ಕೃಷ್ಣಾನದಿ ಪಾತ್ರದ ಬೆಳೆ ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ

ವಡಗೇರಾ :  ಕೃಷ್ಣಾ ನದಿ ಪ್ರವಾಹದಿಂದ ಬೆಳೆಗಳ ಹಾನಿ ಪ್ರದೇಶದ ಗ್ರಾಮಗಳಾದ ಹೈಯ್ಯಳ ಬಿ,ಐಕೂರ, ಯಕ್ಷಿಂತಿ ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ ಖುದ್ದಾಗಿ ರೈತರ ಜಮೀನಿಗೆ ತೆರಳಿ ವೀಕ್ಷಣೆ ಮಾಡಿದರು. ರೈತರಲ್ಲಿ ಯಾವುದೇ ರೀತಿಯ ಆತಂಕ ಬೇಡ. ಈಗಾಗಲೇ ಕಂದಾಯ ಇಲಾಖೆಯ ಸಿಬ್ಬಂದಿಗಳು ನದಿ ನೀರಿನಿಂದ ಹಾನಿಗೊಳಗಾದ ರೈತರ ಜಮೀನಿನ ಸರ್ವೆ  ಮಾಡಿ  ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದು ತ್ವರಿತಗತಿಯಲ್ಲಿ ರೈತರಿಗೆ ಬೆಳೆ ಹಾನಿ ಪರಿಹಾರ ಒದಗಿಸುವ ಭರವಸೆ ನೀಡಿದರು.
        ಕಳೆದ ಕೆಲವು ದಿನಗಳ ಹಿಂದೆ ಹತ್ತಿ ಬೆಳೆಗೆ  ವಿಚಿತ್ರವಾದ ರೋಗ ಹರಡಿರುವುದನ್ನು ರೈತರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಕೆಲವು ರೈತರ ಹತ್ತಿ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಈ ರೋಗದ ಕುರಿತು ಕೃಷಿ ಅಧಿಕಾರಿಗಳು  ಮಾಹಿತಿಯನ್ನು ಕಲೆ ಹಾಕಿ ರೈತರಿಗೆ ಉತ್ತಮ ಪರಿಹಾರ ಕಂಡುಕೊಳ್ಳಲು ರೈತರಿಗೆ  ಸಲಹೆ ನೀಡುವಂತೆ ಅಲ್ಲಿನ ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ರೀನಿವಾಸ್ ಚಾಪೆಲ್, ಹೈಯಾಳ .ಬಿ. ಉಪ ತಹಸೀಲ್ದಾರ್ ಪರಶುರಾಮ, ಕಂದಾಯ ನಿರೀಕ್ಷಕರಾದ ಸಂಜಿವ ಕುಮಾರ ಕಾವಲಿ, ಸಿದ್ದಯ್ಯ ಸ್ವಾಮಿ, ಕೃಷಿ ಅಧಿಕಾರಿ ನಾಗರಾಜ, ಗ್ರಾಮ ಆಡಳಿತಾಧಿಕಾರಿಗಳಾದ  ಪ್ರವೀಣ್, ಕೊಟ್ರೇಶ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಿಬ್ಬಂದಿಗಳು ಇದ್ದರು.

About The Author