ಬಾಗಲಕೋಟೆ ಮಹಿಳಾ ಜಿಲ್ಲಾ ಉಪಾಧ್ಯಕ್ಷೆಯಾಗಿ ಜಯಶ್ರೀ ಮುತ್ತಲಗೇರಿ ನೇಮಕ

ಬೆಂಗಳೂರು :- ಕರ್ನಾಟಕ ಅಹಿಂದ ಜನ ಸಂಘದ ಬಾಗಲಕೋಟೆ ಜಿಲ್ಲೆಯ ಮಹಿಳಾ ಜಿಲ್ಲಾ ಉಪಾಧ್ಯಕ್ಷೆಯಾಗಿ ಜಯಶ್ರೀ ಮುತ್ತಲಗೇರಿ ರವರನ್ನು ನೇಮಕ ಮಾಡಲಾಗಿದೆ.

ಅಹಿಂದ ಜನ ಸಂಘದ ಸಂಸ್ಥಾಪಕರು ಮತ್ತು ರಾಜ್ಯಧ್ಯಕ್ಷರಾಗಿರುವ ಅಯ್ಯಪ್ಪಗೌಡ ಅವರು ಜಯಶ್ರೀ ಮುತ್ತಲಗೇರಿ ಅವರನ್ನು ನೇಮಕ ಮಾಡಿ ಆದೇಶಿಸಿದ್ದಾರೆ.ಅಹಿಂದ ಸಮುದಾಯದ ಜನರು ಸಾಮಾಜಿಕ ಶೈಕ್ಷಣಿಕ, ಆರ್ಥಿಕವಾಗಿ ಶ್ರೇಯೋಭಿವೃದ್ಧಿ ಹೊಂದಲು ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಿ ಎಂದು ಹೇಳಿದ್ದಾರೆ.

ತಮ್ಮನೇಮಕದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಜಯಶ್ರೀ ಅವರು ಅಹಿಂದ ಸಮುದಾಯದ ಜನರ ಸಹಕಾರದಿಂದ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *