ರಾಜ್ಯದಲ್ಲಿ ಜಾತಿಗೊಂದು ನಿಗಮವಿದೆ. ಹಾಲುಮತ ನಿಗಮವಿಲ್ಲ ಯಾಕೆ ?.

ಬಸವರಾಜ ಕರೇಗಾರ 

 
ಶಹಾಪೂರ : ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉಪಮುಖ್ಯಮಂತ್ರಿಯಾಗಿ ಮುಖ್ಯಮಂತ್ರಿಯಾಗಿಯೂ ಮುಂದುವರಿದಿದ್ದಾರೆ.ಜಾತಿಗೊಂದು ನಿಗಮ ಸ್ಥಾಪಿಸಿದರು. ಯಡಿಯೂರಪ್ಪನವರು ವೀರಶೈವ ಮತ್ತು ಒಕ್ಕಲಿಗರ ನಿಗಮ ಸ್ಥಾಪನೆ ಮಾಡಿದರು. ಯಾರು ಏನೇ ಅಂದರೂ ಕೇಳದೆ ಲಿಂಗಾಯಿತರಿಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಿದರು. ಆದರೆ ಹಾಲುಮತ ನಿಗಮ ಮಾತ್ರ ಯಾವ ಮುಖ್ಯಮಂತ್ರಿಗಳ ಗಮನಕ್ಕೆ ಬರಲಿಲ್ಲ. ಕಾರಣ ಕುರುಬ ಸಮಾಜಕ್ಕೆ ಸಿದ್ದರಾಮಯ್ಯನವರಿದ್ದಾರಲ್ಲ ಎನ್ನುತ್ತಾರೆ. ಸಿದ್ದರಾಮಯ್ಯನವರು ಐದು ವರ್ಷ ಮುಖ್ಯಮಂತ್ರಿ ಯಾಗಿ ರಾಜ್ಯಕ್ಕೆ ಒಳ್ಳೆಯ ಆಡಳಿತ ಕೊಟ್ಟ ನಂಬರ್ ಒನ್ ಮುಖ್ಯಮಂತ್ರಿಯಾದರು.
    ಸ್ವಜಾತಿ ಪ್ರೇಮ ಇಷ್ಟಪಡಲಿಲ್ಲ. ಸಿದ್ದರಾಮಯ್ಯನವರು ಕೂಡ ಇತರ ಸಮಾಜಕ್ಕೊಂದು ನಿಗಮ ಸ್ಥಾಪಿಸಿದರು. ಆದರೆ ಅಧಿಕಾರ ಅನುಭವಿಸಿದ ಎಲ್ಲ ಮುಖ್ಯಮಂತ್ರಿಗಳು ಕುರುಬರನ್ನು ಮರೆತಿದ್ದಾರೆ. ಹಾಲುಮತಕ್ಕೊಂದು ನಿಗಮ ಮಾಡಬಾರದೇಕೆ ಎನ್ನುವ ಭಾವನೆ ಯಾವ ಮುಖ್ಯಮಂತ್ರಿಗಳಲ್ಲಿ ಬರಲಿಲ್ಲವೇಕೆ ಎನ್ನುವ ಪ್ರಶ್ನೆ ಇದುವರೆಗೂ ಕಾಡುತ್ತಿದೆ. ಇತ್ತೀಚೆಗೆ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬ್ರಹ್ಮಶ್ರೀ ನಾರಾಯಣಗುರು ಅವರ ನಿಗಮ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಆದರೆ ಕುರುಬರ ಹಾಲುಮತ ನಿಗಮ ಕನಸಾಗಿಯೆ ಉಳಿಯಿತು ಎನ್ನುವ ಕೊರಗು ಮತ್ತೆ ಕಾಡಲಾರಂಭಿಸಿದೆ. ಜಾತಿಗೆ ಅನುಗುಣವಾಗಿ ಸರ್ಕಾರ ಕೋಟಿಗಟ್ಟಲೆ ಹಣವನ್ನು ಬಜೆಟ್ ನಲ್ಲಿ ಮೀಸಲಿಡುತ್ತಿದೆ.ಆ ಹಣವನ್ನು ಆ ಜಾತಿಯವರು ಮಾತ್ರ ಬಳಕೆ ತೆಗೆದುಕೊಳ್ಳಬೇಕು. ಅದಕ್ಕೆಂದೇ ಜಾತಿಗೊಂದು ನಿಗಮ ಸ್ಥಾಪಿಸಿದೆ. ಹಾಗಾದರೆ ಕುರುಬರ ಸ್ಥಿತಿ ಹೇಗೆ ?, ನಾವು ಯಾರನ್ನು ಕೇಳಬೇಕು. ನಮ್ಮದೆಯಾದ ನಿಗಮ ಬೇಡವೇ ?.ಕನಸಾಗಿಯೆ ಉಳಿದ ಹಾಲುಮತ ನಿಗಮ. ಕೇಳುವವರೇ ಇಲ್ಲವಾಗಿದೆ.

About The Author