ಬಸವರಾಜ ಕರೇಗಾರ
ಸಿದ್ದರಾಮಯ್ಯ ರಾಜ್ಯದಲ್ಲಿ ಅಷ್ಟೇ ಅಲ್ಲ ರಾಷ್ಟ್ರದಲ್ಲಿ ಪವರ್ ಫುಲ್ ಲೀಡರ್. ಸದಾ ಶೋಷಿತರ ಪರ ನಿಂತು ಸಮಾಜದಲ್ಲಿ ಕಟ್ಟ ಕಡೆಯ ಜನರಿಗೂ ಸರ್ಕಾರದ ಸೌಲಭ್ಯಗಳನ್ನು ಮುಟ್ಟಬೇಕು ಎನ್ನುವ ಮಹತ್ವಾಕಾಂಕ್ಷೆಯನ್ನು ಇಟ್ಟುಕೊಂಡು ರಾಜಕೀಯಕ್ಕೆ ಬಂದ ನೇತಾರ. ಯಾವ ನೇತಾರರಿಗೂ ಹೆದರದೆ ತಮ್ಮದೇ ಶೈಲಿಯಲ್ಲಿ ಉತ್ತರ ನೀಡುವ ಎದೆಗಾರಿಕೆ ಇರುವ ನಾಯಕ. ಅಂತಹ ವ್ಯಕ್ತಿಯನ್ನು ಇಂದು ಬಿಜೆಪಿ ಮತ್ತು ಜೆಡಿಎಸ್ ನವರು ಒಟ್ಟುಗೂಡಿ ಹೇಗಾದರೂ ಮಾಡಿ ರಾಜಕೀಯವಾಗಿ ಮುಗಿಸಲೇಬೇಕು ಎನ್ನುವ ದೃಷ್ಟಿಯಿಂದ ಏನೀಲ್ಲದ ಪ್ರಯತ್ನಗಳು ನಡೆಯುತ್ತಿವೆ. ಒಬ್ಬ ಶೋಷಿತ ನಾಯಕರನ್ನು ಕಂಡರೆ ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಆಗುವುದಿಲ್ಲ. ಹಿಂದುಳಿದ ನಾಯಕನೊಬ್ಬರು ಯಶಸ್ವಿಯಾಗಿ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿ ಮತ್ತೊಂದು ಅವಧಿಗೆ ಮುಖ್ಯಮಂತ್ರಿ ಆಗುವುದು ಬಿಜೆಪಿ ಮತ್ತು ಜೆಡಿಎಸ್ ನವರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಎಷ್ಟೊಂದು ಹೊಟ್ಟೆ ಉರಿ ಎಂದರೆ ಮೂಡಾ ಹಗರಣವನ್ನು ಮುಂದಿಟ್ಟುಕೊಂಡು ಸಿದ್ದರಾಮಯ್ಯನವರನ್ನು ಒಂದು ದಿನವಾದರೂ ಜೈಲಿಗಟ್ಟಬೇಕು. ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲೇಬೇಕು ಎನ್ನುವ ದೃಷ್ಟಿಯಿಂದ ಎಲ್ಲಿಲ್ಲದ ಪ್ರಯತ್ನ ನಡೆಯುತ್ತಿದೆ. ಇದರಲ್ಲಿ ಕೆಲವು ಕಾಂಗ್ರೆಸ್ ನಾಯಕರ ಕೈವಾಡವು ಇರಬಹುದು. 2014ರಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಗುಜರಾತ್ ರಾಜ್ಯದ ವಜುಬಾಯಿ ವಾಲಾ ರವರು ರಾಜ್ಯದ ರಾಜ್ಯಪಾಲರಾಗಿದ್ದರು. ಸಂವಿಧಾನಕ್ಕೆ ಬದ್ಧವಾದ ವ್ಯಕ್ತಿ. ಪ್ರಧಾನಿ ನರೇಂದ್ರ ಮೋದಿಯವರ ಪರಮಾಪ್ತರು.ಅಂತಹವರ ಕೈಯಲ್ಲಿ ಯಶಸ್ವಿಯಾಗಿ ನಾಲ್ಕು ವರ್ಷಗಳ ಕಾಲ ಆಡಳಿತ ನಡೆಸಿದ್ದರು.
