ರಾಜೇಶ್ ಕುಟುಂಬಕ್ಕೆ ಸಹಾಯ : ಹೃದಯ ವೈಶಾಲ್ಯತೆ ಮೆರೆದ ನಿಖಿಲ್ ವಿ ಶಂಕರ್

ಬಸವರಾಜ ಕರೇಗಾರ

ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ನಿಖಿಲ್ ವಿ ಶಂಕರ್ ಚಿತ್ರನಟ ರಾಜೇಶ್ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ. ಬಲಗೈಯಲ್ಲಿ ಕೊಟ್ಟಿರುವುದು ಎಡಗೈಯಲ್ಲಿ ಗೊತ್ತಾಗಬಾರದು ಎನ್ನುವುದು ನಿಖಿಲ್ ವಿ ಶಂಕರ್ ಅವರ ಬಡವರ ಕಾಳಜಿಯ ಬಗ್ಗೆ ಅವರು ಮಾಡುತ್ತಿರುವ ಸೇವೆ ಅಪಾರವಾದದ್ದು. ಚಿತ್ರನಟ ರಾಜೇಶ್ (ಜಂಗಲ್ ಜಾಕಿ ಚಿತ್ರದ ನಟ) ಕೆಲ ದಿನಗಳ ಹಿಂದೆ ಮಾನಸಿಕ ಅಸ್ವಸ್ಥರಾಗಿ ತೀರಿಕೊಂಡಿದ್ದ. ರಾಜೇಶ್ ಕುಟುಂಬಕ್ಕೆ ಪುನೀತ್ ರಾಜಕುಮಾರ್ ಅವರು ಬಂಗಾರದ ಚೈನನ್ನು ಕೊಡುಗೆಯಾಗಿ ನೀಡಿದ್ದರು.

ರಾಜೇಶ್ ಕುಟುಂಬ ಅಕ್ಕ ಅಮ್ಮ ಮಗಳು ಪತ್ನಿ ಇಷ್ಟು ಜನರ ಕುಟುಂಬ ಬಡತನದಲ್ಲಿ ಬೆಂದಿತ್ತು. ರಾಜೇಶ್ ಪತ್ನಿಯ ತಂದೆ ಅನಾರೋಗ್ಯದಿಂದ ಬಳಲುತ್ತಿದ್ದರು. ತಂದೆಯನ್ನು ಉಳಿಸಿಕೊಳ್ಳಲು ಪುನೀತ್ ರಾಜಕುಮಾರ್ ರವರು ನೀಡಿದ ಚಿನ್ನದ ಚೈನನ್ನು ಅಡವಿಟ್ಟಿದ್ದರು. ತಂದೆ ಚಿಕಿತ್ಸೆ ಫಲಕಾರಿಯಾಗದೆ ತೀರಿಹೋದ. ಆದರೆ ಅಡವಿಟ್ಟ ಚಿನ್ನವನ್ನು ಹಿಂತೆಗೆದುಕೊಳ್ಳುವ ಸ್ಥಿತಿಯಲ್ಲಿ ರಾಜೇಶನ ಕುಟುಂಬದವಿರಲಿಲ್ಲ. ಇದನ್ನು ತಿಳಿದುಕೊಂಡ ನಿಖಿಲ್ ವಿ ಶಂಕರ್ ರಾಜೇಶನ ಕುಟುಂಬಕ್ಕೆ ಭೇಟಿ ನೀಡಿ ಪುನೀತ್ ರಾಜಕುಮಾರ ನೀಡಿದ ಅಡವಿಟ್ಟ ಚಿನ್ನವನ್ನು ಬಿಡಿಸಿಕೊಟ್ಟು ಮಾನವೀಯತೆ ಮೆರೆದಿದ್ದಾರೆ.

ನಾನು ರಾಜೇಶ ಕುಟುಂಬದವರಿಗೆ ಆಕಸ್ಮಿಕ ಭೇಟಿ ಮಾಡಿದಾಗ ಚಿನ್ನ ಅಡವಿಟ್ಟ ಬಗ್ಗೆ ತಿಳಿಯಿತು. ಅಡವಿಟ್ಟ ಚಿನ್ನ ಪುನೀತ್ ರಾಜಕುಮಾರ್ ಅವರದೆಂದು ಗೊತ್ತಾದ ಮೇಲೆ ಅದನ್ನು ಬಿಡಿಸಿಕೊಟ್ಟಿದ್ದೇನೆ.ಪುನೀತ್ ರಾಜಕುಮಾರ್ ಅವರ ದೊಡ್ಡ ಗುಣ. ಅಪಾರ ಜನರಿಗೆ ಸಹಾಯ ಮಾಡಿದ್ದಾರೆ. ಆದರೆ ಅವರೆಂದು ತೋರಿಸಿಕೊಳ್ಳಲಿಲ್ಲ ಎಂದು ನಿಖಿಲ್ ವಿ ಶಂಕರ್ ಹೇಳಿದರು.

ಕೆಲವರು ಎಲ್ಲವನ್ನು ಮಾಡುತ್ತಾರೆ. ಆದರೆ ಏನನ್ನು ಬಯಸದ ಹಾಗೆಯೆ ಹಿಂದಿರುಗುವದಿದೆಯಲ್ಲ ಅದು ದೊಡ್ಡ ಗುಣ.ಅವರಲ್ಲಿ ಒಬ್ಬರು ನಿಖಿಲ್ ವಿ ಶಂಕರ್.
ದೇಶಕ್ಕೆ ನಾಡಿಗೆ ಯುವ ಜನಾಂಗದ ಕೊಡುಗೆ ಏನು ಎನ್ನುವುದನ್ನು ತೋರಿಸುತ್ತಾರೆ. ಅತ್ಯಂತ ಸಾಮಾಜಿಕ ಹೆಸರಾಂತ ಮಾಜಿ ಜಿಲ್ಲಾಧಿಕಾರಿ ಶಂಕರ್ ಅವರ ಮಗ ನಿಖಿಲ್ ವಿ ಶಂಕರ್ ಎನ್ನುವಂತಹ ಹೆಸರನ್ನು ಕೇಳುವುದಕ್ಕೆ ರೋಮಾಂಚನಕಾರಿಯಾಗುತ್ತದೆ. ಭವಿಷ್ಯತ್ವದ ಕಣ್ಣು ನಮ್ಮ ಕಣ್ಣೆದುರಿಗೆ ಇದೆ ಎನ್ನುವ ಅಭಿಮಾನವು ಮೂಡುತ್ತದೆ ಎಂದು ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿಗಳಾದ ಡಾ. ಮಲ್ಲಿಕಾ ಘಂಟಿಯವರು ನಿಖಿಲ್ ವಿ ಶಂಕರ್ ಅವರ ಮಾನವೀಯತೆ ಬಗ್ಗೆ ಹೇಳಿದ್ದಾರೆ.

About The Author