲರು ಸೇಡಿನ ರಾಜಕೀಯ ಮಾಡಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ.ಸಿದ್ದರಾಮಯ್ಯ ನವರು ಕಾನೂನು ಹೋರಾಟ ಮಾಡಿ ದೋಷ ಮುಕ್ತರಾಗಿ ಹೊರ ಬರುತ್ತಾರೆ. ಕಾನೂನು ನ್ಯಾಯಾಲಯದ ಮೇಲೆ ನಂಬಿಕೆ ಇದೆ.ಎಂದು ಪತ್ರಿಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author