ಶಹಾಪುರ ಜಿಟಿಜಿಟಿ ಮಳೆ ಗೋಡೆ ಕುಸಿದು ಮಹಿಳೆ ಸಾವು

ಶಹಾಪುರ : ತಾಲೂಕಿನಾದ್ಯಂತ ಕಳೆದ ಎರಡು ದಿನಗಳಿಂದ ಜಿಟಿಜಿಟಿ ಮನೆ ಮಳೆ ಸುರಿಯುತ್ತಿದ್ದು ತಾಲೂಕಿನ ಹುರಸುಂಡಗಿ ಗ್ರಾಮದಲ್ಲಿ ಭಾನುವಾರದಂದು ಮಧ್ಯಾಹ್ನ 12:00 ಗಂಟೆ ಸುಮಾರು  ಗೋಡೆ ಕುಸಿದು ಸಕಿನಾಭಿ ಗಂಡ ಮಹೆಬೂಬಸಾಬ್(70) ಎನ್ನುವ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ.ಹುರಸಗುಂಡಗಿ ಗ್ರಾಮದ ಮಲ್ಲಿಕಾರ್ಜುನ ಚಿತ್ತಾಪುರ ಎನ್ನುವಾತನ ಮನೆಯ ಕಟ್ಟೆಯ ಮೇಲೆ ಗೋಡೆಗೆ ಹೊಂದಿಕೊಂಡು ಕುಳಿತಿರುವಾಗ ಗೋಡೆ ಕುಸಿದು ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ. ತಕ್ಷಣವೇ ಶಹಾಪೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರ್ಗಿ ನಗರಕ್ಕೆ ರವಾನೆ ಮಾಡಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಕಲಬುರ್ಗಿಯ ಜೀಮ್ಸ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಭೀಮರಾಯನಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.