ಯಾರು ಈ ನಿಖಿಲ್ ಶಂಕರ್..! :: ಶೋಷೀತರ ಪರ ಸಹಾಯ ಹಸ್ತ ಚಾಚಿದಾತ :: ಕರ್ನಾಟಕ ರಾಜ್ಯ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆಗೆ ಸ್ಪರ್ಧೆ 

ಬಸವರಾಜ ಕರೇಗಾರ
basavarajkaregar@gmail.com

ಕವಿಡೆಸ್ಕ.

ನಿಖಿಲ್ ವಿ ಶಂಕರ್ ಕೈಗೊಂಡ ಸಾಮಾಜಿಕ ಕಾರ್ಯಗಳು.

* ಕುರುಬ ಸಮುದಾಯದ ಯುವ ನೇತಾರ.
* ರಾಜ್ಯದ 31 ಜಿಲ್ಲೆಗಳಲ್ಲಿ ಪ್ರವಾಸ.
* ರಾಜ್ಯದ್ಯಂತ ಕುರುಬರ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಮಾಹಿತಿ ಕಲೆ ಹಾಕಿದವರು.
* ಸಮುದಾಯದ ಏಳಿಗೆಗಾಗಿ ಶ್ರಮ.
* ಕಲ್ಯಾಣ ಕರ್ನಾಟಕದ ಗಾಂಧಿ ಕೋಲೂರು ಮಲ್ಲಪ್ಪಾಜಿಯವರ ಸಮಾಧಿಯ ಪುನರುಜ್ಜೀವನ.
* ಮಲ್ಲಪ್ಪಾಜಿಯವರ ಸಮಾಧಿ ಸ್ಮಾರಕವಾಗಿ ನಿರ್ಮಾಣ.
* ವಡಗೇರಾ ತಾಲೂಕಿನ ಹಂಚಿನಾಳ ಗ್ರಾಮದ ನೂತನ ಬೀರಲಿಂಗೇಶ್ವರ ದೇವಸ್ಥಾನಕ್ಕೆ 1 ಲಕ್ಷ ದೇಣಿಗೆ.
* ಸುರಪುರ ಕನಕ ಭವನ ನಿರ್ಮಾಣಕ್ಕೆ 5 ಲಕ್ಷ ದೇಣಿಗೆ.
* ಪ್ರಸ್ತುತ ಕರ್ನಾಟಕ ಯುತ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ

* ಕಲಬುರ್ಗಿ ವಸತಿ ನಿಲಯಕ್ಕೆ ಮೂಲಭೂತ ಸೌಕರ್ಯಗಳ ವ್ಯವಸ್ಥೆ
* ಸಂಚಾರಿ ಕುರಿಗಾರರಿಗೆ ಸಹಾಯ ಹಸ್ತ
* ಜೇನು ಮತ್ತು ಕುರುಬರಿಗೆ ರೇಶನ್ ದಿನ ಸಿ ಪದಾರ್ಥಗಳು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಿಕೊಟ್ಟು ಕೊಟ್ಟರು
* ಬೆಂಗಳೂರಿನ ಎಸ್ಬಿಟಿ ವಸತಿ ನಿಲಯದ ವಿದ್ಯಾರ್ಥಿಗಳ ಮೂಲಭೂತ ಸೌಕರ್ಯಕ್ಕೆ 25 ಲಕ್ಷ ರೂಪಾಯಿ ದೇಣಿಗೆ
* ಚಲನಚಿತ್ರ ನಟ ಮೃತ ರಾಜೇಶನ ಕುಟುಂಬಕ್ಕೆ ಒಂದು ಲಕ್ಷ ರುಪಾಯಿ ಸಹಾಯಧನ
* ಶ್ರೀ ರೇವಣಸಿದ್ದೇಶ್ವರ ಮಠದಿಂದ ಕುರುಬ ಯುವ ರತ್ನ ಪ್ರಶಸ್ತಿ ಪಡೆದಾತ
* ಪ್ರಸ್ತುತ ಕರ್ನಾಟಕ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಗೆಲ್ಲುವ ವಿಶ್ವಾಸ.
* ಆನ್ಲೈನ್ ಮೂಲಕ With IYC ಮ್ಯಾಪ್ ಮೂಲಕ ಮತದಾನ ಮಾಡಲು ಮನವಿ.

