ಮಹಾಶೈವ ಧರ್ಮಪೀಠದಲ್ಲಿ 101 ನೆಯ ‘ ಶಿವೋಪಶಮನ ಕಾರ್ಯ’

ದೇವದುರ್ಗ : (ಗಬ್ಬೂರು ಅಗಸ್ಟ್ 25,2024) : ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ಅಗಸ್ಟ್ 25 ರ ಆದಿತ್ಯವಾರದಂದು 101 ನೆಯ ‘ ಶಿವೋಪಶಮನ ಕಾರ್ಯ’ ನಡೆಯಿತು.ಮಹಾಶೈವ ಧರ್ಮಪೀಠದ ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರು ವಿಶ್ವೇಶ್ವರನ ಸನ್ನಿಧಿಯನ್ನರಸಿ ಶ್ರೀಕ್ಷೇತ್ರ ಕೈಲಾಸಕ್ಕೆ ಬಂದಿದ್ದ ಭಕ್ತರುಗಳಿಗೆ ಶಿವಾನುಗ್ರಹವನ್ನು ಕರುಣಿಸಿದರು.

ಪೀಠಾಧ್ಯಕ್ಷರು ಮೂರು ರವಿವಾರಗಳಂದು ಶ್ರೀಕ್ಷೇತ್ರ ಕೈಲಾಸದಲ್ಲಿ ಅನುಪಸ್ಥಿತರಿದ್ದ ಕಾರಣದಿಂದ ಇಂದು ಭಕ್ತರ ಜನದಟ್ಟಣೆಯೇ ನೆರೆದಿತ್ತು.ರಾಜ್ಯದ ಬೆಂಗಳೂರು ತುಮಕೂರುಗಳಿಂದಲ್ಲದೆ ನೆರೆಯ ರಾಜ್ಯಗಳಾದ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರುಗಳು ಶ್ರೀಕ್ಷೇತ್ರ ಕೈಲಾಸಕ್ಕೆ ಆಗಮಿಸಿದ್ದರು.

ಮಹಾಶೈವ ಧರ್ಮಪೀಠದ ಶ್ರೀಕ್ಷೇತ್ರ ಕೈಲಾಸದಲ್ಲಿ ನೆಲೆನಿಂತು ಲೋಕೋದ್ಧಾರದ ಲೀಲೆಯನ್ನಾಡುತ್ತಿರುವ ವಿಶ್ವೇಶ್ವರ ಶಿವನು ಭಕ್ತರ ಸರ್ವವಿಧ ಸಂಕಷ್ಟಗಳನ್ನು ಪರಿಹರಿಸಿ ಸರ್ವ ಇಷ್ಟಾರ್ಥ ಸಿದ್ಧಿಗಳನ್ನು ಅನುಗ್ರಹಿಸುತ್ತ ‘ ಮಾತನಾಡುವ ಮಹಾದೇವ’ ಎಂದು ಪ್ರಸಿದ್ಧಿಯಾಗಿದ್ದಾನೆ.ಪೀಠಾಧ್ಯಕ್ಷರಾದ ಶ್ರೀ ಮುಕ್ಕಣ್ಣ ಕರಿಗಾರ ಅವರ ಮೂಲಕ ತನ್ನನ್ನು ನಂಬಿ ಬರುವ ಭಕ್ತರ ಅನಿಷ್ಟಗಳನ್ನು ಕಳೆದು ಇಷ್ಟಾರ್ಥಗಳನ್ನು ಅನುಗ್ರಹಿಸುತ್ತಿರುವದರಿಂದ ರಾಜ್ಯ ಹೊರರಾಜ್ಯಗಳಿಂದ ಭಕ್ತರುಗಳು ಮಹಾಶೈವ ಧರ್ಮಪೀಠದತ್ತ ಧಾವಿಸಿ ಬರುತ್ತಿದ್ದಾರೆ.

