ಕರ್ನಾಟಕ ಅಹಿಂದ ಜನ ಸಂಘದ ಬಾಗಲಕೋಟೆ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ರೇಣುಕಾ ನರಹಟ್ಟಿ ನೇಮಕ

ಬೆಂಗಳೂರು : ಕರ್ನಾಟಕ ಅಹಿಂದ ಜನ ಸಂಘದ ಬಾಗಲಕೋಟೆ ಜಿಲ್ಲೆಯ ಮಹಿಳಾ ಜಿಲ್ಲಾಧ್ಯಕ್ಷೆಯಾಗಿ ರೇಣುಕಾ ಶ್ರೀ ನರಹಟ್ಟಿ ರವರನ್ನು ನೇಮಕ ಮಾಡಲಾಗಿದೆ ಎಂದು ಅಹಿಂದ ಜನ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಅಯ್ಯಪ್ಪಗೌಡ ತಿಳಿಸಿದರು. ಅಹಿಂದ ಸಮುದಾಯದ ಜನರು ಸಾಮಾಜಿಕ,ಶೈಕ್ಷಣಿಕ, ಆರ್ಥಿಕ ಶ್ರೇಯೋಭಿವೃದ್ಧಿ ಹೊಂದಲು ಸಂಘಟನೆ ಮತ್ತು ಬಲವರ್ಧನೆಗಾಗಿ ಶ್ರಮಿಸಿ ಎಂದು ಹೇಳಿದ್ದಾರೆ.ತಮ್ಮ ನೇಮಕದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ರೇಣುಕಾ ಅವರು ಅಹಿಂದ ಸಮುದಾಯದ ಜನರ ಸಹಕಾರದಿಂದ ಸಮುದಾಯದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.

Leave a Reply

Your email address will not be published. Required fields are marked *