ಕ್ಷಯರೋಗ ಮುಕ್ತ ಭಾರತಕ್ಕಾಗಿ ಕ್ರಮ : ಕ್ಷಯರೋಗಿಗಳಿಗೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ತಪಾಸಣೆ

ಶಹಾಪುರ : ತಾಲೂಕಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಕ್ಷಯರೋಗ ನಿರ್ಮೂಲನ ಕೇಂದ್ರ ಯಾದಗಿರ ವತಿಯಿಂದ ಪ್ರಧಾನಮಂತ್ರಿ ಕ್ಷಯಮುಕ್ತ ಭಾರತ ಅಭಿಯಾನದಡಿಯಲ್ಲಿ ನಿಕ್ಷಯ ಮಿತ್ರರಾಗಿ ಕ್ಷಯರೋಗಿಗಳಿಗೆ ಬೆಂಬಲ ಮತ್ತು ದತ್ತು ಪಡೆಯುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
         ಈ ಸಂದರ್ಭದಲ್ಲಿ ಜಿಲ್ಲಾ ಕ್ಷಯರೋಗ ನಿರ್ಮೂಲನ ಅಧಿಕಾರಿಗಳಾದ ಡಾ.ಸಂಜೀವಕುಮಾರ ಅವರು ಕ್ಷಯ ರೋಗಿಗಳಿಗೆ ವೈಯಕ್ತಿಕ ಮುಂಜಾಗ್ರತ ಕ್ರಮಗಳು, ಸಾಮಾಜಿಕವಾಗಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು, ಸರಕಾರಿ ಆಸ್ಪತ್ರೆಯಲ್ಲಿ ದೊರೆಯುವ ಉಚಿತ ಪರೀಕ್ಷೆ, ಸಮಾಲೋಚನೆ, ಉಚಿತ ಚಿಕಿತ್ಸೆ ಕ್ರಮಗಳ ಬಗ್ಗೆ ತಿಳಿಸಿದರು. ಪ್ರತಿ ವರ್ಷ ಟಿಬಿಯಿಂದ ಮರಣ ಹೊಂದುತ್ತಾರೆ. ಆದ್ದರಿಂದ ಎಲ್ಲ ಜನರು ಕ್ಷಯರೋಗ ಕೆಮ್ಮು. ಜ್ವರ, ತೂಕ ಕಡಿಮೆಯಾಗುವುದು, ರಾತ್ರಿ ವೇಳೆ ಬೆವರುವಿಕೆ, ಕಂಕುಳು ಮತ್ತು ಕತ್ತುಗಳಲ್ಲಿ ಗಡ್ಡೆಗಳು ಕಂಡು ಬಂದಲ್ಲಿ ಕೂಡಲೇ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಕ್ಷಯರೋಗದ ತಪಾಸಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
              ಕ್ಷಯರೋಗದ ಬಗ್ಗೆ ಯಾವುದೇ ಹಿಂಜರಿಕೆ ಬೇಡ, ಕ್ಷಯರೋಗ ಸಂಪೂರ್ಣವಾಗಿ ಗುಣಮುಖ ಪಡಿಸಬಹುದು ಎಂದು ತಿಳಿಸಿದರು.
ಮಂಜುನಾಥ ಎಡಿಸಿ ಯಾದಗಿರ ರವರು ಮಾತನಾಡಿ, ಕ್ಷಯ ಮುಕ್ತ ಭಾರತ ಮಾಡಲು ಸಮುದಾಯದ ಸಹಕಾರ ಬಹಳ ಅತ್ಯವಶ್ಯಕವಾಗಿರುತ್ತದೆ ಎಂದು ತಿಳಿಸಿದರು.
ಅಶೋಕ ಸತ್ಯ ಸಾಯಿ ಫಾರ್ಮಾ ರವರಿಂದ 100 ಕ್ಷಯರೋಗಿಗಳಿಗೆ ಪ್ರೋಟಿನ್ ಪೌಡರ್ ಗಳನ್ನು ವಿತರಿಸಲಾಯಿತು. ಹಾಗೂ ಡಾ.ಗಂಗಾಧರ ಚಟ್ರಿಕಿ ವೈದ್ಯಾಧಿಕಾರಿಗಳು ಸ.ಸಾ.ಆ.ಶಹಾಪೂರ ರವರಿಂದ ಆರೋಗ್ಯ ಧಾನ್ಯಗಳ ಕಿಟ್ ಗಳನ್ನು ವಿತರಿಸಲಾಯಿತು.
        ಕಾರ್ಯಕ್ರಮದಲ್ಲಿ ಡಾ.ಯಲ್ಲಪ್ಪ ಪಾಟೀಲ್ ಮುಖ್ಯವೈದ್ಯಾಧಿಕಾರಿಗಳು, ಖಾಸಗಿ ಔಷಧಿ ವಿತರಕ ಸಂಘ ಅಧ್ಯಕ್ಷರು ಅಯ್ಯನಗೌಡ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಮಲ್ಲಪ್ಪ ಕಾಂಬ್ಳೆ,ಸಂಗಣ್ಣ ನುಚ್ಚಿನ,ಬಸವರಾಜ ಅಂಗಡಿ,ಹಾಗೂ ಬಸವರಾಜ ಬಿ.ಹೆಚ್.ಇ.ಓ,ಹಣಮಂತ ಎಸ್.ಟಿ.ಎಸ್,
ಸಂತೋಷ ಎಸ್.ಟಿ.ಎಸ್, ತಹಮೀನ ಷೇಕ್ ಎಸ್.ಟಿ.ಎಲ್.ಎಸ್, ರಾಧಾ ಎಲ್.ಟಿ.ಒ, ಶೋಭಾ ಟಿ.ಬಿ.ಹೆಚ್.ವಿ  ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು
ಸಾಯಬಣ್ಣ ನಿರೂಪಿಸಿದರು.

About The Author