ಮಾತೃ ಛಾಯಾ ಶಿಕ್ಷಣ ಸಂಸ್ಥೆಯಲ್ಲಿ ಗಾಂಧಿ ಜಯಂತಿ ಆಚರಣೆ

ಶಹಪುರ: ಮಹಾತ್ಮ ಗಾಂಧೀಜಿಯವರ ಜೀವನ ಮತ್ತು ಅವರು ಈ ದೇಶಕ್ಕೆ ಕೊಟ್ಟ ಕೊಡುಗೆಗಳು ಸ್ಮರಸಿಕೊಳ್ಳುವುದು ಅಗತ್ಯ ಎಂದು ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಅಭಿಷೇಕ ರೆಡ್ಡಿ ಹೇಳಿದರು.ಪಟ್ಟಣದ ಚಾಮುಂಡಿ ನಗರದಲ್ಲಿರುವ ಮಾತೃ ಛಾಯಾ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಶ್ರೀ ಕನಕದಾಸ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಸತ್ಯ ಮತ್ತು ಶಾಂತಿ ಬಳಸಿಕೊಂಡು ಹೋರಾಟದ ಬಗೆಗಿನ ಅವರ ವಿಶಿಷ್ಟ ವಿಧಾನವು ಇತಿಹಾಸದ ಹಾದಿಯನ್ನು ಬದಲಾಯಿಸಿತು ಎಂಬುದನ್ನು ನಾವು ಇಲ್ಲಿ ಅರಿತುಕೊಳ್ಳಬೇಕಾಗಿದೆ ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ತಿಪ್ಪಣ್ಣ ಖ್ಯಾತನಾಳ ಮಾತನಾಡಿ ಗಾಂಧೀಜಿಯವರು ಅಸಹಕಾರಿ ಚಳುವಳಿ ದಂಡಿ ಮೆರವಣಿಗೆ ಮತ್ತು ಭಾರತ ಬಿಟ್ಟು ತೊಲಗಿ ಚಳುವಳಿ ಸೇರಿದಂತೆ ಹಲವಾರು ಚಳುವಳಿಗಳನ್ನು ರೂಪಿಸಿದರು. ನಮ್ಮ ಭಾರತ ದೇಶವನ್ನು ಸ್ವಾತಂತ್ರ್ಯಗೊಳಿಸುವಲ್ಲಿ ಅವರ ಪಾತ್ರ ಬಹುಮುಖ್ಯವಾಗಿದೆ ಎಂದು ಹೇಳಿದರು.
 ಬಸವರಾಜ ಅಂಗಡಿ, ಚಾಂದ್ ಪಾಷಾ ಇಜೇರಿ ಮೀನಾಕ್ಷಿ ರೆಡ್ಡಿ ವಿಜಯಲಕ್ಷ್ಮಿ ರೆಡ್ಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು ಭಾವನ ಹಾಗೂ ಹೀನಾ ಅವರಿಂದ ಸಾಂಸ್ಕೃತಿಕ ಹಾಗೂ ಸಂಗೀತ ಕಾರ್ಯಕ್ರಮಗಳು ಜರುಗಿದವು, ಭಾಗ್ಯಶ್ರೀ ಘನತೆ ಸ್ವಾಗತಿಸಿ, ರೂಪಿಸಿ,ವಂದಿಸಿದರು.

About The Author