ಕರೆಗಾರ ನಿಂಗಯ್ಯನ ಕರೆ (ನಿಜ) ನುಡಿಗಳು

ಶಹಾಪೂರ:ವಡಗೇರಿ ತಾಲೂಕಿನ ಬಸ್ವಂತಪುರ ಗ್ರಾಮದ ಕರೆಗಾರ ನಿಂಗಯ್ಯನ ನುಡಿಗಳು ಕರೆ(ನಿಜ) ನುಡಿಗಳಾಗುತ್ತವೆ. ಕರೆಗಾರ ಎನ್ನುವ ಶಬ್ದವೇ ಹೇಳಿದಂತೆ ಅವರಾಡುವ ಮಾತುಗಳು ನಿಜವಾಗುತ್ತವೆ ಎನ್ನುವುದು ತಲತಲಾಂತರದಿಂದ ನಡೆದು ಬಂದಿದೆ. ಪ್ರಸ್ತುತದಲ್ಲಿರುವ ನಿಂಗಯ್ಯ ಮುತ್ಯಾನ ಮಾತುಗಳು ಕರೆ ನುಡಿಗಳು ಎನ್ನುವುದಕ್ಕೆ ನೂರಾರು ಅವರ ನಿಜ ಮಾತುಗಳೇ ಅವರ ನಾಲಿಗೆಯಿಂದ ಆಡಿದ ಮಾತುಗಳೇ ಸತ್ಯವಾಗಿವೆ.ಅವರ ಹಿಂದಿನವರು ಕೂಡ ಇದೇ ರೀತಿಯಾಗಿ ದೇವರ ಹೇಳಿಕೆಯಂತೆ ಮಾತನಾಡುತ್ತಿದ್ದರು. ಅವರ ತಾತನವರ ಸಮಾಧಿ ಇಂದಿಗೂ ಬಸವಂತಪುರ ಗ್ರಾಮದಲ್ಲಿದೆ. ಅವರ ಹೆಸರು ನಿಂಗಯ್ಯ ಮುತ್ಯಾ ಎಂದಿತ್ತು. ಅವರಾಡುವ ಸತ್ಯದ ಮಾತುಗಳಿಂದ ಕರೆಗಾರ ನಿಂಗಯ್ಯ ಮುತ್ಯಾ ಎಂದು ಕರೆಯಲಾಯಿತು.ಗ್ರಾಮದಲ್ಲಿ ಅವರ ಸಮಾಧಿ ಇದೆ.ಪಕ್ಕದಲ್ಲಿ ಶ್ರೀ ಮಾರಿಕಾಂಬ ದೇವಸ್ಥಾನವಿದೆ. ಪ್ರಸಿದ್ಧವಾದ ದೇವಸ್ಥಾನ.ಕೋಟಿ ರೂಪಾಯಿ ವೆಚ್ಚ ಮಾಡಿ ಕಟ್ಟಲಾಗಿದೆ. ಅಂತಹ ಮಾರಿಕಾಂಬೆಯ ಜೊತೆ ಹಿಂದಿನ ಕರೆಗಾರ ನಿಂಗಯ್ಯ ಮುತ್ಯಾ  ಮಾತನಾಡುತ್ತಿದ್ದರು ಎನ್ನುವ ಪ್ರತೀತಿಯಿದೆ.ಅವರನ್ನು ಮಾತನಾಡಿಸಲು ಜನರು ಭಯಪಡುತ್ತಿದ್ದರು. ಕರೇಗಾರ ನಿಂಗಯ್ಯ ಮುತ್ಯ ಮಹಾನ್ ಸಾಧಕರಾಗಿದ್ದರು. ಅವರ ನಾಲಿಗೆಯಿಂದ ಬರುವ ನುಡಿಗಳು ಕರೆ ಆಗುತ್ತಿದ್ದವು.

About The Author