ಸದಾ ಸಮಾಜ ಸೇವೆಯಲ್ಲಿ ತೊಡಗಿ ಕುರುಬ ಸಮುದಾಯಕ್ಕೆ ಹಗಲಿರುಳು ಶ್ರಮಿಸುತ್ತಿರುವ ಯುವನೇತಾರ ನಿಖಿಲ್ ವಿ ಶಂಕರ್  ಕರ್ನಾಟಕದ 31 ಜಿಲ್ಲೆಗಳಲ್ಲಿ ಪ್ರವಾಸಗೈದು ಕುರುಬ (ಕಾಡು ಕುರುಬ, ಬೆಟ್ಟಕುರುಬ, ಜೇನುಕುರುಬ) ಸಮುದಾಯದ ಬಗ್ಗೆ ಮಾಹಿತಿ ಕಲೆ ಹಾಕಿ, ಸಮುದಾಯದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ. ಸಾವಿರಾರು ಸಾಮಾಜಿಕ ಕೆಲಸ ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವೆಂದರೆ ಹೈದರಾಬಾದ್ ಕರ್ನಾಟಕದ ಗಾಂಧಿ ಎಂದೇ ಖ್ಯಾತರಾದ ಕೊಲೂರು ಮಲ್ಲಪ್ಪನವರ ಸಮಾಧಿಯನ್ನು ಪುನರುಜ್ಜೀವನಗೊಳಿಸಿ ಒಂದು ಅದ್ಭುತ ಸ್ಮಾರಕವನ್ನು ಮಾಡಿ ರಾಜ್ಯವೇ ಗಮನ ಸೆಳೆಯುವಂತೆ ಮಾಡಿದ್ದಾರೆ.

ಸುರಪುರದಲ್ಲಿ ಕನಕ ಭವನ ನಿರ್ಮಾಣಕ್ಕಾಗಿ ದೇಣಿಗೆ ನೀಡಿದ್ದಾರೆ. ವಡಗೇರಿ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ನೂತನ ಬೀರಲಿಂಗೇಶ್ವರ ದೇವಸ್ಥಾನ ನಿರ್ಮಾಣಕ್ಕೆ ಒಂದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.ಇದು ಕೆಲವು ಉದಾಹರಣೆ ಮಾತ್ರ.ಅಹಿಂದ ನಾಯಕರು ಹಾಗೂ ರಾಜ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಪರ ಗಟ್ಟಿಧ್ವನಿ ಹೊಂದಿರುವ ಇಂತಹ ಮೇರುವ್ಯಕ್ತಿಗೆ ಕುರುಬ ಸಮುದಾಯ ಯಾವತ್ತೂ ಕೂಡಾ ಬೆಂಬಲವಾಗಿ ನಿಲ್ಲಬೇಕಾಗಿದೆ. ಸಿದ್ದರಾಮಯ್ಯ ಅವರ ನಂತರ ಕುರುಬ ಸಮುದಾಯಕ್ಕೆ ಹೊಸ ನಾಯಕತ್ವದ ಅವಶ್ಯಕತೆ ತುಂಬಾ ಇದೆ.ಸಿದ್ದರಾಮಯ್ಯನವರ ಹಾದಿಯಲ್ಲಿ ಸಾಮಾಜಿಕ ನ್ಯಾಯಪರ ನಿಂತ ನಿಯಕ.ಕುರುಬ ಸಮುದಾಯದ ಪ್ರಸ್ತುತ ಕರ್ನಾಟಕ ರಾಜ್ಯ ಯೂತ್ ಕಾಂಗ್ರೆಸ್ ನಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿದ್ದು, ಪ್ರಸ್ತುತ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದಾರೆ.ಆದ ಕಾರಣ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರ ಹಾಗೂ 28 ಲೋಕಸಭಾ ಕ್ಷೇತ್ರದಲ್ಲಿರುವ ಸಮಸ್ತ ಕುರುಬ ಸಮುದಾಯದ ಬಂಧುಗಳು ಪಕ್ಷಾತೀತವಾಗಿ ಆನ್ಲೈನ್ ಮೂಲಕ ಮತದಾನ ಮಾಡಿ ಅವರ ವಿಜಯಕ್ಕೆ ಕಾರಣಿಭೂತರಾಗಬೇಕೆಂದು ಈ ಮೂಲಕ ಮನವಿ ಮಾಡುತ್ತೇವೆ.

ಕಲಬುರ್ಗಿ ನಗರದ ಕರ್ನಾಟಕ ಪ್ರದೇಶ ಕುರುಬರ ಸಂಘದ  ಅಡಿಯಲ್ಲಿ ನಡೆಯುತ್ತಿರುವ ಪ್ರಶಾಂತ ನಗರ ರಾಜಪುರದ ವಸತಿ ನಿಲಯಕ್ಕೆ ಸುಮಾರು ವರ್ಷಗಳಿಂದ ವಿದ್ಯುತ್ ಬಿಲ್ ಪಾವತಿ ಮಾಡದೆ ಹಾಗೆ ಉಳಿಸಿಕೊಳ್ಳಲಾಗಿತ್ತು.ಇದರಿಂದ ವಿದ್ಯುತ್ತನ್ನು ಕಡಿತಗೊಳಿಸಲಾಗಿತ್ತು. ಇದನ್ನರಿತ ಕರ್ನಾಟಕ ರಾಜ್ಯ ಯೂಥ್ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ನಿಖಿಲ್ ವಿ  ಶಂಕರ್ ವಸತಿ ನಿಲಯಕ್ಕೆ ಭೇಟಿ ನೀಡಿ ಸುಮಾರು 39000 ವಿದ್ಯುತ್ ಬಿಲ್ಲನ್ನು ಪಾವತಿಸಿ ವಿದ್ಯಾರ್ಥಿಗಳಿಗೆ ವಿದ್ಯುತ್ ಒದಗಿಸಿ ಕೊಟ್ಟರು. ವಿದ್ಯುತ್ ನಿಲಯದಲ್ಲಿ ನೀರಿನ ಸಮಸ್ಯೆ ಇದ್ದು ಅದಕ್ಕಾಗಿ ವಿದ್ಯುತ್ ಮೋಟಾರ್ ರಿಪೇರಿ ಮಾಡಿಸಿ ವಿದ್ಯಾರ್ಥಿಗಳಿಗೆ ವ್ಯಾಸಂಗ ಮಾಡುವುದಕ್ಕೆ ಅನುಕೂಲವಾಗುವಂತೆ ಮಾಡಿಕೊಟ್ಟರು. ವಸತಿ ನಿಲಯದ ಮೂಲಭೂತ ಸೌಲಭ್ಯ ಶೌಚಾಲಯ ವ್ಯವಸ್ಥೆ ಸುಸ್ಥಿರಗೊಳಿಸಿದರು. ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು. 
ಸಂಚಾರಿ ಕುರಿಗಾರರಿಗೆ ಸಹಾಯಕ್ಕೆ ದಾವಿಸಿದ ನಿಖಿಲ್ 
ಕೊರೊನಾ ಸಂದರ್ಭದಲ್ಲಿ ದೇಶದಲ್ಲಿ ಲಾಕ್ಡೌನ್ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಸಂಚಾರಿ ಕುರಿಗಾರರ ಸ್ಥಿತಿ ಗಂಭೀರವಾಗಿತ್ತು. ಸಂಚಾರಿ ಕುರಿಗಾರರು ಊರೋಳಗೆ ಬಿಟ್ಟುಕೊಳ್ಳುತ್ತಿರಲಿಲ್ಲ. ಮಳೆ ಬಂದರೆ ಶೆಡ್ಡುಗಳನ್ನು ಹಾಕಿಕೊಂಡು ಕಾಡಿನೊಳಗೆ ಜೀವನ ಸಾಗಿಸುತ್ತಿದ್ದರು. ಸರಿಯಾಗಿ ಕುರಿಗಳಿಗೆ ಕುರಿಗಾರರಿಗೆ ಔಷಧಿ ಕೂಡ ಸಿಗುತ್ತಿರಲಿಲ್ಲ. ಅಂತಹ ಸಂದರ್ಭದಲ್ಲಿ ನಿಖಿಲ್ ಶಂಕರ್ ಕಾಡಿನೊಳಕ್ಕೆ ಹೋಗಿ ಸಂಚಾರಿ ಕುರಿಗಾರರನ್ನು ಭೇಟಿ ಮಾಡಿ ತಿಂಗಳಿಗಾಗುವಷ್ಟು ಆಹಾರ ಪದಾರ್ಥಗಳನ್ನು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.
