ತಿಮ್ಮಯ್ಯ ಮುತ್ಯಾ ದೇವಸ್ಥಾನಕ್ಕೆ ನಿಖಿಲ್ ಶಂಕರ್ ಭೇಟಿ, ಒಂದು ಲಕ್ಷ ರೂ.ದೇಣಿಗೆ

ಶಹಾಪುರ : ಕರ್ನಾಟಕ ಕಾಂಗ್ರೆಸ್ ಪಕ್ಷದ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ನಿಖಿಲ್ ವಿ ಶಂಕರ್ ಕರ್ನಾಟಕ ಕಾಂಗ್ರೆಸ್ ಪಕ್ಷದ ಯುವ ಘಟಕದ ಅಧ್ಯಕ್ಷ ಸ್ಥಾನ ಚುನಾವಣೆಗೆ ಸ್ಪರ್ಧಿಸಿದ್ದು ಉತ್ತರ ಕರ್ನಾಟಕದಿಂದ ಯುವ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಏಕೈಕ ವ್ಯಕ್ತಿ ನಿಖಿಲ್ ವಿ ಶಂಕರ್. ಅದರ ನಿಮಿತ್ತ ಯಾದಗಿರಿ ಜಿಲ್ಲೆಯಾದ್ಯಂತ ಪ್ರಚಾರ ಕೈಗೊಂಡಿದ್ದರು. ಸುರಪುರ ತಾಲೂಕಿನ ಮುಷ್ಟಿರದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿದ ಅವರು ಸಂಕ್ರಾಣಿಕಲ್ಲು ಎತ್ತುವ ಸ್ಪರ್ಧೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗ್ರಾಮಸ್ಥರು ಗ್ರಾಮದಲ್ಲಿ ಕನಕದಾಸರ ಮೂರ್ತಿ ಕೊಡಿಸಲು ಮನವಿ ಮಾಡಿದರು. ಮೂರ್ತಿ ಕೊಡಿಸುವುದಾಗಿ ಆಶ್ವಾಸನೆ ನೀಡಿದರು. ನಂತರ ಕವಡಿಮಟ್ಟಿ ಗ್ರಾಮದ ತಿಮ್ಮಯ್ಯ ಮುತ್ಯ ದೇವಸ್ಥಾನಕ್ಕೆ ಭೇಟಿ ನೀಡಿದ ನಿಖಿಲ್ ವಿ ಶಂಕರ್ ತಿಮ್ಮಯ್ಯ ಮುತ್ಯ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದರು.

ಈ ಸಂದರ್ಭದಲ್ಲಿ ವಿಜಯ ಬಾಧ್ಯಪುರ, ನಿಂಗಪ್ಪ ಕೆಂಗೂರಿ, ಮಾಜಿ ಎಪಿಎಂಸಿ ಸದಸ್ಯ ಪರಮಣ್ಣ ಶಾಂತಪುರ, ಭೀಮಣ್ಣ ಕೆಂಗೂರಿ, ಅಯ್ಯಪ್ಪ, ಮಲ್ಲಣ್ಣ ವಕೀಲ, ನಿಂಗಪ್ಪ ಬೋವಿ, ಶಿವಪ್ಪ ಭೋವಿ ಬೀರಪ್ಪ ಕವಡಿಮಟ್ಟಿ, ನಿಂಗಪ್ಪ ಪೂಜಾರಿ,ಗಂಗಪ್ಪ ಮುಷ್ಟೂರು  ಸೇರಿದಂತೆ ಹಲವಾರು ಜನರು ಇದ್ದರು.

Leave a Reply

Your email address will not be published. Required fields are marked *