ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾದ ಚನ್ನಬಸವ ಅವರಿಗೆ ಸನ್ಮಾನ

ರಾಯಚೂರು: ರಾಯಚೂರು ವಿಶ್ವವಿದ್ಯಾಲಯಕ್ಕೆ ಸಿಂಡಿಕೇಟ್ ಸದಸ್ಯರಾಗಿ ಚನ್ನಬಸವ ಅವರನ್ನು ಸರ್ಕಾರ ಆಯ್ಕೆ ಮಾಡಿದ್ದು ಅವರಿಗೆ ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕೆ. ರಮೇಶ್ ಮೂಡಲದಿನ್ನಿ, ಜಿಲ್ಲಾಧ್ಯಕ್ಷರು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘ ರಾಯಚೂರು, ವೀರೇಶ್ ಡಿ ರಾಂಪುರ ತಾಲೂಕಾಧ್ಯಕ್ಷರು, ತಿಮ್ಮಪ್ಪ ಮರ್ಚಾಟ್ಹಾಳ, ನರಸಣ್ಣ ಶಾಸ್ತ್ರಿ, ರಾಮನಗೌಡ, ಗೂಳಪ್ಪ,ವಿಷ್ಣು ಬೊಮ್ಮನಾಳ, ಅಮರೇಶ ಸ್ವಾಮಿ, ವೀರೇಶ್ ಮೂಡಲದಿನ್ನಿ ಸೇರಿದಂತೆ ಇತರರು ಇದ್ದರು.