ಕರ್ನಾಟಕ ಅಹಿಂದ ಜನ ಸಂಘದ ಚಿತ್ರದುರ್ಗ ಜಿಲ್ಲಾ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ಸುಧಾ ನೇಮಕ

ಬೆಂಗಳೂರು : ಕರ್ನಾಟಕ ಅಹಿಂದ ಜನ ಸಂಘದ ಚಿತ್ರದುರ್ಗ ಜಿಲ್ಲೆಯ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ಸುಧಾ ಆರ್ ಶ್ರೀನಿವಾಸ್ ಮೂರ್ತಿ ಬಿ.ಹೆಚ್ ರವರನ್ನು ನೇಮಕ ಮಾಡಲಾಗಿದೆ.

ಅಹಿಂದ ಜನ ಸಂಘದ ಸಂಸ್ಥಾಪಕರು ಮತ್ತು ರಾಜ್ಯಾಧ್ಯಕ್ಷರಾದ ಅಯ್ಯಪ್ಪಗೌಡ ಸುಧಾ ಆರ್ ಶ್ರೀನಿವಾಸ್ ಮೂರ್ತಿ ಬಿ.ಹೆಚ್ಅವರನ್ನು ನೇಮಕ ಮಾಡಿದ್ದು, ಅಹಿಂದ ಸಮುದಾಯದ ಜನರು ಸಾಮಾಜಿಕ ಶೈಕ್ಷಣಿಕ, ಆರ್ಥಿಕ ಶ್ರೇಯೋಭಿವೃದ್ಧಿ ಹೊಂದಲು ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಿ ಎಂದು ಹೇಳಿದ್ದಾರೆ.ತಮ್ಮ ನೇಮಕದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಸುಧಾ ಆರ್ ಶ್ರೀನಿವಾಸ್ ಮೂರ್ತಿ ಬಿ.ಹೆಚ್.ಅಹಿಂದ ಸಮುದಾಯದ ಜನರ ಸಹಕಾರದಿಂದ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *