ಶಹಾಪುರ : ಯಾದಗಿರಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಅಮಿನ ರೆಡ್ಡಿ ಯಾಳಗಿ ಹುಟ್ಟು ಹಬ್ಬದ ನಿಮಿತ್ತ ಶಹಾಪುರ ನಗರದ ಭೀಮರಾಯನ ಗುಡಿಯ ಬಲ ಭೀಮೇಶ್ವರ ದೇವಸ್ಥಾನದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ನಗರದ ವಾರ್ಡ್ ನಂ.1 ರ ಫಿಲ್ಟರ್ ಬೆಡ್ ನಲ್ಲಿರುವ ವೃದ್ಧಾಶ್ರಮಕ್ಕೂ ಭೇಟಿ ನೀಡಿದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹಣ್ಣು ಹಂಪನ ವಿತರಿಸಿದರು. ಅದೇ ರೀತಿ ಶಾಲಾ ಮಕ್ಕಳಿಗೆ ಪುಸ್ತಕ ಪೆನ್ನುಗಳನ್ನು ನೀಡಿದರು.

ಬಿಜೆಪಿ ನಗರ ಮಂಡಲ ಅಧ್ಯಕ್ಷರಾದ ಚಂದ್ರಶೇಖರ್ ಯಾಳಗಿ,
ಬಿಜೆಪಿ ಯುವ ಮೋರ್ಚಾದ ಉಪಾಧ್ಯಕ್ಷರಾದ ಚಿದಾನಂದ ಪಾಟೀಲ್, ವೀರೇಶ್ ಚುಂಗಿ, ಪ್ರಧಾನ ಕಾರ್ಯದರ್ಶಿ ಪ್ರಭಾಕರ ದೊಡ್ಮನಿ, ಮಹಿಬೂಬ ಪಟೇಲ್, ಪಜಾ ಮೋರ್ಚಾದ ಉಪಾಧ್ಯಕ್ಷರಾದ ಶರಣು ತಳವಾರ, ಪ್ರಧಾನ ಕಾರ್ಯದರ್ಶಿ ಶಿವಕುಮಾರ, ಶಂಕರ ದೊರೆ ಸೇರಿದಂತೆ ಇತರರು ಇದ್ದರು.
Post Views: 116