ಕಾಡುಗಳಲ್ಲಿ ವಾಸಿಸುತ್ತಿರುವ ಜೇನು, ಕಾಡು ಕುರುಬರಿಗೆ ಸಹಾಯ ಹಸ್ತ ಚಾಚಿದ ನಿಖಿಲ್ ಶಂಕರ್ 
1970ರಲ್ಲಿಯೇ ಕೇಂದ್ರ ಸರಕಾರ ಕಾಡು ಮತ್ತು ಜೇನು ಕುರುಬರಿಗೆ ಪರಿಶಿಷ್ಟ ಪಂಗಡದ ಮೀಸಲಾತಿ ನೀಡಿದೆ. ಆದರೆ ಸರ್ಕಾರದ ಸೌಲಭ್ಯಗಳು ಅವರಿಗೆ ಒದಗಿಸಿಕೊಡುವವರು ಯಾರು ಎನ್ನುವ ಪ್ರಶ್ನೆ ಇಂದಿಗೂ ಬಲವಾಗಿ ಕಾಡುತ್ತಿದೆ. ಕಾಡಿನೊಳಗೆ ಜೀವನ ಸಾಗಿಸುತ್ತಿರುವ ಜೇನು ಮತ್ತು ಕಾಡು ಕುರುಬರನ್ನು ಮುಖ್ಯ ವಾಹಿನಿಗೆ ತರಲು ಸರಕಾರ ಪ್ರಯತ್ನಿಸಿತು. ಕಾಡಿನೊಳಗೆ ಇವರನ್ನು ಬರದಂತೆ ತಡೆಯಿತು. ಹಳ್ಳಿ ಮತ್ತು ನಗರಕ್ಕೆ ಬಂದರು ಇಲ್ಲಿನ ವಾತಾವರಣಕ್ಕೆ ಇಂದಿಗೂ ಈ ಜನಾಂಗ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನ ಸ್ಲಂನಲ್ಲಿ ವಾಸವಾಗಿದ್ದಾರೆ. ರಾಜ್ಯದಲ್ಲಿ ಮೂರನೇ ಅತಿ ದೊಡ್ಡ ಸಮಾಜ ಕುರುಬ ಸಮಾಜ. ಆದರೆ ರಾಜಕೀಯ,ಶೈಕ್ಷಣಿಕ,ಆರ್ಥಿಕ, ಸಾಮಾಜಿಕವಾಗಿ ದುರ್ಬಲರಾಗಿದ್ದಾರೆ.  ಶೇ. 20ರಷ್ಟು ಜನ ಸರಕಾರದ ಸೌಲಭ್ಯ ಪಡೆದುಕೊಂಡರೆ,ಶೇ. 80ರಷ್ಟು ಜನ ತಮ್ಮ ಮೂಲಕಸುಬನ್ನು ಆಧರಿಸಿ ಹಳ್ಳಿಗಳಲ್ಲಿ ಇಂದಿಗೂ ಜೀವನ ಸಾಗಿಸುತ್ತಿದ್ದಾರೆ.ಎಸ್ಟಿ ಪ್ರಮಾಣ ಪತ್ರ ಇದ್ದರೂ ಸೌಲಭ್ಯಗಳು ಸಿಗುತ್ತಿಲ್ಲ. ಇಂದಿಗೂ ಕೂಲಿ ಮಾಡಿ ಬದುಕುತ್ತಿದ್ದಾರೆ. ರಾಜಕಾರಣಿಗಳು ಸೇರಿದಂತೆ ಯಾವ ಜನ ಪ್ರತಿನಿಧಿಗಳು ಕೂಡ ಇವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಇವರಿಗೆ ಸ್ವಂತ ಮನೆ ಇಲ್ಲದೆ ಜೀವನ ಸಾಗಿಸುತ್ತಿದ್ದಾರೆ.ಇವರ ಸ್ಥಿತಿಯನ್ನು ಅರಿತ ನಿಖಿಲ್ ವಿ ಶಂಕರ್ ಭೇಟಿ ನೀಡಿ ಅಕ್ಕಿ ದಿನಸಿ ಪದಾರ್ಥಗಳು, ಎಣ್ಣೆ, ಚಾಪಿ, ಕಂಬಳಿ, ಸೋಲಾರ್ ಲ್ಯಾಂಪ್ ಗಳು, ತೊಡಲು ಬಟ್ಟೆಗಳು ಸೇರಿದಂತೆ ಅಪಾರ ಪ್ರಮಾಣದಲ್ಲಿ ರೇಷನ್ ಗಳನ್ನು ಒದಗಿಸಿ ಕೊಟ್ಟಿದ್ದಾರೆ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಭರವಸೆ ನೀಡಿದ್ದಾರೆ.