ಸಿದ್ದರಾಮಯ್ಯನವರು ಎಲ್ಲಾ ಸಮುದಾಯಗಳಿಗೂ ಬೇಕಾದ ನಾಯಕರು. ಲಿಂಗಾಯತ, ಮುಸ್ಲಿಂ, ಒಕ್ಕಲಿಗರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೂ ಕೂಡ ಸಿದ್ದರಾಮಯ್ಯನವರು ಎಂದರೆ ಎಲ್ಲಿಲ್ಲದ ಪ್ರೀತಿ. ರಾಜ್ಯದ ತುಂಬೆಲ್ಲ ಕುರುಬರಿದ್ದಾರೆ. ಸಿದ್ದರಾಮಯ್ಯನವರು ಯಾವ ಕಾಲಕ್ಕೂ ತಮ್ಮ ಸಮುದಾಯದವರಿಗೆ ಮತ ಹಾಕು ಎಂದು ಹೇಳಲಿಲ್ಲ. ಚುನಾವಣೆಯಲ್ಲಿ ಸಿದ್ದರಾಮಯ್ಯನವರು ಯಾವ ಪಕ್ಷಕ್ಕೆ ಮತ ಹಾಕು ಎಂದರೆ ಕುರುಬರು ಸೇರಿದಂತೆ ಶೋಷಿತರೆಲ್ಲರೂ ಆ ಪಕ್ಷಕ್ಕೆ ಮತ ಹಾಕುತ್ತಾರೆ. ಅಷ್ಟೊಂದು ಪ್ರಭಾವಶಾಲಿ ನಾಯಕ. ಯಾವ ಕಾಲಕ್ಕೂ ತನ್ನ ಸಮುದಾಯವನ್ನು ಸಮರ್ಥಿಸಿಕೊಳ್ಳದೆ ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದುಕೊಟ್ಟವರು. ಅವರು ಮನಸ್ಸು ಮಾಡಿದ್ದರೆ ದಾವಣಗೆರೆ ಸೇರಿದಂತೆ ಇತರ ಕಡೆ ಕುರುಬ ಸಮುದಾಯದವರು ಚುನಾವಣೆಯಲ್ಲಿ ನಿಂತರು ಅವರಿಗೆ ಮತ ಹಾಕಿ ಗೆಲ್ಲಿಸಬಹುದಿತ್ತು. ಆದರೆ ಪಕ್ಷಕ್ಕೆ ಯಾವತ್ತೂ ದ್ರೋಹ ಮಾಡಲಿಲ್ಲ. ನಿಮ್ಮ ಪಕ್ಷದ ಅಭ್ಯರ್ಥಿಗೆ ಮತ ಹಾಕು ಎಂದು ನೇರವಾಗಿ ಹೇಳಿದವರು. ಅದಕ್ಕಾಗಿಯೇ ಸಿದ್ದರಾಮಯ್ಯನವರು ಎಂದರೆ ಎಲ್ಲ ಜನರ ಅಚ್ಚುಮೆಚ್ಚಿನ ನಾಯಕ. ಸಿಎಂ ಸಿದ್ದರಾಮಯ್ಯನವರ ಯೋಜನೆಗಳು ರಾಜ್ಯದಾಚೆಗೆ ಹರಡಿವೆ. ಆಂಧ್ರಪ್ರದೇಶ ಸೇರಿದಂತೆ ಇತರ ರಾಜ್ಯಗಳಲ್ಲಿ ಜಾರಿಗೆ ತಂದಿದ್ದಾರೆ.ಅಂತಹ ಮಹತ್ವದ ಯೋಜನೆಗಳನ್ನು ಸಿದ್ದರಾಮಯ್ಯನವರು ಜಾರಿಗೆ ತಂದರು.
ಮುಂದುವರೆಯಲಿದೆ…..