ಟೆಂಡರ್ ಗಳಲ್ಲಿ ಮೀಸಲಾತಿ ನಿಗದಿ ಪಡಿಸುವಂತೆ ಗುತ್ತಿಗೆದಾರರ ಒತ್ತಾಯ

ಶಹಾಪುರ : ರಾಜ್ಯ ಸರ್ಕಾರ ಟೆಂಡರ್ ಗಳಲ್ಲಿ ಕೆಟಗೇರಿ 1 ಮತ್ತು ಕೆಟಗೇರಿ 2ಕ್ಕೆ ಸಂಬಂಧಿಸಿದಂತೆ ಮೀಸಲಾತಿ ಜಾರಿಗೊಳಿಸಿ ಆದೇಶಿಸಿದೆ. ಆದರೆ ಈ ಆದೇಶ ಕೆಲವೇ ಜಿಲ್ಲೆಗಳಲ್ಲಿ ಜಾರಿಯಲ್ಲಿದ್ದು, ರಾಜ್ಯಾದ್ಯಂತ ಜಾರಿಗೊಳಿಸುವಂತೆ ಪ್ರಥಮ ದರ್ಜೆ ಗುತ್ತೇದಾರರು ಹಾಗೂ ಕನಕ ಗುತ್ತಿಗೆದಾರರ ಸಂಘದ ತಾಲೂಕ ಅಧ್ಯಕ್ಷರಾದ ಮಾಳಿಂಗರಾಯ ಅವರು ಸರಕಾರಕ್ಕೆ ಒತ್ತಾಯಿಸಿದ್ದಾರೆ.
             ಸರ್ಕಾರ ಈಗಾಗಲೇ ಕೆಟಗರಿ 1 ಮತ್ತು 2ಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೊರಡಿಸಿರುವ ಪ್ರತಿಯೊಂದು ಟೆಂಡರ್ ಗಳಲ್ಲಿ ನಿಗದಿತ ಮೀಸಲಾತಿ ಕೆಟಗೆರಿ 1 ಮತ್ತು 2ಕ್ಕೆ ಸಂಬಂಧಿಸಿದವರಿಗೆ ಮೀಸಲಾತಿ ನಿಗದಿಪಡಿಸಬೇಕೆಂದು ಆದೇಶಿಸಿದೆ. ಆದರೆ ಯಾದಗಿರಿ ಜಿಲ್ಲೆಯ ಕೆಬಿಜೆಎನ್ಎಲ್ ಲೋಕೋಪಯೋಗಿ, ನರೇಗಾ ಸೇರಿದಂತೆ ಎಲ್ಲಾ ಇಲಾಖೆಯ ಟೆಂಡರ್ ಗಳಲ್ಲಿ ಮೀಸಲಾತಿಗನುಗುಣವಾಗಿ  ಕಾಮಗಾರಿಗಳನ್ನು ನಿಗದಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.
 
       ಈಗಾಗಲೇ ಇಲಾಖಾವಾರು ಕಾಮಗಾರಿಗಳನ್ನು ಟೆಂಡರ್ ಕರೆದಿದ್ದು ಅದರಲ್ಲಿ ಕೆಟಗೇರಿ 1 ಮತ್ತು ಕೆಟಗೇರಿ 2ಕ್ಕೆ ಸಂಬಂಧಿಸಿದಂತೆ ಮೀಸಲಾತಿ ನಿಗದಿಪಡಿಸಿಲ್ಲ. ಹಾಸನ ಮತ್ತು ದಕ್ಷಿಣ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಟೆಂಡರ್ ಗಳಲ್ಲಿ ಕೆಟಗರಿ 1 ಮತ್ತು 2ಕ್ಕೆ ಸಂಬಂಧಿಸಿದಂತೆ ಮೀಸಲಾತಿ ನಿಗದಿಪಡಿಸಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ನಿಗದಿಪಡಿಸಿಲ್ಲ.ಸಂಬಂಧಿಸಿದ ಅಧಿಕಾರಿಗಳು ಗಮನ ಹರಿಸಬೇಕಿದೆ. ಇಲ್ಲದಿದ್ದರೆ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ. ಯಾದಗಿರಿ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಆದೇಶ ಹೊರಡಿಸಿ ಮೀಸಲಾತಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರರಾದ ಯಮನಪ್ಪ, ಪರ್ವತರೆಡ್ಡಿ,ಯಂಕಣ್ಣ ಮೇಟಿ,ನಿಂಗಣ್ಣ ಹುಲ್ಲೂರು ಅಗಸ್ತಿಹಾಳ,ರಾಯಪ್ಪ ಮೇಟಿ ಸೇರಿದಂತೆ ಇತರರು ಇದ್ದರು.

About The Author