ವಿಶ್ವೇಶ್ವರ ಶಿವನು ತನ್ನ ಸನ್ನಿಧಿಯನ್ನರಸಿ ಬರುವ ಭಕ್ತರುಗಳ ಭಯಂಕರ ರೋಗಗಳನ್ನು ಗುಣಪಡಿಸುತ್ತ,ಮಕ್ಕಳಾಗದವರಿಗೆ ಸಂತಾನ ಭಾಗ್ಯವನ್ನು ಕರುಣಿಸುತ್ತಿರುವುದರ ಜೊತೆಗೆ ಮದುವೆಯಾಗದ ತರುಣ ತರುಣಿಯರಿಗೆ ತನ್ನ ಸನ್ನಿಧಿಗೆ ಬಂದ ತಿಂಗಳೊಪ್ಪತ್ತಿನಲ್ಲಿಯೇ ಕಂಕಣಭಾಗ್ಯವನ್ನು ಕರುಣಿಸುತ್ತಿರುವುದರಿಂದ ವಿವಾಹಾರ್ಥಿಗಳಾಗಿ ಮಹಾಶೈವ ಧರ್ಮಪೀಠಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ವಾರದಿಂದ ವಾರಕ್ಕೆ ಹೆಚ್ಚುತ್ತಿದ್ದು ಇಂದಿನ ಶಿವೋಪಶಮನದಲ್ಲಿ ಇಪ್ಪತ್ತಕ್ಕೂ ಹೆಚ್ಚುಜನ ತರುಣ ತರುಣಿಯರು ಮದುವೆಯ ಭಾಗ್ಯವನ್ನು ಅನುಗ್ರಹಸಲು ಕೋರಿಬಂದಿದ್ದು ವಿಶೇಷವಾಗಿತ್ತು. ಹಿಂದುಗಳಂತೆ ಮುಸ್ಲಿಂ ಸಮುದಾಯದ ಭಕ್ತರುಗಳು ಸಹ ವಿವಾಹಾರ್ಥಿಗಳಾಗಿ ಬಂದಿದ್ದರು.ಚಂದ್ರಶೇಖರ ಎನ್ನುವ ಐದುವರ್ಷದ ಮಾತುಬಾರದ ಬಾಲಕನೊಬ್ಬನು ಇಂದಿನ ಶಿವೋಪಶಮನ ಕಾರ್ಯಕ್ಕೆ ಬಂದಿದ್ದು ಪೀಠಾಧ್ಯಕ್ಷರು ಆ ಬಾಲಕನಿಗೆ ಶಿವಾನುಗ್ರಹ ಕರುಣಿಸಿದರು.

ಮಹಾಶೈವ ಧರ್ಮಪೀಠದ ಆಡಳಿತಾಧಿಕಾರಿ ತ್ರಯಂಬಕೇಶ,ದೇವಸ್ಥಾನಗಳ ಅರ್ಚಕ ದೇವರಾಜ ಕರಿಗಾರ,ಮೂಲ ಕಾರ್ಯಕರ್ತರುಗಳಾದ ಗೋಪಾಲ ಮಸೀದಪುರ,ಈರಪ್ಪ ಹಿಂದುಪುರ,ದಾಸೋಹಸಮಿತಿಯ ಅಧ್ಯಕ್ಷ ಗುರುಬಸವ ಹುರುಕಡ್ಲಿ,ವಿವಿಧ ಸಮಿತಿಗಳ ಪದಾಧಿಕಾರಿಗಳಾದ ಶಿವಯ್ಯಸ್ವಾಮಿ ಮಠಪತಿ,ಶರಣಗೌಡ ಮಾಲಿಪಾಟೀಲ್ ಹೊನ್ನಟಗಿ,ಚಿತ್ರಕಲಾವಿದ ಶರಣಪ್ಪ ಬೂದಿನಾಳ, ಗಬ್ಬೂರಿನ ಗಾಯತ್ರಿ ಪೀಠದ ಅಧ್ಯಕ್ಷರಾದ ಉದಯಕುಮಾರ ಪಂಚಾಳ,ಬಾಬುಗೌಡ ಯಾದವ ಸುಲ್ತಾನಪುರ,ಮೃತ್ಯುಂಜಯ ಯಾದವ,ಸಿದ್ರಾಮಯ್ಯಸ್ವಾಮಿ ಹಳ್ಳಿ,ವೀರಭದ್ರಯ್ಯಸ್ವಾಮಿ ಹಳ್ಳಿ,ರಘುನಂದನ್ ಪೂಜಾರಿ,ಪತ್ರಕರ್ತ ರಮೇಶ ಖಾನಾಪುರ,ಯಲ್ಲಪ್ಪ ಕರಿಗಾರ,ರಂಗನಾಥ ಮಸೀದಪುರ,ವೆಂಕಟೇಶ ಮಸೀದಪುರ,ಬೂದಿಬಸವ ಶಾಂತಪ್ಪ ಕರಿಗಾರ,ಶಿವಕುಮಾರ ಜಿ ಕರಿಗಾರ,ರಾಮಕೃಷ್ಣ ಯಾದವ, ಆನಂದ ಬಾಡದ,ಶಿವಕುಮಾರ ವಸ್ತಾರ ಸೇರಿದಂತೆ ಭಕ್ತರುಗಳು ಉಪಸ್ಥಿತರಿದ್ದರು.

About The Author