ಬೆಂಗಳೂರಿನ ಎಸ್ಬಿಟಿ ಹಾಸ್ಟೆಲ್ನಲ್ಲಿ 300ರಲ್ಲಿ ಶಾಲಾಮಕ್ಕಳ ವಿದ್ಯಾಭ್ಯಾಸ ಸಂಕಷ್ಟದ ಪರಿಸ್ಥಿತಿಯಲ್ಲಿ ಇರುವಾಗ ಬೀದಿ ಬದಿ ಮಲಗುತ್ತಿದ್ದ ಮಕ್ಕಳನ್ನು ನೋಡಿ ಮರುಗಿದ ನಿಖಿಲ್ ವಿ ಶಂಕರ್ ಆ ಮಕ್ಕಳ ನೆರವಿಗೆ ಧಾವಿಸಿ 25 ಲಕ್ಷದ ರೂಪಾಯಿ ಬೆಡ್, ಕಾಟ, ಸೇರಿದಂತೆ ಇತರ ಸೌಲಭ್ಯಗಳನ್ನು ಒದಗಿಸಿ ಕೊಟ್ಟಿದ್ದಾರೆ. 

ರಾಜೇಶನ ಕುಟುಂಬಕ್ಕೆ ನೆರವಾದ ನಿಖಿಲ್ ವಿ ಶಂಕರ್ 
ರಾಜೇಶ್ ಎನ್ನುವ ಜೇನು ಕುರುಬ ಪುನೀತ್ ಅಭಿಮಾನಿಯಾಗಿದ್ದು, ಜಾಕಿ ಚಲನಚಿತ್ರದಿಂದ ಪ್ರಭಾವಿತನಾಗಿ ಜಂಗಲ್ ಜಾಕಿ ಎನ್ನುವ ಚಲನಚಿತ್ರವನ್ನು ಆರಂಭಿಸಿ ಅದರಿಂದ ಸಂಭಾವನೆ ಬಾರದೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದನು. ಇದರಿಂದ ಮಾನಸಿಕ ಅಸ್ವಸ್ಥನಾದ ರಾಜೇಶ ಹುಚ್ಚು ವರ್ತನೆಯಿಂದ 2013ರಲ್ಲಿ ಆತ್ಮಹತ್ಯೆ ಮಾಡಿಕೊಂಡನು. ಮುಗ್ಧ ತಾಯಿ ತಂದೆ ಅಕ್ಕ ಮತ್ತು ಪತ್ನಿ ಮಕ್ಕಳನ್ನು ಕಳೆದುಕೊಂಡನು. ಸರ್ಕಾರದಿಂದ ಯಾವ ಸಹಾಯವನ್ನು ಸಿಗದ ರಾಜೇಶ್ ಕುಟುಂಬಕ್ಕೆ ನಿಖಿಲ್ ಶಂಕಲ್ ಒಂದು ಲಕ್ಷ ರೂಪಾಯಿ ಧನಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಕರ್ನಾಟಕ ಪ್ರದೇಶ ಯೂಥ್ ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ನಿಖಿಲ್ ಶಂಕರ್ ಅತ್ಯಂತ ಕಿರಿಯ ವಯಸಿನಲ್ಲಿಯೇ ಇಂತಹ ಸಮಾಜ ಸೇವೆಯನ್ನು ಗುರುತಿಸಿ  ಧಾರವಾಡದ ಶ್ರೀ ಕ್ಷೇತ್ರ ರೇವಣಸಿದ್ದೇಶ್ವರ ಮಹಾಮಠದ ವತಿಯಿಂದ ಇತಿಹಾಸದಲ್ಲಿ ಪ್ರಥಮ ಬಾರಿಗೆ ಕುರುಬ ಯುವ ರತ್ನ ಬಿರುದಿನೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

About The Author